ಜನವರಿ 9ರಂದು ಯಾವ ದಿನವನ್ನು ಆಚರಿಸಲಾಗುತ್ತದೆ. ಇದರ ಹಿನ್ನೆಲೆ ಏನು? ಈ ದಿನದ ವಿಶೇಷತೆಗಳ ಬಗ್ಗೆ ತಿಳಿದುಕೊಳ್ಳೋಣ.
ಪ್ರವಾಸಿ ಭಾರತೀಯ ದಿವಸ್
1915ರಿಂದ ಪ್ರತೀ ವರ್ಷ ಜನವರಿ 9ರಂದು ಪ್ರವಾಸಿ ಭಾರತೀಯ ದಿವಸ್ ಆಚರಿಸಲಾಗುತ್ತದೆ. ಭಾರತದ ಅಭಿವೃದ್ಧಿಯಲ್ಲಿ ಭಾರತದ ಕೊಡುಗೆಯನ್ನು ಸಾರಲು ಈ ದಿನವನ್ನು ಆಚರಿಸುತ್ತಾರೆ. 1915ರಲ್ಲಿ ಮಹಾತ್ಮಾಗಾಂಧಿ ಅವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಹಿಂತಿರುಗಿ ಭಾರತದ ಸ್ವಾತಂತ್ರ್ಯವನ್ನು ಮುನ್ನಡೆಸಿದರು ಮತ್ತು ಭಾರತೀಯರ ಹೋರಾಟವನ್ನು ಶಾಶ್ವತವಾಗಿ ಬದಲಾಯಿಸಿದ ದಿನದಂದು ಪ್ರವಾಸಿ ಭಾರತೀಯ ದಿವಸ್ ದಿನವನ್ನು ಆಚರಿಸಲು ನಿರ್ಧರಿಸಿತು.
1927 ಜ.9 ಭಾರತೀಯ ಖ್ಯಾತ ಗರ್ವಾಲಿ ಪರಿಸರವಾದಿ ಮತ್ತು ಚಿಪ್ಕೋ ಚಳುವಳಿಯ ನಾಯಕರಾದ ಸುಂದರ್‌ಲಾಲ್ ಬಹುಗುಣರವರ ಜನ್ಮದಿನವಾಗಿದೆ.
2000 ಜ.9 ಹಿಮಾದಾಸ್ ಅಸ್ಸಾಂ ಆಟಗಾರ್ತಿಯ ಹುಟ್ಟುಹಬ್ಬವಾಗಿದೆ.
1923 ಭಾರತದಲ್ಲಿ ಸ್ವರಾಜ್ ಪಕ್ಷವನ್ನು ಚಿತ್ತರಂಜನ್‌ದಾಸ್ ಅಧ್ಯಕ್ಷರಾಗಿ ಮತ್ತು ಮೋತಿಲಾಲ್ ನೆಹರು ಕಾರ್ಯದರ್ಶಿಯಾಗಿ ಸ್ಥಾಪಿಸಿದರು.
2002ರಲ್ಲಿ ಅಮೇರಿಕನ್ ಸಂಗೀತ ಪ್ರಶಸ್ತಿಗಳಲ್ಲಿ ಮೈಕಲ್ ಜಾಕ್ಸನ್ ಶತಮಾನದ ಕಲಾವಿದ ಪ್ರಶಸ್ತಿಯನ್ನು ಪಡೆದರು.