ಭಾರತದಲ್ಲಿ ಕ್ರೇಝ್ ಹುಟ್ಟಿಸಿದ್ದ ಚೀನಾ ಮೂಲದ ಟಿಕ್ ಟಾಕ್ ಮೊಬೈಲ್ ಆ್ಯಪ್ ಸೇರಿದಂತೆ ಒಟ್ಟು 59 ಚೀನಾ ನಿರ್ಮಿತ ಆ್ಯಪ್ ಗಳಿಗೆ ಕೇಂದ್ರಸರಕಾರ ನಿಷೇಧ ಹೇರಿದೆ.ಲಡಾಕ್ ಗಡಿ ವಿವಾದ ಆರಂಭವಾದಾಗಿನಿಂದಲೂ ದೇಶದಾದ್ಯಂತ ಚೀನಾ ವಿರುದ್ಧ ಧ್ವನಿ ಮೊಳಗಿತ್ತು. ಚೀನಾಕ್ಕೆ ಪಾಠ ಕಲಿಸಲು, ಭಾರತದಲ್ಲಿ ಜನಪ್ರಿಯಗೊಂಡಿದ್ದ ಚೀನಾ ಮೂಲದ ಟಿಕ್ ಟಾಕ್ ಆ್ಯಪ್ ನಿಷೇಧಿಸಬೇಕೆಂಬ ಆಗ್ರಹ ಹೆಚ್ಚಾಗಿ ಕೇಳಿಬಂದಿತ್ತು. ಈ ಒತ್ತಾಯಗಳು ಜೊತೆಗೆ ಚೀನಾ ಮೊಬೈಲ್ ಆ್ಯಪ್ ನಿಂದ ದೇಶದ ಸುರಕ್ಷತೆಗೆ ಅಪಾಯವಿದೆ. ಈ ಆ್ಯಪ್ ಗಳ ಮೂಲಕ ಜನರ ವೈಯಕ್ತಿಕ ಮಾಹಿತಿಗಳನ್ನು ಕದಿಯಲಾಗುತ್ತಿದೆ ಎಂಬ ದೂರುಗಳೂ ಕೇಳಿಬಂದಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಭಾರತದ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ 59 ಆ್ಯಪ್ ಗಳನ್ನು ನಿಷೇಧಿಸಿ ಆದೇಶಿಸಿದೆ.
ಕೇಂದ್ರ ಐಟಿ ಮತ್ತು ದೂರಸಂಪರ್ಕ ಖಾತೆ ಸಚಿವ ರವಿಶಂಕರ್ ಪ್ರಸಾದ್ ತಮ್ಮ ಟ್ವೀಟ್ ನಲ್ಲಿ ದೇಶದ ಸುರಕ್ಷತೆಯ ದೃಷ್ಟಿಯಿಂದ ಸರಕಾರ ಈ ಆ್ಯಪ್ ಗಳನ್ನು ನಿಷೇಧಿಸಿದೆ ಎಂಬುದಾಗಿ ತಿಳಿಸಿದ್ದಾರೆ.
For safety, security, defence, sovereignty & integrity of India and to protect data & privacy of people of India the Government has banned 59 mobile apps.
Jai Hind! 🇮🇳— Ravi Shankar Prasad (@rsprasad) June 29, 2020
ಉಳಿದಂತೆ ಶೇರ್ ಇಟ್, ಯು ಸಿ ಬ್ರೌಸರ್, ಹೆಲೋ, ಯೂ ಕ್ಯಾಮ್ ಮೇಕಪ್, ವೈರಸ್ ಕ್ಲೀನರ್,ಕ್ಲಬ್ ಫ್ಯಾಕ್ಟ್ರಿ ಇವೇ ಮುಂತಾದವು ಪಟ್ಟಿಯಲ್ಲಿ ಸೇರಿಕೊಂಡಿರುವ ಇತರ ಜನಪ್ರಿಯ ಆ್ಯಪ್ ಗಳಾಗಿವೆ. ಈ ಪೈಕಿ ಹೆಚ್ಚಿನವು ಈ ಮೊದಲೇ ನಿಷೇಧಿಸಲಾದ ಆ್ಯಪ್ ಗಳು ಎನ್ನಲಾಗಿದೆ.