ವಾಣಿಜ್ಯ ಜಾಹಿರಾತು

ತುಂಬೆ ಗಿಡ ಹಳ್ಳಿಗಳಲ್ಲಿ ಸರ್ವೇಸಾಮಾನ್ಯವಾಗಿ ಕಾಣಸಿಗುವ ಔಷಧೀಯ ಸಸ್ಯ. ಈ ಗಿಡಕ್ಕೆ ಆಯುರ್ವೇದದಲ್ಲಿ ಬಹಳ ಪ್ರಮುಖ ಸ್ಥಾನವಿದೆ. ಲ್ಯೂಕಾಸ್  ಅಸ್ಪೆರ ( leucas aspera ) ಎಂಬ ವೈಜ್ಞಾನಿಕ ಹೆಸರಿನಿಂದ ಕರೆಯಲ್ಪಡುವ ಈ ಸಸ್ಯ  ಸರ್ವರೋಗಕ್ಕೂ ರಾಮಬಾಣವೆಂದೇ ಹೇಳಲಾಗುತ್ತದೆ. ಪ್ರಮುಖವಾಗಿ ಇದು ಕೀಟನಾಶಕವಾಗಿದೆ ಅಂದರೆ ಈ ಗಿ ಡ ಮನೆಯಲ್ಲಿದ್ದರೆ ಕೀಟಗಳು ಮನೆಯ ಬಳಿ ಸುಳಿಯುವುದಿಲ್ಲ. ಹಾಗು ಜ್ವರ, ಶೀತ, ಕಫ, ಉಬ್ಬಸ ನಿವಾರಣೆಗೆ  ಈ ಸಸ್ಯ ರಾಮಬಾಣ.  ಜ್ವರ, ಶೀತ, ಕೆಮ್ಮು  , ಕಫ ಇದ್ದಾಗ ಗಿಡವನ್ನು ಜಜ್ಜಿ ಸ್ವಲ್ಪ ರಸ ಸೇವಿಸಿದರೆ  ರೋಗ ವಾಸಿಯಾಗುತ್ತದೆ. ಹಿಂದಿನ ಕಾಲದಲ್ಲಿ ಜ್ವರ ಬಂದಾಗ ಇದನ್ನೇ ಚಿಕಿತ್ಸೆಗೆ ಬಳಸುತ್ತಿದ್ದರು.  ಈ ಗಿಡದಲ್ಲಿ ರೋಗನಿರೋಧಕ ಶಕ್ತಿ ಇದ್ದು ರಸ ಸೇವಿಸಿದರೆ ನಮ್ಮ ಆರೋಗ್ಯ ವೃದ್ಧಿಸುತ್ತದೆ.

ಇನ್ನು ಸಣ್ಣ ಮಕ್ಕಳಿಗೆ ಚಿನ್ನೆಗೆ ಮದ್ದು ಕೊಡಲು ಈ ಸಸ್ಯವನ್ನು ಬಳಸುತ್ತಾರೆ. ತುಂಬೆಯ ಎಲೆಗೆ ಈರುಳ್ಳಿ ಹಾಕಿ ಜಜ್ಜಿ ರಸ ತೆಗೆದು ಕುಡಿಯಲು ಕೊಡುತ್ತಾರೆ. ಮಕ್ಕಳಲ್ಲಿ ಕಫ ನಿವಾರಣೆಗೆ ಕೂಡ ಈ ರಸವನ್ನು ಬಳಸುತ್ತಾರೆ.ಮತ್ತೊಂದು ವಿಶೇಷ ಅಂದ್ರೆ ಇದರ ಹೂವು ಶಿವನಿಗೆ  ಬಲುಪ್ರಿಯವಾದ ಹೂವು ಎನ್ನಲಾಗುತ್ತದೆ

 

 

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.