ವಾಣಿಜ್ಯ ಜಾಹಿರಾತು

ನವದೆಹಲಿ: ಸಂಕಟಗಳು ಎಷ್ಟೇ ಬರಲಿ, ಈ ಸಂಕಟಗಳ ನಡುವೆ ಮುನ್ನಡೆಯಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ‘ಮನ್ ಕೀ ಬಾತ್’ ಕಾರ್ಯಕ್ರಮದಲ್ಲಿ ದೇಶದ ಜನತೆಗೆ ಹುರಿದುಂಬಿಸಿದ್ದಾರೆ. ೨೦೨೦ನೇ ವರ್ಷ ಕರಾಳ ಎಂಬಂತೆ ಹೆಚ್ಚಿನವರು ಮಾತನಾಡುತ್ತಿದ್ದಾರೆ. ಅದಕ್ಕೆ ಪೂರಕವಾಗಿ ಒಂದಕ್ಕಿಂತ ಒಂದು ಕಷ್ಟಗಳು ಈ ವರ್ಷದಲ್ಲಿ ಹೆಚ್ಚಾಗುತ್ತಲೇ ಇದೆ. ಆದರೆ ಈ ಆಪತ್ತುಗಳ ಕಾರಣದಿಂದ ೨೦೨೦ನೇ ವರ್ಷವನ್ನು ಕರಾಳ ಎಂದು ಭಾವಿಸಬೇಕೆ ಅನ್ನುವುದು ಪ್ರಶ್ನೆ. ಖಂಡಿತಾ ಇಲ್ಲ, ಒಂದು ವರ್ಷದಲ್ಲಿ ಎದುರಾಗುವ ಆಪತ್ತುಗಳ ಸಂಖ್ಯೆ ಹೆಚ್ಚು-ಕಡಿಮೆಯಾಗುವುದರಿಂದ ಇಡೀ ವರ್ಷ ಕರಾಳವಾಗುವುದಿಲ್ಲ. ಇಂತಹ ಹಲವಾರು ಆಪತ್ತು, ಸವಾಲುಗಳನ್ನು ಸಮರ್ಥವಾಗಿ ಜಯಿಸಿ ಮತ್ತಷ್ಟು ಭವ್ಯವಾಗಿ ರೂಪುತಳೆದ ಇತಿಹಾಸ ಹೊಂದಿರುವ ದೇಶ ನಮ್ಮದು. ಇಂತಹ ಎಷ್ಟೇ ಸಂಕಟಗಳು , ಸವಾಲು ಎದುರಾದರೂ ಲೆಕ್ಕಿಸದೇ ಮುನ್ನಡೆಯುತ್ತಿರಬೇಕು. ಹೀಗಾದಾಗ ಈ ವರ್ಷ ಸಾಧನೆಗಳ ವರ್ಷವಾಗಿ ಮಾರ್ಪಾಡಾಗುತ್ತದೆ ಎಂದರು.
ಲಡಾಕ್ ಗಡಿ ವಿವಾದ ವಿಚಾರವಾಗಿ ಮಾತನಾಡಿದ ಪ್ರಧಾನಿ, ಭಾರತಕ್ಕೆ ಸ್ನೇಹ ನಿಭಾಯಿಸುವುದು ಗೊತ್ತು, ಭಾರತದ ಭೂಮಿ ಮೇಲೆ ಕಣ್ಣು ಹಾಕಿದವರಿಗೆ ದಿಟ್ಟಿಸಿ ಉತ್ತರಿಸುವುದು ಗೊತ್ತು ಎಂಬುದಾಗಿ ಹೇಳಿದರು. ಇದೇ ಸಂದರ್ಭ ಲಡಾಕ್ ನಲ್ಲಿ ಹುತಾತ್ಮರಾದ ವೀರಯೋಧರನ್ನು ಸ್ಮರಿಸಿದ ಅವರು ಭಾರತ ಮಾತೆಯ ರಕ್ಷಣೆಯ ಸಂಕಲ್ಪದಿಂದ ವೀರಯೋಧರು ಹುತಾತ್ಮರಾಗಿದ್ದಾರೆ. ಅದೇ ಸಂಕಲ್ಪವನ್ನು ನಾವೆಲ್ಲರೂ ನಮ್ಮ ಜೀವನದ ಧ್ಯೇಯವನ್ನಾಗಿಸಬೇಕು . ದೇಶ ಇನ್ನಷ್ಟು ಸಮರ್ಥವಾಗಬೇಕು. ಆತ್ಮನಿರ್ಭರವಾಗಬೇಕು ಎನ್ನುವ ಸಂಕಲ್ಪದಲ್ಲಿ ಮುನ್ನಡೆಯೋಣ . ಇದೇ ನಾವು ಅವರಿಗೆ ನೀಡುವ ನಿಜವಾದ ಶ್ರದ್ಧಾಂಜಲಿ ಎಂದರು. ಲಾಕ್ ಡೌನ್ ಸಡಿಲಗೊಂಡಿರುವ ಈ ಅವಧಿಯಲ್ಲಿ ಎರಡು ವಿಚಾರ ಪ್ರಮುಖವಾಗಿದೆ. ಒಂದು ಕೊರೊನಾವನ್ನು ಸೋಲಿಸುವುದು ಮತ್ತೊಂದು ಆರ್ಥಿಕವಾಗಿ ಬಲಿಷ್ಟವಾಗುವುದು. ನಿರ್ಲಕ್ಷ್ಯ ಬೇಡ, ನಿಮ್ಮ ರಕ್ಷಣೆಯ ಜೊತೆಗೆ ಇತರರ ರಕ್ಷಣೆಯನ್ನು ಮಾಡಿ ಅಂತ ದೆಶದ ಜನತೆಯಲ್ಲಿ ಮನವಿಮಾಡಿಕೊಂಡರು. ಈ ಮೂಲಕ ೨೦೨೦ ಭಾರತಕ್ಕೆ ಹೊಸ ದಿಕ್ಕು ನೀಡುವ ವರ್ಷವಾಗಲಿದೆ ಎಂಬ ವಿಶ್ವಸದಿಂದ ಮುನ್ನಡೆಯೋಣ ಎಂದರು.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.