ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿರುವ ಜನರಿಗೆ ತೈಲ ಕಂಪೆನಿಗಳು ಸಿಹಿ ಸುದ್ದಿ ನೀಡಿವೆ. ದಿನದಿಂದ ದಿನಕ್ಕೆ ಪ್ರತಿಯೊಂದು ವಸ್ತುಗಳು ಏರಿಕೆಯಾಗುತ್ತಿರುವ ಕಾರಣ ಹೈರಾಣಾಗಿರುವ ಜನತೆಗೆ ತೈಲ ಕಂಪೆನಿಗಳು ಎಲ್ ಪಿ ಜಿ ಸಿಲಿಂಡರ್ ಗ್ಯಾಸ್ ಬೆಲೆಯಲ್ಲಿ ಭಾರಿ ಇಳಿಕೆ ಮಾಡಿದೆ.
ಪ್ರತಿ ಸಿಲಿಂಡರ್ ಬೆಲೆಯಲ್ಲಿ 115.50 ರೂಪಾಯಿಗಳ ಇಳಿಕೆ ಕಂಡಿದೆ. ಈ ಮೂಲಕ ಏಳನೇ ಬಾರಿ ಸಿಲಿಂಡರ್ ಗಳ ಬೆಲೆಯಲ್ಲಿ ಇಳಿಕೆಯಾದಂತಾಗಿದೆ. ಈ ರಿಯಾಯಿತಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಗಳಿಗೆ ಮಾತ್ರವೇ ಅನ್ವಯವಾಗಲಿದೆ. ಈ ಮೂಲಕ 19 ಕೆಜಿ ಸಿಲಿಂಡರ್ ಬೆಲೆಯಲ್ಲಿ ಈವರೆಗೆ 610 ರೂಪಾಯಿಗಳು ಕಡಿಮೆಯಾದಂತಾಗಿದೆ.
ಸದ್ಯ ವಾಣಿಜ್ಯ ಸಿಲಿಂಡರ್ ಬೆಲೆ ಮಾತ್ರವೇ ಇಳಿಕೆಯಾಗಿದ್ದು, ಗೃಹ ಬಳಕೆ ಸಿಲಿಂಡರ್ ಬೆಲೆ ಸ್ಥಿರವಾಗಿಯೇ ಇದೆ. ಕಳೆದ ಜುಲೈ 6ರಿಂದ ಗೃಹ ಬಳಕೆಯ 14.2 ಕೆಜಿ ಗ್ಯಾಸ್ ಸಿಲಿಂಡರ್ ಬೆಲೆಗಳು ಸ್ಥಿರವಾಗಿದೆ. ಆದರೆ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ಪ್ರತಿ ತಿಂಗಳು ಇಳಿಕೆಯಾಗುತ್ತಿದೆ.
ಏರಿಳಿತದಿಂದಾಗಿ ಸಿಲಿಂಡರ್ ಬೆಲೆಯಲ್ಲೂ ಇಳಿಕೆಯಾಗಿದ್ದು, ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಈಗ 19 ಕೆಜಿ ಸಿಲಿಂಡರ್ ಬೆಲೆ 1,859 ರೂಪಾಯಿಗಳ ಬದಲಿಗೆ 1,744 ರೂಪಾಯಿಗಳಾಗಿದೆ.