ಬೆಂಗಳೂರು : ಕನ್ನಡವನ್ನು ಗಟ್ಟಿಗೊಳಿಸುವುದಕ್ಕೆ, ಕನ್ನಡವನ್ನು ಇತರರಿಗೆ ಪರಿಚಯಿಸುವುದಕ್ಕೆ ಮತ್ತು ಕನ್ನಡದ ಭವಿಷ್ಯವನ್ನು ನಿರ್ಮಿಸುವುದಕ್ಕೆ ಬರುವ ಸಲಹೆ-ಸೂಚನೆಗಳನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸಲು ನಮ್ಮ ಸರ್ಕಾರ ಸಿದ್ಧವಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕರ್ನಾಟಕ ಏಕೀಕರಣ ಹೋರಾಟಗಾರ ಡಾ. ಜಯದೇವಿ ತಾಯಿ ಲಿಗಾಡೆ ಹಾಗೂ ನಾಡೋಜ ಡಾ. ಕಯ್ಯಾರ ಕಿಂಇಣ್ಣ ರೈ ಹೆಸರಿನಲ್ಲಿ ನೀಡುವ ಗಡಿನಾಡ ಚೇತನ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಕನ್ನಡ ಅಭಿವೃದ್ಧಿಗೆ ಅಗತ್ಯತೆಗಳನ್ನು ಸರ್ಕಾರದಿಂದ ಪೂರ್ಣಗೊಳಿಸಲು ಶೇ.100ರಷ್ಟು ಪ್ರಯತ್ನ ಮಾಡಲಾಗುತ್ತದೆ. ಬಜೆಟ್‌ನಲ್ಲಿ ಈ ಬಾರಿ ಕನ್ನಡ ಅಭಿವೃದ್ಧಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದು, ಮಕ್ಕಳಲ್ಲಿ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಬೆಳೆಸುವ ನಿಟ್ಟಿನಲ್ಲಿ ಜಿಲ್ಲಾಮಟ್ಟದಲ್ಲಿ ಮಕ್ಕಳ ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಮ್ಮೇಳನ ನಡೆಯಲಿದೆ ಎಂದು ತಿಳಿಸಿದ್ದಾರೆ.
“ಕನ್ನಡವನ್ನು ಗಟ್ಟಿಗೊಳಿಸುವುದಕ್ಕೆ, ಕನ್ನಡವನ್ನು ಇತರರಿಗೆ ಪರಿಚಯಿಸುವುದಕ್ಕೆ ಮತ್ತು ಕನ್ನಡದ ಭವಿಷ್ಯವನ್ನು ನಿರ್ಮಿಸುವುದಕ್ಕೆ, ಬರುವ ಸಲಹೆ-ಸೂಚನೆಗಳನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸಲು ನಮ್ಮ ಸರ್ಕಾರ ಸಿದ್ದವಿದೆ” : ಮುಖ್ಯಮಂತ್ರಿ @BSBommai pic.twitter.com/PgSaJFIxoy
— CM of Karnataka (@CMofKarnataka) February 11, 2022