ವಾಣಿಜ್ಯ ಜಾಹಿರಾತು

ಕೈರೊ: ವಿಶ್ವದ ಅತ್ಯಂತ ನಿಬಿಡ ಕಡಲ ವ್ಯಾಪಾರ ಮಾರ್ಗವಾದ ಈಜಿಪ್ಟ್ ನ ಸುಯೆಜ್ ಕಾಲುವೆಯಲ್ಲಿ ದೈತ್ಯ ಕಂಟೇನರ್ ಹಡಗು ಸಿಲುಕಿ 6 ದಿನವಾದರೂ ತೆರವುಗೊಳಿಸಲಾಗದೆ ಸಂಚಾರ ಬಿಕ್ಕಟ್ಟು ಎದುರಾಗಿದ್ದು, ಜಾಗತಿಕ ಶಿಪ್ಪಿಂಗ್ ವ್ಯವಸ್ಥೆಗೆ ಅಡ್ಡಿಯುಂಟಾಗಿದೆ.
ತೈವಾನ್ ನಿರ್ವಹಣೆಯಲ್ಲಿರುವ ಪನಾಮಾ ಮೂಲದ 400 ಮೀ. ಉದ್ದದ ‘ಎಂವಿ ಎವರ್ ಗ್ರೀನ್’ ಹಡಗನ್ನು ತಿರುಗಿಸಲು ಪ್ರಯತ್ನಿಸಲಾಗುತ್ತಿದೆ. ಈ ಹಡಗು ಅಂದಾಜು 200,000 ಮೆಟ್ರಿಕ್ ಟನ್ ತೂಕವಿದೆ. ಅದರ ಬೃಹತ್ ಗಾತ್ರದ ಕಾರಣ ತೆರವು ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಇದರಲ್ಲಿ ಸುಮಾರು 12 ಮಹಡಿ ಕಟ್ಟಡದ ಎತ್ತರದಷ್ಟು ಕಂಟೇನರ್ ಇದೆ. ಹಡಗಿನ ಅಡಿಯಲ್ಲಿನ ಹೂಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಯುತ್ತಿದೆ.
‘ಭಾರೀ ಪ್ರಯತ್ನದ ನಂತರ ಹಡಗು ಸ್ವಲ್ಪ ಬದಿಗೆ ಚಲಿಸಿದೆ. ಯಾವುದೇ ಸಮಯದಲ್ಲಿ ಹಡಗು ಚಲಿಸಬಹುದು. ಹಡಗಿನ ಕೆಳಗೆ ನೀರು ಹರಿಯಲು ಪ್ರಾರಂಭಿಸಿದೆ’ ಎಂದು ಸುಯೆಜ್ ಕಾಲುವೆ ಪ್ರಾಧಿಕಾರ ಅಧ್ಯಕ್ಷ ಒಸಾಮಾ ರಾಬಿ ಸುದ್ದಿ ಸಂಸ್ಥೆ ರಾಯಿಟರ್ಸ್ ಗೆ ತಿಳಿಸಿದ್ದಾರೆ.
ಜಗತ್ತಿನ ಅತ್ಯಂತ ಮುಖ್ಯ ಜಲಮಾರ್ಗ ಎಂದು ಕರೆಯಲಾಗುವ ಸೂಯೆಜ್ ಕಾಲುವೆಯಲ್ಲಿ 6 ದಿನಗಳಿಂದ ಹಡಗುಗಳ ಸಂಚಾರಕ್ಕೆ ಅಡ್ಡಿಯಾಗಿದ್ದು, ಸುಗಮ ಸಂಚಾರಕ್ಕೆ ಅವಕಾಶ ಸಿಕ್ಕ ತಕ್ಷಣವೇ ಕಾಲುವೆ ಮೂಲಕ ಹಾದುಹೋಗಲು ನೂರಾರು ಹಡಗುಗಳು ಕಾಯುತ್ತಿವೆ ಎಂದು ವರದಿಯಾಗಿದೆ.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.