ವಾಣಿಜ್ಯ ಜಾಹಿರಾತು

ಕೋಝಿಕ್ಕೋಡ್ (ಕೇರಳ): ಮಾಡೆಲ್ ಆಗಬೇಕೆನ್ನುವ ಕನಸು ಕಟ್ಟಿಕೊಂಡು ಅದೆಷ್ಟೋ ಮಂದಿ ದಿನರಾತ್ರಿ ಕಷ್ಟಪಡುತ್ತಿರುತ್ತಾರೆ. ಆದರೆ ಇಲ್ಲೋರ್ವ ದಿನ ಕೂಲಿಕಾರ್ಮಿಕ ದಿನಬೆಳಗಾಗುವುದರೊಳಗೆ ಮಾಡೆಲ್ ಆಗಿ ಎಲ್ಲರನ್ನು ಬೆರಗಾಗಿಸಿದ್ದಾರೆ. 60 ವರ್ಷ ವಯಸ್ಸಿನ ಮಮ್ಮಿಕ್ಕಾ ಎಂಬ ಹೆಸರಿನ ವ್ಯಕ್ತಿ ಇದೀಗ ಇಂಟರ್ ನೆಟ್ ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ.

ಕೇರಳದ ಕೋಝಿಕ್ಕೋಡ್‌ನ ಕೊಡುವಳ್ಳಿ ಪ್ರದೇಶದಲ್ಲಿ ದಿನಗೂಲಿ ಕಾರ್ಮಿಕರಾದ ಮಮ್ಮಿಕ್ಕಾ ಎಂಬವರು ತಲೆಗೊಂದು ಮುಂಡಾಸು, ಲುಂಗಿ ಕಟ್ಟಿಕೊಂಡು ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ಫೋಟೋವೊಂದು ಭಾರೀ ವೈರಲ್ ಆಗಿತ್ತು. ಛಾಯಾಗ್ರಾಹಕ ಶರೀಕ್ ವಯಾಲಿಲ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಈ ಫೋಟೋ ಹಂಚಿಕೊಂಡಿದ್ದರು. ಆ ಫೋಟೋಗೆ ಭಾರೀ ಮೆಚ್ಚುಗೆ ವ್ಯಕ್ತವಾಯಿತು. ಅಲ್ಲದೇ ಕೆಲವರು ಇವರು ಮಲಯಾಳಂ ನಟನೋರ್ವನನ್ನು ಹೋಲುತ್ತಾರೆ ಎಂದೆಲ್ಲ ಕಮೆಂಟ್ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ಮೇಕ್ ಓವರ್ ಮಾಡಿ ಮಾಡೆಲ್ ಆಗಿ ಬದಲಾಯಿಸಲಾಯಿತು. ಸ್ಥಳೀಯ ವೆಡ್ಡಿಂಗ್ ಸೂಟ್ ಕಂಪನಿಯೊಂದಕ್ಕೆ ಮಾಡೆಲ್ ಆಗಿ ಪೋಸ್ ನೀಡಿದರು.

ಮಮ್ಮಿಕ್ಕಾ ಅವರ ಈ ಮಾಡೆಲ್ ಲುಕ್ ಗೆ ಎಲ್ಲರೂ ಫಿದಾ ಆಗಿದ್ದಾರೆ. ಸೂಟ್ ಬೂಟು, ಕೈಯ್ಯಲ್ಲೊಂದು ಟ್ಯಾಬ್ ಹಿಡಿದು, ಕೂಲಿಂಗ್ ಗ್ಲಾಸ್ ತೊಟ್ಟ ಪೋಸ್ ಗೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಮಮ್ಮಿಕ್ಕಾ ಅವರು ಹಿಂದಿನ ಲುಕ್ ನಿಂದ ಮಾಡೆಲ್ ಲುಕ್ ಗೆ ಬದಲಾವಣೆಯಾದ ವೀಡಿಯೋವನ್ನು ವಯಾಲಿಲ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅವರ ಮೇಕ್ ಓವರ್ ಮತ್ತು ಕ್ಯಾಮೆರಾ ಮುಂದೆ ಅವರು ಪ್ರದರ್ಶಿಸಿದ ರೀತಿ ಮೆಚ್ಚುಗೆಗೆ ಪಾತ್ರವಾಗಿದ್ದು, ನೆಟ್ಟಿಗರು ವಾಹ್ ಅಂದಿದ್ದಾರೆ .

ಇಂಟರ್ ನೆಟ್ ನಲ್ಲಿ ಮಮ್ಮಿಕ್ಕಾ ಅವರ ಫೋಟೋಗಳು ಸದ್ದು ಮಾಡುತ್ತಿದ್ದರೆ, ಇತ್ತ ಮಮ್ಮಿಕ್ಕಾ ಅವರು ಮಾತ್ರ ತಮ್ಮ ದೈನಂದಿನ ಕೆಲಸದಲ್ಲಿ ನಿರತರಾಗಿದ್ದಾರಂತೆ. ಒಟ್ಟಿನಲ್ಲಿ ಅದೃಷ್ಟ ಖುಲಾಯಿಸಿದರೆ ಯಾರ ಬದುಕು ಕೂಡ ಕ್ಷಣಮಾತ್ರದಲ್ಲಿ ಬದಲಾವಣೆಯಾಗುವುದರಲ್ಲಿ ಸಂಶಯವಿಲ್ಲ.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.