ವಾಣಿಜ್ಯ ಜಾಹಿರಾತು

ಉಡುಪಿ:  ಕನ್ನಡ ಉಳಿಸಿ ಬೆಳೆಸುವುದು ಸರ್ಕಾರದ ಪ್ರತಿಯೊಂದು ಹಂತದಲ್ಲಿ ಕನ್ನಡವನ್ನು ಆಡಳಿತ ಭಾಷೆಯಾಗಿ ಬಳಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ರಾಜ್ಯ ಮೀನುಗಾರಿಕೆ ಬಂದರು ಮತ್ತು ಒಳನಾಡು ಸಾರಿಗೆ ಸಚಿವ ಎಸ್ ಅಂಗಾರ ಹೇಳಿದರು.

ಅವರು  ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 67 ನೇ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ನೆರವವೇರಿಸಿ ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು.

ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿದ್ದ ಮುಂಬೈ ಪ್ರಾಂತ್ಯ, ಮದರಾಸ್ ಪ್ರಾಂತ್ಯ, ಮನೆತನಗಳ ಅಳ್ವಿಕೆಯಲ್ಲಿದ್ದ ಮೈಸೂರು ಪ್ರಾಂತ್ಯ, ನಿಜಾಮರ ರಾಜ ಆಳ್ವಿಕೆಯಲ್ಲಿದ್ದ ಹೈದರಾಬಾದ್ ಕರ್ನಾಟಕ ಹಾಗೂ ಕೊಡಗು ಪ್ರಾಂತ್ಯಗಳನ್ನು ಒಳಗೊಂಡ ಏಕೀಕೃತ ಮೈಸೂರು ರಾಜ್ಯ ಉದಯಗೊಂಡದ್ದು, ನವೆಂಬರ್ 1, 1956 ರಲ್ಲಿ, ಮುಂದೆ ಶ್ರೀ ದೇವರಾಜ ಅರಸ್ ಅವರ ಆಳ್ವಿಕೆಯ ಕಾಲದಲ್ಲಿ ಅಂದರೆ 1973 ರ ನವೆಂಬರ್ ಒಂದರಂದು ಕರ್ನಾಟಕ ರಾಜ್ಯ ಎಂದು ನಾಮಕರಣಗೊಂಡದ್ದು ನಮ್ಮ ನಾಡು, ಆಲೂರು ವೆಂಕಟರಾವ್‌, ಬಿ.ಎಂ. ಶ್ರೀಕಂಠಯ್ಯನವರು, ಕುವೆಂಪು, ಬೇಂದ್ರ ಕಾರಂತ, ಮಾಸ್ತಿ, ಕಾರ್ನಾಡ್ ಸದಾಶಿವ ರಾವ್, ಶ್ರೀನಿವಾಸ ಮಲ, ಮುಂತಾದ ಸಹಸ್ರಾರು ಕನ್ನಡಿಗರ ಒತ್ತಾಸೆಯಿಂದ ನಮ್ಮ ನಾಡು, ಭಾರತ ಜನನಿಯ ತನುಜಾತೆಯ ಉದಯವಾದದ್ದು ಒಂದು ರೋಚಕ ಇತಿಹಾಸ, ಭಾಷೆ, ನಾಡು ನುಡಿಯ ಕುರಿತು ನಮ್ಮ ಅಭಿಮಾನವನ್ನು ಯಶಸ್ವಿಯಾಗಿ ತೋರ್ಪಡಿಸುವಲ್ಲಿ ಗೋಕಾಕ್ ಚಳುವಳಿ, ಸಿನಿಮಾರಂಗ, ಪುಸ್ತಕ ಪುಪಂಚ ಅಲ್ಲದೇ 2008 ರಲ್ಲಿ ಕನ್ನಡಿಗರ ಒತ್ತಾಸೆಯಂತೆ ಶಾಸ್ತ್ರೀಯ ಭಾಷೆ ಸ್ಥಾನಮಾನವನ್ನು ಕನ್ನಡ ಭಾಷೆಯು ಪಡೆದ ಸಂಭ್ರಮ ನಮ್ಮ ಭಾಷೆಗಿದೆ. ಭಾರತದಲ್ಲಿ ಶಾಸ್ತ್ರೀಯ ಭಾಷೆಯ ಗೌರವವನ್ನು ಪಡೆದ ಆರು ಭಾಷೆಗಳಲ್ಲಿ ಕನ್ನಡ ಮೂರನೇಯದ್ದು ಎಂದು ಅಭಿಮಾನದಿಂದ ಹೇಳಬೇಕಿದೆ. ಗಡಿನಾಡುಗಳಲ್ಲಿ, ವಿಶ್ವದ ವಿವಿಧ ಭಾಗಗಳಲ್ಲಿ ಕನ್ನಡಿಗರು ಒಂದಾಗಿ ಕನ್ನಡದ ತೇರನ್ನು ಏಳೆಯುತ್ತಿರುವುದನ್ನು ವಿಶೇಷವಾಗಿ ಉಲ್ಲೇಖಿಸುತ್ತೇವೆ.

ಭಾಷೆಯೆಂಬುದು ಇಲ್ಲದಿದ್ದರೆ ಆಶೇಷ ಭುವನತಯವೂ ಕತ್ತಲು” ಎಂದು ದಂಡಿ ಹೇಳಿದ್ದಾನೆ. 2000 ವರ್ಷಕ್ಕೆ ಮೀರಿದ ಇತಿಹಾಸವುಳ್ಳ ಕನ್ನಡ ಭಾಷೆಯು ಸ್ವಾಭಿಮಾನ ಮತ್ತು ಸಮನ್ವಯದ ಸಂಸ್ಕೃತಿಯನ್ನು ಸಾರಿ ಹೇಳುತ್ತಿದೆ ಎಂದು ಚಿದಾನಂದ ಮೂರ್ತಿಯವರು ಹೇಳುತ್ತಾರೆ.

ಇರುವುದನ್ನು ಕಂಡು ಹುಲಿಮರಿಗೆ ಆಶ್ಚರ್ಯವಾಯಿತು. ನೀನು ಕುರಿಯಲ್ಲ ಹುಲಿ ಎಂದು ಹೇಳಿ ಗರ್ಜಿಸುವುದನ್ನು ಹೇಳಿಕೊಟ್ಟಿತು, ಇದರಂತೆ ಕನ್ನಡಿಗರೆಲ್ಲರೂ ತಮ್ಮ ಸ್ವಸ್ವರೂಪವನ್ನು ಅರಿತು ಹುಲಿಗಳಂತೆ ಗರ್ಜಿಸಬೇಕು. ತಮ್ಮ ಕ್ಷಾತ್ರ ತೇಜವನ್ನು ಮೆರೆಯಬೇಕು. ಜಾಗತೀಕರಣವು ನಮ್ಮ ಎದುರು ಇಟ್ಟಿರುವ ಸವಾಲುಗಳನ್ನು ಎದುರಿಸಿ ಗೆಲುವಂತೆ ಆಗಬೇಕು.

ಕನ್ನಡ ಜನರೇ ಏಳಿ ಎದ್ದೇಳಿ ಕನ್ನಡವು ಕರ್ನಾಟಕದಲ್ಲಿ ರಾಜರಾಜೇಶ್ವರಿಯಾಗಿ ಮೆರೆದು ಭಾರತೀಯ ಸಂಸ್ಕೃತಿಯ ವಜ್ರಮುಕುಟದಂತೆ ಬೆಳಗಲಿ ಎಂದು ಹಾರೈಸೋಣ. ಅದಕ್ಕಾಗಿ ಶ್ರಮಿಸೋಣ. ಭವಿಷ್ಯದತ್ತ ಕಣ್ಣು ನೆಟ್ಟು ನಮ್ಮ ಹಿಂದಿನ ಸಂಸ್ಕೃತಿಯಿಂದ ಸ್ಪೂರ್ತಿಯನ್ನು ಪಡೆದು ಮುನ್ನಡೆಯೋಣ.

ಇಂದು ಅಗತ್ಯವಾಗಿರುವುದು ಒಗಟ್ಟು, ಒಕ್ಕಲಿಗ, ಲಿಂಗಾಯತ, ಬೇಡ, ಕುರುಬ, ಬ್ರಾಹ್ಮಣ, ದಲಿತ, ಮುಸಲ್ಮಾನ, ಕ್ರಿಶ್ಚಿಯನ್ ಎಂಬ ಭೇದವಿಲ್ಲದೇ ಎಲ್ಲ ಕನ್ನಡದ ಜನ ಕನ್ನಡದ ಉಳಿವು ಬೆಳವಣಿಗೆಗಾಗಿ ಒಂದಾಗುವುದು ತೀರ ಅಗತ್ಯ. ನಮ್ಮ ನಾಡು ನುಡಿಯ ಅಸ್ಮಿತೆಯನ್ನು ಉಳಿಸಿ ಬೆಳೆಸುವಲ್ಲಿ ಸರ್ಕಾರವು ಕಾಲಕಾಲಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿದೆ. ಕನ್ನಡ ಉಳಿಸಿ ಬೆಳೆಸುವುದು ಸರ್ಕಾರದ ಪ್ರತಿಯೊಂದು ಹಂತದಲ್ಲಿ ಕನ್ನಡವನ್ನು ಆಡಳಿತ ಭಾಷೆಯಾಗಿ ಬಳಸುವುದು. ಕನ್ನಡ ಶಾಲೆಗಳ ಅಭಿವೃದ್ಧಿಗೆ ಶ್ರಮಿಸುವುದು. ಕನ್ನಡ ಸಾಹಿತ್ಯ ಶ್ರೀಮಂತಿಕೆಯನ್ನು ಗುರುತಿಸಿ ಗೌರವಿಸುವುದು. ಸಿನೆಮಾ, ಮನೋರಂಜನೆ, ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡದ ಶ್ರೀಮಂತಿಕೆಯನ್ನು ಉಳಿಸಿ ಬೆಳೆಸಲು ನಾವೆಲ್ಲರೂ ಒಂದಾಗಿ ಕೆಲಸವನ್ನು ಮಾಡೋಣ.

ಅಂದು ಕರ್ನಾಟಕ ರಾಜ್ಯ ಏಕೀಕರಣದ ಸಂಧರ್ಭದಲ್ಲಿ ವಿವಿಧ ಪ್ರಾಂತಗಳಲ್ಲಿ ಚದುರಿಹೋಗಿದ್ದ ಕನ್ನಡಿಗರು ತೋರಿದ ಸಹಮತ ಮತ್ತು ಸಹಬಾಳ್ವೆ ನೂತನ ಕರ್ನಾಟಕ ರಾಜ್ಯ ರೂಪುಗೊಳ್ಳುವಲ್ಲಿ ಹೇಗೆ ಮಹತ್ವದ ಪಾತ್ರ ವಹಿಸಿತ್ತೋ, ಅದೆ ರೀತಿ ಜಾತಿ ಧರ್ಮ ಬೇಧ ಭಾವಗಳನ್ನು ಬಿಟ್ಟು, ಕರ್ನಾಟಕ ರಾಜ್ಯದ ಪ್ರಗತಿಗೆ ಸರ್ವರ ಸಹಕಾರ ಮತ್ತು ಸಮನ್ವಯತೆ ಅತೀ ಅಗತ್ಯವಾಗಿದೆ ಎಂದು ಹೇಳುತ್ತಾ, ತಾಯಿ ಭುವನೇಶ್ವರಿ ದೇವಿಯು ಸರ್ವರಿಗೂ ಸನ್ಮಂಗಳವನ್ನು ಉಂಟು ಮಾಡಿ, ಎಲ್ಲರ ಮನೆ, ಮನಗಳು ಬೆಳಗುವಂತಾಗಲಿ ಎಂದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ 34 ಸಾಧಕರಿಗೆ ಹಾಗೂ 2 ಸಂಘ-ಸಂಸ್ಥೆಗಳಿಗೆ ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಉಡುಪಿ ಶಾಸಕ ರಘುಪತಿ ಭಟ್, ಜಿಲ್ಲಾಧಿಕಾರಿ ಕೂರ್ಮರಾವ್ ಎಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೆ ಮಚ್ಚೀಂದ್ರ, ಅಪರ ಜಿಲ್ಲಾಧಿಕಾರಿ ವೀಣಾ, ಜಿಪಂ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ, ನಗರಸಭಾ ಅಧ್ಯಕ್ಷೆ ಸುಮೀತ್ರಾ ನಾಯಕ್ ಹಾಗೂ ಇತರರು ಉಪಸ್ಥಿತರಿದ್ದರು.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.