ಬೆಳ್ತಂಗಡಿ: ನನ್ನ ಅವಧಿಯಲ್ಲಿ ₹ 3 ಸಾವಿರ ಕೋಟಿಗೂ ಹೆಚ್ಚು ಅನುದಾನ ತರುವಲ್ಲಿ ಯಶಸ್ವಿಯಾಗಿದ್ದು ತಾಲ್ಲೂಕು ಸರ್ವತೋಮುಖ ಅಭಿವೃದ್ಧಿ ಕಂಡಿದೆ. ‘ಶಿಕ್ಷಣ, ನೀರಾವರಿ, ರಸ್ತೆ, ಧಾರ್ಮಿಕತೆ ಹಾಗೂ ಮೂಲಸೌಕರ್ಯಗಳಿಗೆ ಒತ್ತು ನೀಡಿದ್ದರಿಂದ ತಾಲ್ಲೂಕಿನ 81 ಗ್ರಾಮಗಳು ಅಭಿವೃದ್ಧಿ ಪಥದಲ್ಲಿ ಸಾಗುತ್ತಿವೆ ಎಂದು ಶಾಸಕ ಹರೀಶ್ ಪೂಂಜ ಹೇಳಿದ್ದಾರೆ.
ಶಾಸಕರಾಗಿ ಮರೋಡಿ-ಪೆರಾಡಿ ಭಾಗದ ಅಭಿವೃದ್ಧಿಗಾಗಿ ₹ 14.62 ಕೋಟಿ ಮೊತ್ತದ ಅನುದಾನ ಮಂಜೂರು ಮಾಡಿಸಿದ್ದಕ್ಕಾಗಿ ಬಿಜೆಪಿ ಬೆಳ್ತಂಗಡಿ ಮಂಡಲ ಆಯೋಜಿಸಿದ್ದ ‘ಮರೋಡಿ–ಪೆರಾಡಿ ಗ್ರಾಮ ವಿಕಾಸ ಹಬ್ಬ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಿಜೆಪಿ ಬೆಳ್ತಂಗಡಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್ ಮಾತನಾಡಿ, ‘21 ವರ್ಷಗಳ ನಂತರ ಮರೋಡಿಯಲ್ಲಿ ವಿಕಾಸದ ಹಬ್ಬ ಆಗಿದೆ. ಪಾದರಸದಂಥ ವ್ಯಕ್ತಿತ್ವವುಳ್ಳ ಶಾಸಕರು ಬೆಳ್ತಂಗಡಿ ತಾಲ್ಲೂಕಿನ ಚಿತ್ರಣವನ್ನೇ ಬದಲಿಸಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.
ಮರೋಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪದ್ಮಶ್ರೀ ಜೈನ್, ಹೇಮರಾಜ್ ಕೆ ಬೆಳ್ಳಿಬೀಡು ಮರೋಡಿ, ರಾಜೇಂದ್ರ ಪಿ ಜೈನ್ ಪೆರಾಡಿಬೀಡು, ಶಿರ್ತಾಡಿ ಪ್ರಭಾ ಕ್ಲಿನಿಕ್‌ನ ಡಾ.ಆಶೀರ್ವಾದ್, ಸ್ಯ್ಕಾಡ್ಸ್ ಮಾಜಿ ನಿರ್ದೇಶಕ ಮಹಾವೀರ ಅರಿಗ, ನಿವೃತ್ತ ಮುಖ್ಯೋಪಾಧ್ಯಾಯ ಟಿ.ಕೆ ವೆಂಕಟರಾವ್, ಬಿಜೆಪಿ ಪೆರಾಡಿ ಗ್ರಾಮ ಸಮಿತಿ ಅಧ್ಯಕ್ಷ ಗೋಪಾಲ ಶೆಟ್ಟಿ, ಬಿಜೆಪಿ ನಾರಾವಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಮೋಹನ್ ಅಂಡಿಂಜೆ, ಪೆರಾಡಿ ಶಕ್ತಿ ಕೇಂದ್ರದ ಅಧ್ಯಕ್ಷ ಗಣೇಶ್ ಕರ್ಕೇರ, ಮರೋಡಿ ಶಕ್ತಿ ಕೇಂದ್ರದ ಅಧ್ಯಕ್ಷ ಶುಭರಾಜ್ ಹೆಗ್ಡೆ, ಬೂತ್ ಸಮಿತಿ ಅಧ್ಯಕ್ಷ ಅಶೋಕ್ ಕೋಟ್ಯಾನ್, ಮರೋಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಯಶೋಧರ ಆಚಾರ್ಯ, ಬೂತ್ ಸಮಿತಿ ಅಧ್ಯಕ್ಷ ಗೋವಿಂದ ಭಟ್, ಸುಜಿತ್ ಕಾರ್ಯಕ್ರಮದಲ್ಲಿ ಹಾಜರಿದ್ದರು.