ವಾಣಿಜ್ಯ ಜಾಹಿರಾತು
ಮೂಡುಬಿದಿರೆ: ಇಲ್ಲಿನ ಮೂಡುಕೊಣಾಜೆ ನಿವಾಸಿಯೋರ್ವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ಸಾಯಂಕಾಲ ಬೆಳಕಿಗೆ ಬಂದಿದೆ. ರವಿ ಪೂಜಾರಿ (55) ಮೃತರು.
ಮೂಡುಕೊಣಾಜೆಯ ಕುಕ್ಕುದಕಟ್ಟೆ ನಿವಾಸಿಯಾದ ರವಿ ಪೂಜಾರಿಯವರು ಹಲವು ವರ್ಷಗಳಿಂದ ಚಾಲಕರಾಗಿ ಕೆಲಸ ನಿರ್ವಹಿಸುತ್ತಿದ್ದು, ಅನಾರೋಗ್ಯದ ಕಾರಣ ಕೆಲಸ ಬಿಟ್ಟಿದ್ದರು. ಅನಾರೋಗ್ಯ ಕಾರಣದಿಂದ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ. ಅವರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಾಣಿಜ್ಯ ಜಾಹಿರಾತು