ವಾಣಿಜ್ಯ ಜಾಹಿರಾತು

ಮಂಗಳೂರು: ಮಂಜನಾಡಿ ಗ್ರಾಮದ ಮೊಂಟೆಪದವು ಎಂಬಲ್ಲಿ ವಾಸಿಸುತ್ತಿರುವ ಸಂತೋಷ್ ಎಂಬವರು ತೋಟದಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಆದರೆ ಅವರಿಗೆ ನರದ ಸಮಸ್ಯೆಯಿಂದ ನಡೆದಾಡಲೂ ಸಾಧ್ಯವಾಗದ ಪರಿಸ್ಥಿತಿ ಉಂಟಾಗಿದ್ದು, ಕಳೆದ ಆರು ವರ್ಷಗಳಿಂದ ದುಡಿಯಲು ಸಾಧ್ಯವಾಗದೇ ಮನೆಯಲ್ಲಿಯೇ ದಿನಕಳೆಯುವಂತಾಗಿದೆ. ಮನೆಗೆ ದುಡಿದು ತಂದು ಪತ್ನಿ, ತಾಯಿಯನ್ನು ಸಾಕುತ್ತಿದ್ದ ಸಂತೋಷ್ ಅವರ ಪರಿಸ್ಥಿತಿಯಿಂದಾಗಿ ಇದೀಗ ಕುಟುಂಬ ಕಂಗಾಲಾಗಿದೆ. ದಿನ ನಡೆಸುವುದೇ ಕಷ್ಟಕರವಾಗಿದೆ.

ಸಂತೋಷ್ ಅವರು ಮನೆಯಿಂದ ಹೊರಗೆ ಹೋಗಿ ದುಡಿಯುವ ಸ್ಥಿತಿಯಲ್ಲಿಲ್ಲ. ನಡೆದಾಡಿದ್ರೆ ಬೀಳುತ್ತಾರೆ. ಪ್ಯಾನಿಕ್ ಡಿಸಾರ್ಡರ್ (ಆತಂಕದ ಅಸ್ವಸ್ಥತೆ) ಎನ್ನುವ ಕಾಯಿಲೆಯಿಂದ ಬಳಲುತ್ತಿದ್ದಾರೆ.

ಸಂತೋಷ್ ಅವರ ತಾಯಿ ಬೀಡಿ ಕಟ್ಟುತ್ತಿದ್ದು ಅದರಲ್ಲೇ ಸದ್ಯ ಈ ಮೂವರ ಜೀವನ ಸಾಗುತ್ತಿದೆ. ಸಂತೋಷ ಅವರ ಪತ್ನಿಗೂ ಸಮಸ್ಯೆಗಳಿದ್ದು ಹೊರಗಡೆ ಹೋಗಿ ದುಡಿಯಲಾಗದ ಪರಿಸ್ಥಿತಿಯಲ್ಲಿದ್ದಾರೆ. ಈ ದಂಪತಿಗೆ ಮಕ್ಕಳಿಲ್ಲ. ಹೀಗಾಗಿ ಈ ಕುಟುಂಬ ಇದೀಗ ದಾನಿಗಳ ಸಹಾಯಕ್ಕಾಗಿ ಎದುರು ನೋಡುತ್ತಿದೆ.

ಒಂದೆಡೆ ಔಷಧಗಳ ಖರ್ಚು ವೆಚ್ಚ ಮತ್ತೊಂದೆಡೆ ದಿನನಡೆಸುವ ಕಷ್ಟ. ಇವೆರಡರ ಮಧ್ಯೆ ಸಿಲುಕಿ ಸಂತೋಷ್ ಅವರು ನೊಂದುಹೋಗಿದ್ದು ದಾನಿಗಳ ಸಹಾಯದ ನಿರೀಕ್ಷೆಯಲ್ಲಿದ್ದಾರೆ. ದುಡಿಯುತ್ತಿದ್ದ ಸಂದರ್ಭ ಕಟ್ಟಿದ ಮನೆಯೊಂದು ಬಿಟ್ಟರೇ ತಮ್ಮ ಬಳಿ ಏನೂ ಇಲ್ಲ, ತನಗೆ ಹಣ ನೀಡದಿದ್ದರೂ ಪರ್ವಾಗಿಲ್ಲ, ಅಡಿಕೆ ಸುಲಿಯುವ ಕೆಲಸ ಗೊತ್ತಿದ್ದು, ಅದಕ್ಕಾಗಿ ಅಡಕೆ ಸುಲಿಯುವ ಯಂತ್ರ ಒದಗಿಸಿದರೂ ಅದರಿಂದ ಜೀವನ ನಡೆಸುತ್ತೇನೆ ಎನ್ನುತ್ತಾರೆ.

ಸಂತೋಷ್ ಅವರಿಗೆ ಸ್ವಂತ ಕೆಲಸ ಮಾಡಿ ಜೀವನ ಸಾಗಿಸಬೇಕೆನ್ನುವ ಆಸೆ. ಆದ್ರೆ ಏನು ಮಾಡೋದು ಹೊರಗಡೆ ಹೋಗಿ ಕೆಲಸ ಮಾಡಲು ಸಾಧ್ಯವಾಗದ ಪರಿಸ್ಥಿತಿ. ಮನೆಯಲ್ಲೇ ಅಡಿಕೆ ಸುಲಿದು ಅದರಿಂದ ಬರುವ ಆದಾಯದಿಂದ ಜೀವನ ಸಾಗಿಸುವ ಅಂದ್ರೆ ಅಡಿಕೆ ಸುಲಿಯಲು ಅಡಿಕೆ ಯಂತ್ರವಿಲ್ಲ.ಸಂತೋಷ್ ಅವರ ಕುಟುಂಬ ರೇಷನ್ ಅಕ್ಕಿಯ ಊಟವನ್ನೇ ಮಾಡಿ ಜೀವನ ನಡೆಸುತ್ತಿದ್ದಾರೆ.

ಸಂತೋಷ್ ಅವರ ಕುಟುಂಬಕ್ಕೆ ಸಹಾಯ ಮಾಡಲಿಚ್ಚಿಸುವವರು

ಈ ಕೆಳಗೆ ನೀಡಲಾದ ಬ್ಯಾಂಕ್ ಖಾತೆ ತಮ್ಮ ಕಿಂಚಿತ್ತು ಸಹಾಯ ನೀಡಬಹುದು.
ಹೆಸರು: ಸಂತೋಷ್ ಗೋಪಾಲ್
ಬ್ಯಾಂಕ್ ಶಾಖೆ : ಬ್ಯಾಂಕ್ ಆಫ್ ಬರೋಡಾ, ಮಂಜನಾಡಿ , ಕಲ್ಕಟಾ
ಬ್ಯಾಂಖ್ ಖಾತೆ ನಂ.- 70470100007375
Google pay/phonepay: 6360078960

ಅವರನ್ನು ಈ ಮೇಲಿನ ಫೋನ ನಂಬರ್ ಮೂಲಕ ಸಂಪರ್ಕಿಸಬಹುದಾಗಿದೆ.

ಸಹಾಯ ಸಣ್ಣಮಟ್ಟದ್ದಾಗಿರಲೀ, ದೊಡ್ಡದಾಗಿರಲೀ, ಸಹಾಯ ಸಹಾಯವೇ. ಯಾವುದೇ ಫಲಾಪೇಕ್ಷೆ ಇಲ್ಲದೇ, ನಿಸ್ವಾರ್ಥ ಮನಸ್ಸಿನಿಂದ ಮತ್ತೊಬ್ಬರಿಗೆ ಸಹಾಯಮಾಡುವ ಅದೆಷ್ಟು ಮಾನವೀಯಮುಖಗಳು ನಮ್ಮ ನಡುವೆ ಇದ್ದಾರೆ ಎನ್ನುವುದೇ ಹೆಮ್ಮೆ. ಇನ್ನೊಬ್ಬರ ಕಷ್ಟಕ್ಕೆ, ನೋವಿಗೆ ಸ್ಪಂದಿಸುವುದು ಸಹೃದಯಿಗಳಿಂದಷ್ಟೇ ಸಾಧ್ಯ. ಅಂತಹ ಸಹೃದಯಿಗಳು ತಾವಾಗಿದ್ದರೇ ಅಥವಾ ನಿಮಗೆ ತಿಳಿದಿದ್ದರೇ ಅಂಥವರನ್ನು ಪರಿಚಯಿಸುವುದು ನಮ್ಮ ಹೆಮ್ಮೆ. ‘ಸಹಾಯಹಸ್ತ’ ಎನ್ನುವ ಶೀರ್ಷಿಕೆಯಡಿ ನಾವು, ನೆರವಾದವರು ಹಾಗೂ ನೆರವು ಯಾಚಿಸುವವರಿಗೆ ಸಂಬಂಧಿಸಿ ವರದಿ ಪ್ರಕಟಿಸುತ್ತೇವೆ. ಇದರಿಂದ ನಿಮ್ಮ ಕಾರ್ಯಕ್ಕೆ ಶ್ಲಾಘನೆ, ನೆರವು ನೀಡಲು ಪ್ರೇರಣೆ ಜೊತೆಗೆ ಅಗತ್ಯವುಳ್ಳವರಿಗೆ ನೆರವು ಸಿಗಬಹುದೆಂಬ ನಿರೀಕ್ಷೆ ನಮ್ಮದು. ಒಂದು ಮಾತು, ನೀವು ಸಹಾಯಮಾಡುತ್ತಿರುವ ಭಾವಚಿತ್ರವನ್ನು ನಾವಿಲ್ಲಿ ಪ್ರಕಟಿಸುವುದಿಲ್ಲ. ನಿಮ್ಮ/ಸಂಘಟನೆ ಹೆಸರು ಪ್ರಕಟಿಸುತ್ತೇವೆ. ನೀವು ಬಯಸಿದ್ದಲ್ಲಿ ನಿಮ್ಮ/ ಸಂಘಟನೆ ಸದಸ್ಯರ ಭಾವಚಿತ್ರ ಮಾತ್ರ ಪ್ರಕಟಿಸುತ್ತೇವೆ. ಇನ್ನು ಸಹಾಯದ ನಿರೀಕ್ಷೆಯಲ್ಲಿರುವವರು ನೀವಾಗಿದ್ದರೇ, ನಿಮ್ಮ ಅನುಮತಿ ಇದ್ದಲ್ಲಿ ಮಾತ್ರ ಭಾವಚಿತ್ರ ಪ್ರಕಟಿಸುತ್ತೇವೆ.
ವಿವರಗಳನ್ನು ನಮ್ಮ ಸಂಖ್ಯೆ 6363376133 , 9019944921 ವಾಟ್ಸ್ಸ್ಯಾಪ್ ಮಾಡಿ. ಅಥವಾ [email protected] ಇ-ಮೈಲ್ ಮಾಡಿ.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.