ವಾಣಿಜ್ಯ ಜಾಹಿರಾತು

ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ 2022 ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದ್ದು, ವೇಟ್ ಲಿಫ್ಟಿಂಗ್ ನಲ್ಲಿ ಇದೀಗ ಮೂರನೇ ಚಿನ್ನದ ಪದಕ ಭಾರತಕ್ಕೆ ಒಲಿದಿದೆ.

ಭಾರತದ ವೇಟ್ ಲಿಫ್ಟರ್ ಅಚಿಂತಾ ಶೆಯುಲಿ 73 ಕೆ ಜಿ ವಿಭಾಗದಲ್ಲಿ 313 ಕೆ ಜಿ ಭಾರ ಎತ್ತಿ ಚಿನ್ನದ ಪದಕ ಪಡೆದಿದ್ದಾರೆ. 20 ವರ್ಷದ ಅಚಿಂತಾ ಮೊದಲ ಬಾರಿಗೆ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದಾರೆ.
ಮಲೇಷ್ಯಾದ ಎರ್ರಿ ಹಿದಾಯತ್ ಮುಹಮ್ಮದ್ ಅವರು ಈವೆಂಟ್‌ನಲ್ಲಿ ಎರಡನೇ ಅತ್ಯುತ್ತಮ ಲಿಫ್ಟರ್ ಆಗಿ ಬೆಳ್ಳಿಪದಕ ಪಡೆದಿದ್ದಾರೆ. ಅವರು 303 ಕೆಜಿ ಭಾರ ಎತ್ತಿದ್ದಾರೆ.

ಇದರೊಂದಿಗೆ ಭಾರತೀಯ ವೇಟ್‌ಲಿಫ್ಟಿಂಗ್ ತಂಡವು ಕ್ರೀಡಾಕೂಟದಲ್ಲಿ ಆರನೇ ಪದಕವನ್ನು ಪಡೆದುಕೊಂಡಿದೆ. ಇದಕ್ಕೂ ಮುನ್ನ ಪುರುಷರ 67 ಕೆಜಿ ವಿಭಾಗದಲ್ಲಿ 19 ವರ್ಷದ ಜೆರೆಮಿ ಲಾಲ್ರಿನ್ನುಂಗಾ ಹಾಗೂ ಮೀರಾಬಾಯಿ ಚಾನು 49 ಕೆ ಜಿ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ, 55 ಕೆ ಜಿ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಭಾರತದ ಸಂಕೇತ್ ಮಹಾದೇವ್ ಸರ್ಗಾರ್ ಬೆಳ್ಳಿ ಗೆಗ್ಗಿದ್ದರೆ, 61 ಕೆ ಜಿ ವಿಭಾಗದಲ್ಲಿ ಗುರುರಾಜ್ ಪೂಜಾರಿ ಕಂಚಿನಪದಕ ಗೆದ್ದಿದ್ದಾರೆ.

ಚಿನ್ನದ ಪದಕ ಗೆದ್ದಿರುವ ವೇಟ್‌ಲಿಫ್ಟರ್ ಅಚಿಂತಾ ಶೆಯುಲಿ ಅವರನ್ನು ಅಭಿನಂದಿಸಿದ ಪ್ರಧಾನಿ ನರೇಂದ್ರ ಮೋದಿ, `ಪ್ರತಿಭಾವಂತ ಅಚಿಂತಾ ಶೆಯುಲಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿರುವುದಕ್ಕೆ ಸಂತೋಷವಾಗಿದೆ. ಅವರು ಶಾಂತ ಸ್ವಭಾವ ಮತ್ತು ದೃಢತೆಗೆ ಹೆಸರುವಾಸಿಯಾಗಿದ್ದಾರೆ. ಅವರು ತುಂಬಾ ಶ್ರಮಿಸಿದ್ದಾರೆ. ಈ ವಿಶೇಷ ಸಾಧನೆ. ಅವರ ಮುಂದಿನ ಪ್ರಯತ್ನಗಳಿಗೆ ನನ್ನ ಶುಭಾಶಯಗಳು.” ಎಂದು ಅಭಿನಂದಿಸಿದ್ದಾರೆ. ಕಾಮನ್‌ವೆಲ್ತ್ ಗೇಮ್ಸ್‌ಗೆ ನಮ್ಮ ತಂಡ ಹೊರಡುವ ಮುನ್ನ ನಾನು ಅಚಿಂತಾ ಶೆಯುಲಿ ಅವರೊಂದಿಗೆ ಸಂವಾದ ನಡೆಸಿದ್ದೆ. ಅವರ ತಾಯಿ ಮತ್ತು ಸಹೋದರರಿಂದ ಅವರು ಪಡೆದ ಬೆಂಬಲವನ್ನು ನಾವು ಚರ್ಚಿಸಿದ್ದೇವೆ. ಪದಕ ಗೆದ್ದಿರುವ ಅವರು ಈಗ ಚಿತ್ರ ವೀಕ್ಷಿಸಲು ಸಮಯ ಸಿಗುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.