ಬೆಂಗಳೂರಿನ ಯಲಹಂಕದಲ್ಲಿ ನಡೆಯುತ್ತಿರುವ 2023ರ ಏರೋ ಇಂಡಿಯಾ ಶೋನಲ್ಲಿ ಭಾಗಿಯಾಗಲು ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದಾರೆ. ನಿನ್ನೆ ರಾತ್ರಿ ಬೆಂಗಳೂರಿಗೆ ಆಗಮಿಸಿದ್ದ ಮೋದಿ ಅವರಿಗಾಗಿ ಬೆಂಗಳೂರಿನ ರಾಜಭವನದಲ್ಲಿ ವಿಶೇಷ ಔತಣಕೂಟವನ್ನು ರಾಜ್ಯಪಾಲರು ಏರ್ಪಡಿಸಿದ್ದರು. ಈ ಔತಣ ಕೂಟದಲ್ಲಿ ಕೆಲ ಗಣ್ಯರಿಗೂ ಆಹ್ವಾನ ನೀಡಲಾಗಿದ್ದು ಇದರಲ್ಲಿ ನಟ ರಿಷಬ್ ಶೆಟ್ಟಿ ಕೂಡ ಭಾಗಿಯಾಗಿದ್ದರು ಎನ್ನಲಾಗುತ್ತಿದೆ.
ಕಾಂತಾರ ಸಿನಿಮಾದ ಮೂಲಕ ನಟ ರಿಷಬ್ ಶೆಟ್ಟಿ ದೇಶ, ವಿದೇಶದಲ್ಲೂ ಖ್ಯಾತಿ ಘಳಿಸಿದ್ದಾರೆ. ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳು ಕೂಡ ಕಾಂತಾರ ಸಿನಿಮಾವನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಇದೀಗ ಕಾಂತಾರ ಸಿನಿಮಾದ ಯಶಸ್ಸಿನ ಬಳಿಕ ನಟ ರಿಷಬ್ ಶೆಟ್ಟಿಯನ್ನು ಮೋದಿ ಜೊತೆ ಔತಣ ಕೂಟಕ್ಕೆ ಆಹ್ವಾನಿಸಲಾಗಿದ್ದು ರಿಷಬ್ ಔತಣ ಕೂಟದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗುತ್ತಿದೆ. ರಿಷಬ್ ಜೊತೆಗೆ ನಟ ಯಶ್, ವಿಜಯ ಕಿರಗಂದೂರು, ಅಶ್ವಿನಿ ಪುನೀತ್ ರಾಜ್ ಕುಮಾರ್, ಶೃದ್ಧಾ ಜೈನ್, ಪ್ರಶಾಂತ್ ನೀಲ್ ಕೂಡ ಭಾಗಿಯಾಗಿದ್ದರು ಎಂದು ಹೇಳಲಾಗುತ್ತಿದೆ.
ಸಿನಿಮಾ ರಂಗದವರ ಜೊತೆ ಕ್ರಿಕೆಟಿಗರಾದ ಜಾವಗಲ್ ಶ್ರೀನಾಥ್, ಮನೀಶ್ ಪಾಂಡೆ, ಅನಿಲ್ ಕುಂಬ್ಳೆ, ಮಾಯಾಂಕ್ ಅಗರ್ವಾಲ್ ಅವರುಗಳು ಕೂಡ ಔತಣ ಕೂಟದಲ್ಲಿ ಭಾಗಿಯಾಗಿದ್ದರು.