ವಾಣಿಜ್ಯ ಜಾಹಿರಾತು
ಬೆಂಗಳೂರು: ಬಹುಭಾಷಾ ನಟಿ ಪ್ರಣೀತಾ ಸುಭಾಷ್, ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಪ್ರಣೀತಾ, ಉದ್ಯಮಿ ನಿತಿನ್ ರಾಜು ಅವರ ಜತೆ ಸಪ್ತಪದಿ ತುಳಿದಿದ್ದಾರೆ. ಕನಕಪುರ ರಸ್ತೆಯ ರೆಸಾರ್ಟ್‌ವೊಂದರಲ್ಲಿ ಮದುವೆ ನಡೆದಿದ್ದು, ಕೆಲವೇ ಕೆಲವು ಕುಟುಂಬಸ್ಥರು ಮತ್ತು ಆತ್ಮೀಯರು ಮಾತ್ರ ಮದುವೆಯಲ್ಲಿ ಭಾಗಿಯಾಗಿದ್ದರು. ದಂಪತಿಯ ಸ್ನೇಹಿತರೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ಮದುವೆಯ ಫೋಟೋ ಶೇರ್ ಮಾಡಿದ್ದಾರೆ.
ಪ್ರಣೀತಾ ಹಾಗೂ ನಿತಿನ್ ರಾಜು ದಂಪತಿ ಅದ್ಧೂರಿ ವಿವಾಹ ಸಮಾರಂಭ ಆಯೋಜಿಸಿದ್ದರು. ಆದರೆ ಕೋವಿಡ್ 2ನೇ ಅಲೆಯಿಂದಾಗಿ ಲಾಕ್ ಡೌನ್ ಹಿನ್ನಲೆ ಅದು ಸಾಧ್ಯವಾಗಿರಲಿಲ್ಲ. ಹೀಗಾಗಿ ತಮ್ಮ ಆತ್ಮೀಯರು ಹಾಗೂ ಸಂಬಂಧಿಕರ ಸಮ್ಮುಖದಲ್ಲಿ ಸರಳವಾಗಿ ವಿವಾಹವಾಗಿದ್ದಾರೆ. ಉದ್ಯಮಿಯಾಗಿರುವ ಪ್ರಣೀತಾ ಪತಿ ಕನ್ನಡಿಗರೇ ಆಗಿದ್ದು, ಬೆಂಗಳೂರಿನಲ್ಲಿ ಶಾಪಿಂಗ್ ಮಾಲ್ ಕೂಡಾ ಹೊಂದಿದ್ದಾರೆ ಎಂದು ತಿಳಿದುಬಂದಿದೆ. ಆದರೆ ನವಜೋಡಿ ಇಲ್ಲಿಯವರೆಗೂ ತಮ್ಮ ಮದುವೆಯ ಬಗ್ಗೆ ಎಲ್ಲಿಯೂ ಅಧಿಕೃತವಾಗಿ ಘೋಷಣೆ ಮಾಡಿಲ್ಲ.
ವಾಣಿಜ್ಯ ಜಾಹಿರಾತು