ವಾಣಿಜ್ಯ ಜಾಹಿರಾತು
ವಾಷಿಂಗ್ಟನ್: ಖ್ಯಾತ ನಟಿ ಪ್ರಿಯಾಂಕ ಚೋಪ್ರಾ ಸರೋಗಸಿ ಮೂಲಕ ಹೆಣ್ಣು ಮಗುವನ್ನು ಪಡೆದುಕೊಂಡಿದ್ದಾರೆ. ಇದುವರೆಗೂ ಮಗುವಿನ ಮುಖವನ್ನು ಎಲ್ಲೂ ರಿವೀಲ್ ಮಾಡದ ಪಿಂಕಿ ಇದೀಗ ಮೊದಲ ಭಾರಿಗೆ ಸಾರ್ವಜನಿಕವಾಗಿ ಮಗಳ ಮುಖವನ್ನು ತೋರಿಸಿದ್ದಾರೆ.
ಪ್ರಿಯಾಂಕ ಚೋಪ್ರಾ ಇದೀಗ ಮೊದಲ ಬಾರಿಗೆ ಮಗಳು ಮಾಲ್ತಿ ಮೇರಿ ಮುಖವನ್ನು ಸಾರ್ವಜನಿಕವಾಗಿ ತೋರಿಸಿದ್ದಾರೆ. ನಿಕ್ ಜೋನಸ್ ಸಹೋದರರು ಲಾಸ್ ಎಂಜಲೀಸ್ ನ ಹಾಲಿವುಡ್ ವಾಕ್ ಆಫ್ ಫೇಮ್ ಸ್ಟಾರ್ಸ್ ಪ್ರಶಸ್ತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ವೇಳೆ ಪ್ರಿಯಾಂಕ ತಮ್ಮ ಮಗಳ ಮುಖವನ್ನು ಮೊದಲ ಬಾರಿಗೆ ರಿವೀಲ್ ಮಾಡಿದ್ದಾರೆ.
ಪ್ರಶಸ್ತಿ ಪಡೆದ ಪತಿ ನಿಕ್ ಜೋನಸ್ ಹಾಗೂ ಸಹೋದರರಿಗೆ ಅಭಿನಂದನೆ ಸಲ್ಲಿಸಿರುವ ಪ್ರಿಯಾಂಕ ತನ್ನ ಮಗಳ ಮುಖವನ್ನು ಸಾರ್ವಜನಿಕರ ಮುಂದೆ ಮೊದಲ ಬಾರಿ ರಿವೀಲ್ ಮಾಡಿದ್ದಾರೆ. ಸದ್ಯ ಪ್ರಿಯಾಂಕ ಮಗಳು ಮಾಲ್ತಿ ಮೇರಿ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವಾಣಿಜ್ಯ ಜಾಹಿರಾತು