ಉಡುಪಿ: ದೇಶದಲ್ಲಿ ಎಲ್ಲಾ ಕಡೆ ಸಂಪೂರ್ಣ ಅನ್‌ಲಾಕ್ ಆದ ಬಳಿಕ ಶ್ರೀಕೃಷ್ಣನ ದರ್ಶನಕ್ಕೆ ಭಕ್ತರಿಗೆ ಅವಕಾಶ ನೀಡಲಾಗುವುದು ಎಂದು ಪರ್ಯಾಯ ಅದಮಾರು ಮಠದ ಈಶಪ್ರಿಯ ತೀರ್ಥರ ಹೇಳಿಕೆ ನೀಡಿದ್ದಾರೆ. ಕೃಷ್ಣ ಮಠದ ಪರಂಪರೆ ಉಳಿಸುವ ನಿಟ್ಟಿನಲ್ಲಿ ದೇಶದೆಲ್ಲೆಡೆ ಪರಿಸ್ಥಿತಿಯನ್ನು ನೋಡಿ ಕೃಷ್ಣಮಠದಲ್ಲಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು. ಅಲ್ಲಿಯವರೆಗೆ ಎಲ್ಲ ಭಕ್ತರು ಮನೆಯಲ್ಲಿಯೇ ಕೃಷ್ಣನಿಗೆ ಪ್ರಾರ್ಥನೆ ಸಲ್ಲಿಸಿ. ಶ್ರೀಕೃಷ್ಣಮಠದಲ್ಲಿ ಋತ್ವಿಜರು ನಿರಂತರವಾಗಿ ದೇಶಕ್ಕಾಗಿ ಪ್ರಾರ್ಥನೆಯನ್ನು ಮಾಡುತ್ತಾರೆ. ಆಯುರ್ವೇದದಲ್ಲಿ ಹೇಳಿದಂತೆ ಮನಸ್ಸಿನ ದೋಷಗಳೇ ಎಲ್ಲ ರೋಗಗಳಿಗೆ ಕಾರಣ. ಮನಸ್ಸು ಚೆನ್ನಾಗಿದ್ದರೆ ಎಂತಹ ರೋಗವನ್ನೂ ಗೆಲ್ಲಬಹುದು. ಎಲ್ಲರೂ ಮನಸ್ಸನ್ನು ಗಟ್ಟಿಯಾಗಿಸಿ, ಒಳ್ಳೆಯ ಚಿಂತನೆಯನ್ನು ಬೆಳೆಸಿಕೊಳ್ಳಿ. ಆಗ ರೋಗ ನಿರೋಧಕ ಶಕ್ತಿ ವೃದ್ಧಿಯಾಗುತ್ತದೆ. ದೇಶದ ಚಿಕಿತ್ಸಾ ಪದ್ಧತಿ ಫಲಕಾರಿ ಎಂಬುದು ಈಗ ಗೊತ್ತಾಗುತ್ತಿದೆ. ಅದು ಇವತ್ತು ಒಳ್ಳೆಯ ಫಲಕಾರಿ ಎಂದು ಕಾಣಿಸುತ್ತಿದೆ. ಅದನ್ನು ನಾವು ಬಳಸುವಲ್ಲಿ ಹಾಗೂ ಬೆಳೆಸುವಲ್ಲಿ ಮುಂದಿನ ದಿನಗಳಲ್ಲಿ ಚಿಂತನೆ ಮಾಡಲು ಒಂದು ಸದವಕಾಶವಾಗಿದೆ ಎಂದು ಪರ್ಯಾಯ ಶ್ರೀಗಳು ಸಲಹೆ ನೀಡಿದ್ದಾರೆ.
ಸಂಪೂರ್ಣ ಅನ್‌ಲಾಕ್ ಬಳಿಕ ಶ್ರೀಕೃಷ್ಣ ದರ್ಶನಕ್ಕೆ ಅವಕಾಶ-ಅದಮಾರು ಶ್ರೀ
ವಾಣಿಜ್ಯ ಜಾಹಿರಾತು
ವಾಣಿಜ್ಯ ಜಾಹಿರಾತು