ವಾಣಿಜ್ಯ ಜಾಹಿರಾತು

ಉಡುಪಿ: ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಉಡುಪಿಯಲ್ಲಿ ಆಚರಿಸಲಾಯಿತು. ಮಹಾತ್ಮಾ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಮೀನುಗಾರಿಕಾ ಸಚಿವ ಎಸ್.ಅಂಗಾರ ಅವರು ಧ್ವಜಾರೋಹಣ ನೆರವೇರಿಸಿ ಗೌರವ ರಕ್ಷೆ ಸ್ವೀಕರಿಸಿ ಪಥ ಸಂಚಲನವನ್ನು ವೀಕ್ಷಿಸಿದರು.

ಬಳಿಕ ಮಾತನಾಡಿದ ಅವರು,ದೇಶದ ಪರಂಪರೆಯನ್ನು ಗಮನಿಸಿದರೆ ಭಾರತ ಸರ್ವಸಮೃದ್ಧ ದೇಶವಾಗಿತ್ತು. ವಿಶ್ವದ ಎಲ್ಲ ನಾಗರಿಕತೆಗಳ ಮಂಚೂಣಿಯಲ್ಲಿ ಭಾರತ ಸ್ಥಾನ ಪಡೆದಿತ್ತು. ವೇದ ಉಪನಿಷತ್ತುಗಳ ನೆಲೆವೀಡಾಗಿತ್ತು. ಆಧ್ಯಾತ್ಮಿಕ ಮತ್ತು ಪಾರಮಾರ್ಥಿಕ ಚಿಂತನೆ, ಚರ್ಚೆಗಳನ್ನು ನಡೆಸುತ್ತಿದ್ದ ಋಷಿಮುನಿಗಳಿದ್ದರು. ಪ್ರಕೃತಿಯ ಪ್ರಯೋಜನವನ್ನು ಕಂಡುಕೊಂಡಿದ್ದ ಆಯುರ್ವೇದ ಮತ್ತು ಯೋಗ ತಜ್ಞರಿದ್ದರು. ನಳಂದಾ ತಕ್ಷಶಿಲೆಯಂತಹ ವಿಶ್ವವಿದ್ಯಾಲಯಗಳಷ್ಟೇ ಅಲ್ಲದೆ ಗ್ರಾಮ ಗ್ರಾಮಗಳಲ್ಲಿಯೂ ಶಿಕ್ಷಣ ವ್ಯವಸ್ಥೆ ಇತ್ತು. ಲೋಹ ಮತ್ತು ಶಿಲ್ಪ ಕಲೆಗಳಲ್ಲಿ ಪರಮೋಚ್ಚ ಮಟ್ಟದಲ್ಲಿ ಸಾಧನೆ ಮಾಡಿ ದೇವಾಲಯಗಳನ್ನು ಕಟ್ಟಿದ ಕಲಾಪರಂಪರೆ, ಸಂಗೀತ ನೃತ್ಯಗಳ ಶಾಸ್ತ್ರಗಳನ್ನೇ ರಚಿಸಿದ್ದ ವಿದ್ವಾಂಸರಿದ್ದರು. ಬೇರೆಲ್ಲಿಯೂ ಇಲ್ಲದ ವೈಚಾರಿಕ ಸ್ವಾತಂತ್ರ್ಯ ಭಾರತದಲ್ಲಿತ್ತು. ಹಾಗಾಗಿಯೇ ಇಲ್ಲಿ ಜೈನ, ಬೌದ್ಧ, ಚಾರ್ವಾಕ, ದೈತ, ಅದೈತ, ವಿಶಿಷ್ಟಾದ್ವತ, ಬಸವ ಪಂಥ, ಭಕ್ತಿ ಪಂಥ ಮುಂತಾದ ಹೊಸ ಹೊಸ ಅಧ್ಯಾತ್ಮಿಕ ಮಾರ್ಗಗಳು ದೊರಕಿದವು. ಆದರೆ ದೇಶದ ಸಂಸ್ಕೃತಿ ಹಾಳು ಮಾಡಿದ ವಿದೇಶೀ ಆಕ್ರಮಣಕಾರರು ಮತ್ತು ಬ್ರಿಟೀಷರು ಸಾಮ್ರಾಜ್ಯಶಾಹಿ ಕುಟಿಲ ನೀತಿಗಳಿಂದ ನಮ್ಮನ್ನು ಆಳಿದ್ದರು ಎಂದರು.

ಬ್ರಿಟಿಷರ ಅಧೀನದಲ್ಲಿದ್ದಾಗ ನಮ್ಮ ಅಭಿವೃದ್ಧಿಯ ಯೋಜನೆಗಳನ್ನು ನಾವು ರೂಪಿಸುವಂತಿರಲಿಲ್ಲ. ಆದರೆ ಈಗ ನಾವೇ ನಮ್ಮ ಪ್ರಗತಿಯ ರೂವಾರಿಗಳಾಗಿದ್ದೇವೆ. ಕಳೆದ ೭೪74 ವರ್ಷಗಳಲ್ಲಿ ಹಂತ ಹಂತವಾಗಿ ಅಭಿವೃದ್ಧಿ ಸಾಧಿಸುತ್ತ ಬಂದಿದ್ದೇವೆ. ಮುಂದೆಯೂ ಪ್ರಮುಖ ಯೋಜನೆಗಳು ಪ್ರಜಾಪ್ರಭುತ್ವದ ನೆಲೆಯಲ್ಲಿ ರೂಪುಗೊಳ್ಳುತ್ತವೆ ಎಂದು ಹೇಳಿದರು.

ಶಾಸಕ ಕೆ.ರಘುಪತಿ ಭಟ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಮೈಸೂರು ಇಲೆಕ್ನಿಕಲ್ ಲಿಮಿಟೆಡ್ ಅಧ್ಯಕ್ಷ ಉದಯಕುಮಾರ್ ಶೆಟ್ಟಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮನೋಹರ ಕಲ್ಮಾಡಿ, ನಗರಸಭಾ ಅಧ್ಯಕ್ಷೆ ಸುಮಿತ್ರಾ ನಾಯಕ್ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಇತ್ತೀಚಿನ ಕಾಮನ್ವೆಲ್ತ್ ಗೇಮ್ಸ್‌ನ ವೆಯ್ಟ್‌ ಲಿಫ್ಟಿಂಗ್‌ನಲ್ಲಿ ಕಂಚಿನ ಪದಕ ಪಡೆದ ಗುರುರಾಜ್ ಪೂಜಾರಿ, ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಜಿಲ್ಲಾಡಳಿತದ ವತಿಯಿಂದ ಸನ್ಮಾನಿಸಲಾಯಿತು.

ಉಡುಪಿ ಶಾಸಕ ರಘುಪತಿ ಭಟ್, ನಗರ ಸಭಾಧ್ಯಕ್ಷೆ ಸುಮೀತ್ರಾ ನಾಯಕ್, ಜಿಲ್ಲಾಧಿಕಾರಿ ಕೂರ್ಮ ರಾಮ್ ಎಮ್, ಪೊಲೀಸ್ ವರಿಷ್ಠಾಧಿಕಾರಿ ಎನ್ ವಿಷ್ಣುವರ್ಧನ್, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಕುಮಾರ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ ಹಾಗೂ ಇತರರು ಉಪಸ್ಥಿತರಿದ್ದರು.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.