ಸುಳ್ಯ: ಮನೆಯೊಡತಿಯ ಕೊಲೆಗೆ ಯತ್ನಿಸಿ ನಗದು, ಚಿನ್ನಾಭರಣ ದೋಚಲು ಸ್ಕೇಚ್ ಹಾಕಿದ್ದ ಇಬ್ಬರು ತೋಟದ ಕೆಲಸಗಾರರನ್ನು ಪೊಲೀಸರು ಬಂಧಿಸಿರುವ ಘಟನೆ ಪಂಬೆತ್ತಾಡಿ ಗ್ರಾಮದ ಕರಿಕ್ಕಳ ಎಂಬಲ್ಲಿ ನಡೆದಿದೆ.
ವರದರಾಜ್ (30), ಪಿ.ಪಿ. ಹಾಗೂ ಸೈಜಾನ್ ಪಿ.ಪಿ. (38) ಬಂಧಿತ ಆರೋಪಿಗಳು.
ಬಂಧಿತ ಆರೋಪಿಗಳಾದ ವರದರಾಜ್ ಹಾಗೂ ಸೈಜಾನ್ ಕಳೆದ ನಾಲ್ಕು ತಿಂಗಳಿನಿಂದ ಕರಿಕ್ಕಳದ ವಿಶ್ವನಾಥ್ ಅವರ ತೋಟದಲ್ಲಿ ಕೂಲಿ ಕೆಲಸ ಮಾಡಿಕೊಂಡು, ಮನೆ ಸಮೀಪದ ಕೊಟ್ಟಿಗೆಯಲ್ಲಿ ವಾಸವಾಗಿದ್ದರು. ಮಾ. 2ರಂದು ಸಂಜೆ ಇಬ್ಬರು ಪಂಜ ಪೇಟೆಗೆ ಹೋಗುವುದಾಗಿ ಹೇಳಿ ತಲಾ 200 ರೂ. ಪಡೆದು ಪೇಟೆಗೆ ತೆರಳಿ ವಾಪಸ್ ಆಗಿದ್ದಾರೆ. ಬಳಿಕ ರಾತ್ರಿ ಸುಮಾರು 9.30ರ ವೇಳೆಗೆ ಆರೋಪಿಗಳು ಮನೆಯ ಮಹಡಿಯನ್ನು ಹತ್ತಿ ಕೊಲೆ ಮಾಡಲು ಯತ್ನಿಸಿದ್ದಾರೆ.
ಮಹಡಿಯಲ್ಲಿದ್ದ ಮನೆ ಮಾಲಕ ವಿಶ್ವನಾಥ್ ಅವರ ಪತ್ನಿ ಗಾಯತ್ರಿ (61) ಅವರ ಕುತ್ತಿಗೆಯನ್ನು ವರದರಾಜ್ ಅದುಮಿ ಹಿಡಿದರೆ, ಮತ್ತೋರ್ವ ಆರೋಪಿ ಗಾಯತ್ರಿ ಅವರ ಎರಡು ಕಾಲುಗಳನ್ನು ಅದುಮಿ ಹಿಡಿದು ಚಿನ್ನ ಮತ್ತು ಹಣ ಎಲ್ಲಿದೆ ಎಂದು ಕೇಳಿದ್ದಾರೆ. ಈ ವೇಳೆ ಗಾಯತ್ರಿ ಚಿನ್ನಾಭರಣ ಇಲ್ಲ ಎಂದಾಗ ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ.
ಈ ವೇಳೆ ಗಾಯತ್ರಿ ಅವರು ಕೂಗಿಕೊಡ್ಡಿದ್ದು ಕೇಳಿ ಮನೆ ಸಮೀಪದ ಸುರೇಶ್ ಹಾಗೂ ಕೆಲಸದ ಪ್ರೇಮಾ ಅಲ್ಲಿಗೆ ಬಂದು ಆರೋಪಿಗಳನ್ನು ಹಿಡಿಯುವಷ್ಟರಲ್ಲಿ ವರದರಾಜ್ ಆಯುಧದಿಂದ ಗಾಯತ್ರಿ ಅವರ ಕುತ್ತಿಗೆಗೆ ಎರಡು ಕಡೆ ಇರಿದ್ದಾರೆ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡ ಗಾಯತ್ರಿ ಅವರನ್ನು ಕಡಬ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಗಾಯತ್ರಿ ಅವರ ಪತಿಗೆ ವಿಶ್ವನಾಥ್ ಗೆ ನಡೆದಾಡಲು ಸಾಧ್ಯವಿಲ್ಲ. ಇದನ್ನು ಮೊದಲೇ ತಿಳಿದಿದ್ದ ಆರೋಪಿಗಳು ಕೊಲೆಗೆ ಸಂಚು ರೂಪಿಸಿ ಚಿನ್ನಾಭರಣ ದೋಚಲು ಪ್ಲ್ಯಾನ್ ಮಾಡಿದ್ದರು ಎನ್ನಲಾಗಿದೆ.