ವಾಣಿಜ್ಯ ಜಾಹಿರಾತು
ಮಥುರಾ: ಯೋಗಗುರು ಬಾಬಾ ರಾಮ್ ದೇವ್ , ಆನೆ ಮೇಲೆ ಕುಳಿತು ಯೋಗ ಮಾಡಲು ಹೋಗಿ ಆಯತಪ್ಪಿ ಕೆಳಕ್ಕೆ ಬಿದ್ದಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಥುರಾದಲ್ಲಿ ರಾಮ್ ದೇವ್ ಆನೆ ಮೇಲೆ ಕುಳಿತು ಯೋಗದಲ್ಲಿ ನಿರತರಾಗಿದ್ದ ವೇಳೆ, ಆನೆ ತುಸು ದೇಹ ಅಲುಗಾಡಿಸಿದಾಗ, ಆಯತಪ್ಪಿ ಜಾರಿ ಕೆಳಕ್ಕೆ ಬಿದ್ದಿರುವ ದೃಶ್ಯ ಇದಾಗಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ನೆಟ್ಟಿಗರಲ್ಲಿ ಅನೇಕರು ತಮಾಷೆ ಮಾಡಿದ್ದರೆ, ಇನ್ನು ಕೆಲವರು, ಬಾಬಾ ರಾಮ್ ದೇವ್ ನೆಲಕ್ಕೆ ಬಿದ್ದರೂ ತಕ್ಷಣ ಎದ್ದು ನಡೆದಿದ್ದಾರೆ. ಇದು ಯೋಗದ ಪವರ್ ಎಂಬುದಾಗಿ ಹೇಳಿದ್ದಾರೆ.
Ramdev does yoga on elephant .. FALLS 😁😁😁😁😁😁😁😁😁😁
pic.twitter.com/6RbuHDzXZq— Niraj Bhatia (@bhatia_niraj23) October 13, 2020
ವಾಣಿಜ್ಯ ಜಾಹಿರಾತು