ಬಾದಾಮಿ ಎಂದು ಹೇಳಿದಾಗ ಸಾಮಾನ್ಯವಾಗಿ ಎಲ್ಲರೂ ಒಮ್ಮೆ ಹುಬ್ಬೇರಿಸುತ್ತಾರೆ. ಬಾದಾಮಿ ತುಂಬಾ ದುಬಾರಿಯಾಗಿರುವುದರಿಂದ ಶ್ರೀಮಂತರ ಆಹಾರ ತಿನಿಸು ಎಂಬ ಮಾತಿದೆ. ಬಾದಾಮಿಯನ್ನು ಆಹಾರದ ದೃಷ್ಟಿಯಲ್ಲಿ ಉಪಯೋಗಿಸುವುದರ ಜೊತೆಗೆ ಸೌಂದರ್ಯ ವರ್ಧಕವಾಗಿಯೂ ಬಳಸಬಹುದು. ಬಾದಾಮಿಯು ವಿಟಮಿನ್ ಇ ಯನ್ನು ಹೊಂದಿದ್ದು, ಚರ್ಮದ ಆರೋಗ್ಯಕ್ಕಾಗಿ ಬಲು ಪ್ರಯೋಜನಕಾರಿ.
ಬೇಸಿಗೆ ಆರಂಭವಾಗುತ್ತಿದ್ದಂತೆ ಚರ್ಮದ ಆರೈಕೆಯ ಕುರಿತಾಗಿ ಹೆಚ್ಚಿನ ಗಮನವನ್ನು ನೀಡಲೇಬೇಕು. ಎಲ್ಲರೂ ಒಂದೇ ತರನಾದ ಚರ್ಮವನ್ನು ಹೊಂದಿರುವುದಿಲ್ಲ. ಎಲ್ಲಾ ತರಹದ ಚರ್ಮಕ್ಕೆ ಹೊಂದುವಂತೆ ಇಲ್ಲಿ ಕೆಲವು ಬಾದಾಮಿಯ ಫೇಸ್ ಪ್ಯಾಕ್‌ಗಳನ್ನು ತಯಾರಿಸುವ ವಿಧಾನವನ್ನು ತಿಳಿಸಲಾಗಿದೆ. ನಿಮ್ಮ ಚರ್ಮದ ಶೈಲಿಯನ್ನು ತಿಳಿದು ಚರ್ಮದ ಪ್ರಕಾರಕ್ಕೆ ಹೊಂದುವಂತೆ ಫೇಸ್ ಪ್ಯಾಕ್ ಗಳನ್ನು ಬಳಸಬಹುದು.
ಒಣ ಚರ್ಮಕ್ಕಾಗಿ :
ಒಂದು ಚಮಚ ರುಬ್ಬಿದ ಓಟ್ಸ್, ಒಂದು ಚಮಚ ಬಾದಾಮಿ ಪುಡಿ, ಒಂದರಿಂದ ಎರಡು ಚಮಚ ಹಸಿ ಹಾಲು ಮಿಶ್ರಣ ಮಾಡಿ ಪೇಸ್ಟ್ ತಯಾರಿಸಬೇಕು. ಈ ಪೇಸ್ಟ್ ಮುಖದ ಎಲ್ಲಾ ಭಾಗಗಳಿಗೆ ಹಚ್ಚಿ ವೃತ್ತಾಕಾರದಲ್ಲಿ ನಿಧಾನವಾಗಿ ಮಸಾಜ್ ಮಾಡಬೇಕು. 15 ನಿಮಿಷಗಳ ನಂತರ ತಣ್ಣಗಿನ ನೀರಿನಿಂದ ಮುಖವನ್ನು ತೊಳೆಯಬೇಕು.
ಎಣ್ಣೆ ಚರ್ಮಕ್ಕಾಗಿ :
ಒಂದು ಚಮಚ ಮುಲ್ತಾನಿ ಮಿಟ್ಟಿ, ಒಂದರಿಂದ ಎರಡು ಚಮಚ ಬಾದಾಮಿ ಪುಡಿ, ಕೆಲವು ಹನಿ ರೋಸ್ ವಾಟರ್ ಸೇರಿಸಿ ನಯವಾದ ಪೇಸ್ಟ್ ತಯಾರಿಸಬೇಕು. ಈ ಪ್ಯಾಕ್‌ನ್ನು ಮುಖಕ್ಕೆ ಹಚ್ಚಬೇಕು. 10 ನಿಮಿಷಗಳ ನಂತರ ತಣ್ಣೀರಿನಿಂದ ಮುಖವನ್ನು ತೊಳೆಯಬೇಕು.
ಸೂಕ್ಷ ಚರ್ಮಕ್ಕಾಗಿ :
ಎರಡು ಚಮಚ ಹಸಿ ಹಾಲು, ಒಂದು ಚಮಚ ಬಾದಾಮಿ ಪುಡಿಯನ್ನು ಮಿಶ್ರಣ ಮಾಡಬೇಕು. ಈ ಪ್ಯಾಕ್‌ನ್ನು ಮುಖಕ್ಕೆ ಹಚ್ಚಬೇಕು. 10-15 ನಿಮಿಷಗಳ ನಂತರ ಮುಖವನ್ನು ತಣ್ಣೀರಿನಿಂದ ತೊಳೆಯಬೇಕು.