ಮಾಡೆಲ್ ಎಂದರೆ ಸ್ಟೈಲಿಶ್ ಆಗಿರಬೇಕು, ಒಳ್ಳೆಯ ವ್ಯಕ್ತಿತ್ವ, ಅಂದವಾದ ಚಹರೆಯ ಜೊತೆಗೆ ಬುದ್ಧಿವಂತಿಕೆಯೂ ಬೇಕು. ಈ ಹಾದಿಯಲ್ಲಿ ದಿನಂಪ್ರತಿ ಅದೆಷ್ಟೋ ಯುವಕ-ಯುವತಿಯರು ಕನಸು ನನಸಾಗಿಸಲು ಪ್ರಯತ್ನಿಸುತ್ತಿರುತ್ತಾರೆ. ಆದರೆ ಇಲ್ಲೋರ್ವ ಬಲೂನ್ ಮಾರುವ ಹುಡುಗಿ ರಾತ್ರಿ ಬೆಳಗಾಗುವುದರೊಳಗಾಗಿ ಮಾಡೆಲ್ ಆಗಿ ಮಿಂಚಿರುವುದಷ್ಟೇ ಅಲ್ಲ, ಸಾಮಾಜಿಕ ಜಾಲಾತಾಣದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ.
ಹೌದು, ಜನವರಿ 17ರಂದು ಆಂಡಲೂರಿನ ಕಾವು ಉತ್ಸವದಲ್ಲಿ ಬಲೂನ್ ಮಾರಾಟ ಮಾಡುತ್ತಿದ್ದ ಈ ಹುಡುಗಿಯ ಹೆಸರು ಕಿಸ್ಬು. ಇದೀಗ ಕಿಸ್ಬು ಕಿಸ್ಮತ್ ಬದಲಾಗಿದೆ. ಒಂದೇ ದಿನದಲ್ಲಿ ಬಲೂನ್ ಮಾರುತ್ತಿದ್ದ ಈ ಹುಡುಗಿ ಮಾಡೆಲ್ ಆಗಿ ಮಿಂಚುತ್ತಿದ್ದಾರೆ.
ಕೇರಳದ ದೇವಸ್ಥಾನದ ಮುಂಭಾಗದಲ್ಲಿ ಬಲೂನ್ ಮಾರಾಟ ಮಾಡುತ್ತಿದ್ದ ಈ ಹುಡುಗಿಯು ಛಾಯಾಗ್ರಾಹಕ ಅರ್ಜುನ್ ಕಣ್ಣಿಗೆ ಕಂಡಿದ್ದು, ತ್ವರಿತವಾಗಿ ಆಕೆಯ ಕೆಲವೊಂದು ಚಿತ್ರಗಳನ್ನು ತನ್ನ ಕ್ಯಾಮೆರಾದಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಈಕೆಯ ಸೊಬಗಿನ ಚಿತ್ರಗಳು ಎಲ್ಲೆಡೆಯು ಸಂಚಲನ ಮೂಡಿಸುವುದರೊಂದಿಗೆ ಆಕೆಯು ಫೋಟೋಶೂಟ್ ನಲ್ಲಿ ಭಾಗವಹಿಸುವಂತೆ ಮಾಡಿತು.
ಸಾಮಾಜಿಕ ಜಾಲತಾಣದಲ್ಲಿ ಚಿತ್ರಗಳು ವೈರಲ್ ಆಗುತ್ತಿದ್ದಂತೆಯೇ ಕಿಸ್ಬು ಅವರ ಕುಟುಂಬವು ಫೋಟೋ ಶೂಟ್ ಗೆ ಒಪ್ಪಿಗೆ ನೀಡಿ ಬಳಿಕ ಇವರಿಗೆ ಮೇಕಪ್ ಕಲಾವಿದೆ ರೆಮ್ಯಾ ಪ್ರಜುಲಾ ಇವರು ತಮ್ಮ ಮೇಕ್ ಓವರ್ ನಿಂದ ಕಿಸ್ಬುವನ್ನು ಮಾಡೆಲ್ ರೂಪಕ್ಕೆ ಬದಲಾಯಿಸಲಾಯಿತು.
ಪೋಟೋಶೂಟ್‌ಗಾಗಿ ಕಿಸ್ಬುವಿಗೆ ಸಾಂಪ್ರಾದಾಯಿಕ ಸೀರೆ ಮತ್ತು ಆಭರಣಗಳಿಂದ ಅಲಂಕಾರ ಮಾಡಲಾಗಿತ್ತು. ಶೂಟಿಂಗ್ ನ ಎಲ್ಲಾ ಚಿತ್ರಗಳನನ್ನು ಅರ್ಜುನ್ ಕೃಷ್ಣ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದು ಅಗಾಧ ಪ್ರತಿಕ್ರಿಯೆಯ ಜತೆಗೆ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ. ಹಾಗೆಯೇ ಹತ್ತಾರು ಲೈಕ್‌ಗಳ ಜತೆಗೆ ಅಭಿನಂದನೆಯ ಪೂರವೇ ಹರಿದು ಬಂದಿದೆ.
ಇತ್ತೀಚೆಗಷ್ಟೇ ಕೇರಳದ ಕೋಝಿಕ್ಕೋಡ್ ಜಿಲ್ಲೆಗೆ ಸೇರಿದ್ದ ದಿನಗೂಲಿ ಕಾರ್ಮಿಕರಾಗಿದ್ದ ಮಮ್ಮಿಕ್ಕಾ ಎಂಬವರ ಮಾಡೆಲಿಂಗ್ ಶೂಟ್ ಗಳು ಎಲ್ಲರ ಗಮನಸೆಳೆದು ಸಾಕಷ್ಟು ವೈರಲ್ ಆಗಿತ್ತು. ಇದೀಗ ಈ ಸಾಲಿಗೆ ಬಲೂನ್ ಮಾರುತ್ತಿದ್ದ ಹುಡುಗಿ ಕಿಸ್ಬು ಕೂಡ ಸೇರಿದ್ದಾರೆ. ಅದೃಷ್ಟ ಎನ್ನುವುದು ಮಳೆಯ ಜತೆಗೆ ಬರುವ ಮಿಂಚಿನ ಬೆಳಕಿದ್ದಂತೆ, ಯಾವಾಗ ಎಲ್ಲಿ ಪ್ರಕಾಶವಾಗುವುದೆಂದು ತಿಳಿಯುವುದಿಲ್ಲ. ರಾತ್ರೋರಾತ್ರಿ ಸ್ಟಾರ್ ಆಗಿ ಮಿಂಚಬೇಕೆನ್ನುವ ಕನಸು ಎಲ್ಲರಲ್ಲಿದ್ದರು ಅವಕಾಶ ಸಿಗುವುದು ಬೆರಳೆಣಿಕೆಯಷ್ಟು ಮಂದಿಗೆ ಮಾತ್ರ.