ಬೆಂಗಳೂರು : ‘ಇದು ಎಂಥಾ ಲೋಕವಯ್ಯ’ ಕನ್ನಡ ಸಿನೆಮಾ ಪ್ರತಿಷ್ಠಿತ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವದ ಕನ್ನಡ ಸಿನೆಮಾ ಸ್ಪರ್ಧಾ ವಿಭಾಗಕ್ಕೆ ಅಧೀಕೃತವಾಗಿ ಆಯ್ಕೆಯಾಗಿದೆ.
‘ಇದು ಎಂಥಾ ಲೋಕವಯ್ಯ’ ಸಿನೆಮಾ ನಮ್ಮ ಸುತ್ತ ನಡೆಯುವ ನೈಜ ಘಟನೆಗಳನ್ನು ಪೋಣಿಸಿ ಕಾಲ್ಪನಿಕ ಹಂದರದಲ್ಲಿ ಮನೋಜ್ಞವಾಗಿ ಹೊರತರಲಾಗಿದ್ದು, ಈ ಸಿನೆಮಾವನ್ನು ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವದ ಕನ್ನಡ ಸಿನೆಮಾ ಸ್ರ‍್ಧಾ ವಿಭಾಗಕ್ಕೆ ಆಯ್ಕೆ ಮಾಡಿದ ಜ್ಯೂರಿಗಳಿಗೆ, ಆಯ್ಕೆ ಸಮಿತಿ ಸದಸ್ಯರಿಗೆ, ಸಿನೆಮಾದ ಕಲಾವಿದರಿಗೆ, ತಂತ್ರಜ್ಞರಿಗೆ ಹಾಗೂ ವಿಶೇಷವಾಗಿ ನಿರ್ದೇಶಕ ಸಿತೇಶ್ ಸಿ ಗೋವಿಂದ್ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ನಿರ್ಮಾಪಕ ಮಂಗಲ್ಪಾಡಿ ನರೇಶ್ ನಾಮದೇವ್ ಶೆಣೈ ತಿಳಿಸಿದ್ದಾರೆ.
‘ಇದು ಎಂಥಾ ಲೋಕವಯ್ಯ’ ಚಿತ್ರವು ಮಂಗಳೂರಿನ ಸಣ್ಣ ನಗರದಲ್ಲಿ ಭಾನುವಾರ ಮತ್ತು ಸೋಮವಾರದಂದು ನಡೆಯುವ ಬಹು ಘಟನೆಗಳ ಕುರಿತಾಗಿದೆ. ನಾಯಕ, ನಾಯಕಿ ಇಲ್ಲದೇ ಚಿತ್ರಕಥೆಯೇ ಈ ಸಿನೆಮಾದ ಜೀವಾಳವಾಗಿದೆ. ಆಧುನಿಕ ಆಯಾಮಗಳಲ್ಲಿ ಚಿತ್ರಿತವಾಗಿರುವ ಈ ಸಿನೆಮಾ ಕರಾವಳಿಯ ಮಣ್ಣಿನಲ್ಲಿಯೇ ಮೂಡಿಬಂದಿದೆ.
ಸಿತೇಶ್ ಸಿ ಗೋವಿಂದ್ ಈ ಸಿನೆಮಾದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಈ ಸಿನೆಮಾವನ್ನು ನಿರ್ಮಿಸಿರುವ ಮಂಗಲ್ಪಾಡಿ ನರೇಶ್ ನಾಮದೇವ್ ಶೆಣೈ ಅವರಿಗೆ ಇದು ಚೊಚ್ಚಲ ಪ್ರಯತ್ನವಾಗಿದೆ.