ಬಂಟ್ವಾಳ: ರಸ್ತೆ ದಾಟುತ್ತಿದ್ದ ವೇಳೆ ಅಪರಿಚಿ ವ್ಯಕ್ತಿಯೊಬ್ಬರಿಗೆ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೂ ಗಂಭೀರವಾಗಿ ಗಾಯಗೊಂಡು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಬಂಟ್ವಾಳ ಸಮೀಪದ ಪೊನ್ನೊಡಿ ಎಂಬಲ್ಲಿ ನಡೆದಿದೆ.
ಬಿ.ಮೂಡ ಗ್ರಾಮದ ಪೊನ್ನೊಡಿ ಎಂಬಲ್ಲಿ ಟಾಟ ಇಂಟ್ರಾ ವಾಹನೊಂದು ರಸ್ತೆ ದಾಟುತ್ತಿದ್ದ ಅಪರಿಚಿತ ವ್ಯಕ್ತಿಯೊರ್ವನಿಗೆ ಡಿಕ್ಕಿ ಹೊಡೆದಿದೆ. ವಾಹ ಡಿಕ್ಕಿ ಹೊಡೆದ ರಭಸಕ್ಕೆ ವ್ಯಕ್ತಿಯೂ ರಸ್ತೆಗೆ ಬಿದ್ದಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಸ್ಥಳೀಯರು ವ್ಯಕ್ತಿಯನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸದ್ಯ ಗಾಯಳುವಿಗೆ ಐಸಿಯು ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಆತನ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಗಾಯಳುವಿನ ಫೋಟೋ ಹಂಚಿಕೊಂಡಿರುವ ಪೊಲೀಸರು ವ್ಯಕ್ತಿಗೆ ಸಂಬಂಧ ಪಟ್ಟವರು ಫೋಟೋ ನೋಡಿ ಗುರುತು ಪತ್ತೆ ಹಚ್ಚಿದರೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ. ಅಥವಾ ಮೆಲ್ಕಾರ್ ಟ್ರಾಫಿಕ್ ಮೂರ್ತಿ ಅವರನ್ನು ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.