ವಾಣಿಜ್ಯ ಜಾಹಿರಾತು

ಬೆಂಗಳೂರು: ಸೌತ್‍ ಇಂಡಿಯಾ ಅಂದ್ರೆ ಸಾಕು ಇಡ್ಲಿ-ಸಾಂಬಾರ್ ಸಿಕ್ಕಾಪಟ್ಟೆ ಫೇಮಸ್‍..ಅದರಲ್ಲೂ ರವೆ ಇಡ್ಲಿ, ತಟ್ಟೆ ಇಡ್ಲಿ, ಮಸಾಲೆ ಇಡ್ಲಿ ಅಂತ ಹಲವು ವೆರೈಟಿ ಇಡ್ಲಿ ಸಿಗೋ ಕಾರಣ ಎಲ್ಲರೂ ಬಾಯಿ ಚಪ್ಪರಿಸಿ ತಿನ್ನುವವರೇ. ಸದ್ಯ ಬೆಂಗಳೂರಿನ ಇಡ್ಲಿಯೊಂದು ಸಿಕ್ಕಾಪಟ್ಟೆ ಫೇಮಸ್‍ ಆಗಿದೆ.

ಬೆಂಗಳೂರಿನ ಹೋಟೆಲ್ ಒಂದರಲ್ಲಿ ಐಸ್ ಕ್ಯಾಂಡಿ ಆಕಾರದಲ್ಲಿರುವ ಇಡ್ಲಿ ರೆಡಿ ಮಾಡಲಾಗುತ್ತಿದೆ. ಐಸ್‍ ಕ್ಯಾಂಡಿ ಸ್ಟಿಕ್‍ನಲ್ಲಿ ಇಡ್ಲಿ, ಪಕ್ಕದಲ್ಲಿ ಸಾಂಬಾರ್, ಚಟ್ನಿ ಇಟ್ಟು ಸರ್ವ್ ಮಾಡಲಾಗುತ್ತಿದೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್‍ನಲ್ಲಿದೆ.

ಈ ವಿಶೇಷ ಇಡ್ಲಿಯ ಫೋಟೋವನ್ನು ಮಹೀಂದ್ರಾ ಕಂಪನಿ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಟ್ವೀಟ್ ಮಾಡಿದ್ದಾರೆ. ‘ಬೆಂಗಳೂರು ಭಾರತದ ಇನೋವೇಶನ್ ಕ್ಯಾಪಿಟಲ್, ಹಲವು ಅನಿರೀಕ್ಷಿತ ವಲಯಗಳಲ್ಲಿ ಇದರ ಕ್ರಿಯೇಟಿವಿಟಿಯನ್ನು ನೋಡಬಹುದು. ಐಸ್ ಕಡ್ಡಿಯ ಮೇಲೆ ಇಡ್ಲಿ, ಇದನ್ನು ಸಾಂಬಾರ್ ಹಾಗೂ ಚಟ್ನಿಯಲ್ಲಿ ಅದ್ದಿಕೊಂಡು ತಿನ್ನಬಹುದು’ ಎಂದು ಟ್ವೀಟ್ ಮಾಡಿದ್ದಾರೆ.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.