ವಾಣಿಜ್ಯ ಜಾಹಿರಾತು
ಪರ್ಕಳ: ಪರ್ಕಳದಿಂದ ಬ್ರಹ್ಮಾವರದ ವರೆಗೆ ಹಮ್ಮಿಕೊಂಡ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ಬೈಕ್ ರ್ಯಾಲಿಗೆ ಪರ್ಕಳದಲ್ಲಿ ಅದ್ಧೂರಿಯಾಗಿ ಚಾಲನೆ ನೀಡಲಾಯಿತು.
ಪರ್ಕಳದಲ್ಲಿ ಬಸ್ ನಿಲ್ದಾಣದ ಬಳಿ ಹಿರಿಯ ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪ ರ್ಯಾಲಿಗೆ ಚಾಲನೆ ನೀಡಿದರು. ಪರ್ಕಳದಲ್ಲಿ ಆರಂಭಗೊಂಡ ರ್ಯಾಲಿಯು ಮಣಿಪಾಲ, ಉಡುಪಿ ಹಾಗೂ ಸಂತೆಕಟ್ಟೆ ಮಾರ್ಗವಾಗಿ ಬ್ರಹ್ಮವಾರಕ್ಕೆ ತೆರಳಿತು.
ಬೈಕ್ ರ್ಯಾಲಿಯಲ್ಲಿ ಐದು ಸಾವಿರಕ್ಕೂ ಹೆಚ್ಚಿನ ಬೈಕ್ ಗಳು ಪಾಲ್ಗೊಂಡಿದ್ದವು. ಕೇಂದ್ರ ಸಚಿವ ಶೋಭಾ ಕರಂದ್ಲಾಜೆ, ಶಾಸಕರಾದ ಲಾಲಾಜಿ ಮೆಂಡನ್, ರಘುಪತಿ ಭಟ್, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮೊದಲಾದ ಮುಖಂಡರು ಭಾಗವಹಿಸಿದ್ದರು.
ವಾಣಿಜ್ಯ ಜಾಹಿರಾತು