ಮಂಗಳೂರು: ಯಾವಾಗಲು ಮೊಬೈಲ್ ಹಿಡಿದುಕೊಂಡು ಆಟವಾಡ್ತಿದ್ದ ಮಗನಿಗೆ ತಾಯಿ ಮೊಬೈಲ್ ಬಳಸದಂತೆ ಬುದ್ದಿವಾದ ಹೇಳಿದ್ದಕ್ಕೆ ಮನನೊಂದು 9ನೇ ತರಗತಿ ವಿದ್ಯಾರ್ಥಿ ನೇಣಿಗೆ ಶರಣಾಗಿರುವ ಘಟನೆ ನಗರದ ಪದವು ಗ್ರಾಮದ ಕೋಟಿಮುರ ಎಂಬಲ್ಲಿ ನಡೆದಿದೆ.
ಡ್ ಬ್ರಿಕ್ಸ್ ಅಪಾರ್ಟ್ಮೆಂಟ್ ನ ಜಗದೀಶ್ ಹಾಗೂ ವಿನಯ ದಂಪತಿ ಪುತ್ರ, ಕುಲಶೇಖರ ಸೇಕ್ರೆಡ್ ಹಾರ್ಟ್ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಜ್ಞಾನೇಶ್ (14) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.
ಮಗ ಯಾವಾಗಲು ಮೊಬೈಲ್ ಬಳಸುತ್ತಿದ್ದರಿಂದ ತಾಯಿ ಮೊಬೈಲ್ ಬಿಟ್ಟು ಓದಿನ ಕಡೆ ಗಮನ ಹರಿಸುವಂತೆ ಬುದ್ದಿವಾದ ಹೇಳಿದ್ದಾರೆ. ಇದರಿಂದ ಮನನೊಂದ ಜ್ಞಾನೇಶ್ ಸ್ನಾನ ಮಾಡಿ ಬರುವುದಾಗಿ ಹೇಳಿ ತಮ್ಮ ರೂಮಿಗೆ ಹೋಗಿದ್ದಾನೆ.
ಮಗ ಎಷ್ಟು ಹೊತ್ತಾದರೂ ರೂಮಿನಿಂದ ಹೊರ ಬರದಿರುವುದನ್ನು ನೋಡಿ ಗಾಭರಿಗೊಂಡ ತಾಯಿ ಪತಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಜ್ಞಾನೇಶ್ ತಂದೆ ಬಾತ್ ರೂಮ್ ಕಿಟಕಿ ಒಡೆದು ನೋಡಿದಾಗಿ ಜ್ಞಾನೇಶ್ ರೂಮಿನಲ್ಲಿ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಮಂಗಳೂರು ನಗರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.