ವಾಣಿಜ್ಯ ಜಾಹಿರಾತು

ಬೆಂಗಳೂರು: ‘ ಹೋಂವರ್ಕ್ ಮಾಡ್ಕೊಂಡು ಬಂದಿಲ್ವಾ? ಹಾಗಿದ್ರೆ 50 ಸಲ ಬಸ್ಕಿ ಹೊಡಿ’ ಎಂದು ಶಾಲೆಯಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಪನಿಶ್ ಮೆಂಟ್ ನೀಡುತ್ತಿದ್ದುದು ನಮಗೆಲ್ಲಾ ಗೊತ್ತೇ ಇದೆ. ಆದರೆ ನಿಮಗೆ ಗೊತ್ತಿರದ ಸಂಗತಿ ಏನು ಗೊತ್ತಾ, ಬಸ್ಕಿ ಶಿಕ್ಷೆಯಲ್ಲ, ಅದೊಂದು ಯೋಗ ಅನ್ನೋದು! ಹೌದು, ಇದನ್ನು ಸೂಪರ್ ಬ್ರೈನ್ ಯೋಗ ಅಂತಾರೆ. ಅಮೇರಿಕಾದಲ್ಲಿ ಇದು ಬಹಳ ಫೇಮಸ್. ಇದರ ಪ್ರಯೋಜನ ತಿಳಿದರೆ ನೀವೂ ಕೂಡ ಬಸ್ಕಿ ಹೊಡೆಯೋದಕ್ಕೆ ಶುರು ಮಾಡ್ತೀರಿ.

ಏನಿದರ ಪ್ರಯೋಜನ?

ಭಾರತದಲ್ಲಿ ಬಸ್ಕಿ ಎಂದು ಕರೆಯುವ ಸೂಪರ್ ಬ್ರೈನ್ ಯೋಗ ಮಾಡುವುದರಿಂದ ಮೆದುಳಿನ ಶಕ್ತಿ ಚುರುಕುಗೊಳ್ಳುತ್ತದೆ.ಬುದ್ಧಿಶಕ್ತಿ, ಏಕಾಗ್ರತೆ, ಜ್ಞಾಪಕ ಶಕ್ತಿಯೂ ಹೆಚ್ಚಾಗುತ್ತದೆ. ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಆಟಿಸಂ, ಅಲ್‌ಝೈಮರ್ ಮುಂತಾದ ತೊಂದರೆಯುಳ್ಳ ಮಕ್ಕಳು ಈ ಯೋಗಾಸನ ಕಲಿಯುವುದರಿಂದ ಉತ್ತಮ ಪರಿಣಾಮವನ್ನು ನಿರೀಕ್ಷಿಸಬಹುದು ಎನ್ನುತ್ತಾರೆ ಅಮೆರಿಕನ್ ಯೋಗ ತಜ್ಞರು.

ಪ್ರಮುಖವಾಗಿ ಮೆದುಳಿನ ಕಾರ್ಯಕ್ಷಮತೆ ವೃದ್ಧಿಸಲು ಈ ಯೋಗ ಸಹಕಾರಿಯಾಗಿದೆ. ನಾವು ನಮ್ಮ ಕಿವಿಗಳನ್ನು ಹಿಡಿದುಕೊಂಡಾಗ ಮೆದುಳಿಗೆ ಸೂಕ್ಷ್ಮವಾದ ಶಕ್ತಿತರಂಗಗಳು ರವಾನೆಯಾಗುತ್ತವೆ. ಇದು ತುಂಬಾ ಸರಳವಾದ ಯೋಗವಿಧಾನವಾಗಿದ್ದು, ಎಲ್ಲಾ ವಯಸ್ಸಿನವರೂ ಮಾಡಬಹುದಾಗಿದೆ.

ಬಸ್ಕಿ ಹೊಡೆಯೋದು ಹೇಗೆ?
ಬಸ್ಕಿ ಹೊಡೆಯೋದು ಹೇಗೆ ಅನ್ನೋದು ನಮಗೆ ಹೇಳಿಕೊಡಬೇಕಿಲ್ಲ. ಜೀವನದಲ್ಲಿ ಒಂದಲ್ಲ ಒಂದು ಸಲನಾದರೂ ಬಸ್ಕಿ ಹೊಡೆದೇ ಇರ್ತೇವೆ. ಆದರೆ ನಿಯಮಬದ್ಧವಾಗಿ ಬಸ್ಕಿ ಹೊಡೆಯುವ ವಿಧಾನ ಹೀಗಿದೆ.

ಮೊದಲು ನಿಮ್ಮ ನಾಲಗೆಯನ್ನು ಬಾಯಿಯ ಒಳಭಾಗದ ಮೇಲೆ, ಹಲ್ಲಿನ ಹಿಂಭಾಗ ಇರಿಸಿಕೊಳ್ಳಿ (ಲಾ ಹೇಳುವಾಗ ನಾಲಗೆಯನ್ನು ಹೇಗೆ ಇರಿಸುತ್ತಿರೋ ಹಾಗೆ) ವ್ಯಾಯಾಮ ಪೂರ್ಣವಾಗುವವರೆಗೂ ಹಾಗೇ ಇರಿಸಿಕೊಳ್ಳಬೇಕು.

ನಂತರ ನಿಮ್ಮ ಎಡಗೈಯನ್ನು ಬಲ ಕಿವಿಯ ಹಾಲೆಯ ಮೇಲೆ ಮತ್ತು ಬಲಗೈಯನ್ನು ಎಡ ಕಿವಿಯ ಹಾಲೆ ಮೇಲಿರಿಸಿ. ಗಮನಿಸಿ ನಿಮ್ಮ ಹೆಬ್ಬೆರಳು ಕಿವಿಯ ಮುಂಭಾಗದಲ್ಲಿರುವಂತೆ ನೋಡಿಕೊಳ್ಳಿ. ತೋರುಬೆರಲು ಹಿಂಭಾಗದಲ್ಲಿ.

ಎರಡೂ ಕಿವಿಯ ಹಾಲೆಯನ್ನುಒತ್ತುತ್ತಾ ನಿಧಾನವಾಗಿ ಉಸಿರಾಡುತ್ತಾ ಕುಳಿತುಕೊಳ್ಳುವ ಭಂಗಿಯಲ್ಲಿ ಬಗ್ಗಿ. ಉಸಿರನ್ನು ಹಾಗೆಯೇ ಹಿಡಿದಿಟ್ಟುಕೊಂಡು ನಿಧಾನವಾಗಿ ಎದ್ದು ನಿಲ್ಲುತ್ತಾ ಉಸಿರು ಬಿಡಿ.

ಇದನ್ನು 15 ರಿಂದ 21 ಬಾರಿ ಪುನರಾವರ್ತಿಸಿ. ಆದರೆ ನೆನಪಿಡಿ ವ್ಯಾಯಾಮ ಪೂರ್ತಿ ಮಾಡುವಲ್ಲಿವರೆಗೆ ನಾಲಿಗೆಯು ಬಾಯಿಯ ಒಳಭಾಗದ ಮೇಲ್ಭಾಗಕ್ಕೆ ತಾಗಿಕೊಂಡೇ ಇರಬೇಕು. ಕಿವಿಯ ಹಾಲೆಯನ್ನು ಹಿಡಿದುಕೊಂಡೇ ಇರಬೇಕು.

ಈ ಅಭ್ಯಾಸ ದಿನಕ್ಕೆ 3 ನಿಮಿಷ ಮಾಡಿದ್ರೆ ಸಾಕು, ಕೆಲ ತಿಂಗಳಿನಲ್ಲೇ ಅದರ ರಿಸಲ್ಟ್ ಕಾಣಬಹುದಾಗಿದೆ.

ಬಹುಷಃ ನಮ್ಮ ಶಿಕ್ಷಕರಿಗೂ ಇದು ಯೋಗ ಅನ್ನೋದು ಗೊತ್ತಿರ್ಲಿಕ್ಕಿಲ್ಲ. ಗೊತ್ತಿರುತ್ತಿದ್ರೆ ಎಲ್ಲಾ ವಿದ್ಯಾರ್ಥಿಗಳಿಗೂ ಬಸ್ಕಿ ಹೊಡೆಸುತ್ತಿದ್ದರೋ ಏನೋ.
ಈಗ ಹೇಳಿ ಬಸ್ಕಿ ಹೊಡೆಯೋದಕ್ಕೆ ನೀವು ರೆಡಿನಾ?

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.