ವಾಣಿಜ್ಯ ಜಾಹಿರಾತು

ವಾರಣಾಸಿ: ಕಾಶಿ ದೇವಸ್ಥಾನ ಶೀಘ್ರದಲ್ಲಿ ಅನ್ನಪೂರ್ಣ ದೇವಿಯ ಪುರಾತನ ವಿಗ್ರಹವನ್ನು ಕೆನಡಾದಿಂದ ಮರಳಿ ಪಡೆಯಲಿದೆ. ಸುಮಾರು 100 ವರ್ಷಗಳ ಹಿಂದೆ ವಾರಣಾಸಿಯಿಂದ ಕಳವುಗೊಂಡು ಕೆನಡಾದ ರೆಜಿನಾ ವಿಶ್ವವಿದ್ಯಾಲಯ ಸೇರಿದ್ದ ಈ ವಿಗ್ರಹವನ್ನು ಕೆನಡಾ ಭಾರತಕ್ಕೆ ಹಿಂದಿರುಗಿಸಿದೆ.
ನ.19ರಿಂದ 25ರವರೆಗೆ ಕೆನಡಾದ ವಾರ್ಸಿಟಿಯ ಆರ್ಟ್ ಗ್ಯಾಲರಿಯಲ್ಲಿ ವಿಶ್ವ ಪರಂಪರೆಯ ವಾರ ಆಚರಿಸುವ ಸಂದರ್ಭದಲ್ಲೇ ಮೂರ್ತಿಯನ್ನು ಹಿಂದಿರುಗಿಸಲು ನಿರ್ಧರಿಸಿದೆ.
ಮ್ಯಾಕೆಂಜಿ ಆರ್ಟ್ ಗ್ಯಾಲರಿಯಲ್ಲಿನ ರೆಜಿನಾ ವಿಶ್ವವಿದ್ಯಾಲಯದ ಸಂಗ್ರಹದಲ್ಲಿರುವ ಅನ್ನಪೂರ್ಣ ದೇವಿಯ ಪ್ರತಿಮೆ ಶೀಘ್ರ ತವರುಮನೆ ಸೇರಲು ಪ್ರಯಾಣ ಆರಂಭಿಸಲಿದೆ. ವಿಶ್ವವಿದ್ಯಾಲಯದ ಉಪಕುಲಪತಿ ಥಾಮಸ್ ಚೇಸ್ ಮತ್ತು ಭಾರತದ ಕೆನಡಾ ಹೈಕಮಿಷನರ್ ಅಜಯ್ ಬಿಸಾರಿಯಾ ನಡುವೆ ನ.19ರಂದು ನಡೆದ ಹಸ್ತಾಂತರ ಕಾರ್ಯಕ್ರಮದ ಬಳಿಕ ವಿಶ್ವವಿದ್ಯಾಲಯ ಪ್ರಕಟಣೆ ತಿಳಿಸಿದೆ. ಮ್ಯಾಕೆಂಜಿ ಆರ್ಟ್ ಗ್ಯಾಲರಿ, ಗ್ಲೋಬಲ್ ಅಫೇರ್ಸ್ ಕೆನಡಾ ಮತ್ತು ಕೆನಡಾ ಬಾರ್ಡರ್ ಸರ್ವಿಸಸ್ ಏಜೆನ್ಸಿಯ ಪ್ರತಿನಿಧಿಗಳು ಹಸ್ತಾಂತರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿಗ್ರಹ 18ನೇ ಶತಮಾನಕ್ಕೆ ಸೇರಿದ್ದು ಎಂದು ಅಂದಾಜಿಸಲಾಗಿದೆ. ಕೆನಡಾ ಸ್ವ ಆಸಕ್ತಿಯಿಂದ ವಿಗ್ರಹವನ್ನು ಹಿಂದಿರುಗಿಸಿದ್ದು, ಉಭಯ ರಾಷ್ಟ್ರಗಳ ಸ್ನೇಹ ಸಂಬಂಧಕ್ಕೆ ಉತ್ತೇಜನ ನೀಡಿದೆ ಎಂದು ಅಜಯ್ ಬಿಸಾರಿಯಾ ವಿಗ್ರಹ ಸ್ವೀಕರಿಸಿ ಧನ್ಯವಾದ ತಿಳಿಸಿದ್ದಾರೆ.
ಮ್ಯಾಕೆಂಜಿಯ ಶಾಶ್ವತ ಸಂಗ್ರಹದಲ್ಲಿ ಶತಮಾನದ ಹಿಂದೆ ಅನ್ನಪೂರ್ಣದೇವಿಯ ವಿಗ್ರಹವನ್ನು ತಪ್ಪಾಗಿ ಸೇರಿಸಲಾಗಿದೆ ಎಂದು ಕಲಾವಿದೆ ದಿವ್ಯಾ ಮೆಹ್ರಾ ತಮ್ಮ ಸಂಶೋಧನೆಯಿಂದ ತಿಳಿಸಿದ್ದಾರೆ. 1913ರಲ್ಲಿ ಕೆನಡಾದ ನಾರ್ಮನ್ ಮ್ಯಾಕೆಂಜಿ ಭಾರತಕ್ಕೆ ಭೇಟಿ ನೀಡಿದ ವೇಳೆ ಅಪರಿಚಿತ ವ್ಯಕ್ತಿಯೊಬ್ಬರು ಮ್ಯಾಕೆಂಜಿ ಅವರಿಗೆ ಈ ವಿಗ್ರಹವನ್ನು ಪಡೆಯುವ ಆಸಕ್ತಿ ಬಗ್ಗೆ ತಿಳಿದು ವಿಗ್ರಹವನ್ನು ಕದ್ದು ಹಸ್ತಾಂತರಿಸಿರುವ ಬಗ್ಗೆ ದಿವ್ಯಾ ತಿಳಿಸುತ್ತಾರೆ.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.