ವಾಣಿಜ್ಯ ಜಾಹಿರಾತು

ಸ್ಯಾನ್ ಜೋಸ್: ವಿಮಾನವೊಂದು ತುರ್ತು ಲ್ಯಾಂಡಿಂಗ್ ಸಂದರ್ಭ ರನ್ ವೇಯಿಂದ ಸ್ಕಿಡ್ ಆಗಿ ಎರಡು ಭಾಗವಾದ ಘಟನೆ ವರದಿಯಾಗಿದೆ. ಸರಕು ಸಾಗಾಟದ ಬೋಯಿಂಗ್-757 ವಿಮಾನವು ಜುವಾನ್ ಸಾಂತಾಮಾರಿಯಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗಿದ್ದು, ಯಾಂತ್ರಿಕ ವೈಫಲ್ಯದಿಂದಾಗಿ ತುರ್ತು ಲ್ಯಾಂಡಿಂಗ್‌ ಆದ ಸಂದರ್ಭ ಈ ಅವಘಡ ನಡೆದಿದೆ. ವಿಮಾನದಲ್ಲಿದ್ದ ಇಬ್ಬರು ಸಿಬ್ಬಂದಿಗಳು ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಅಪಘಾತದ ವಿಡಿಯೋ ವೈರಲ್ ಆಗಿದೆ.

ಈ ಘಟನೆಯ ಬೆನ್ನಲ್ಲೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚಲಾಯಿತು. ಪರಿಣಾಮವಾಗಿ 100 ಅಧಿಕ ವಿಮಾನಗಳು ಪ್ರಯಾಣ ಸ್ಥಗಿತಗೊಳಿಸಿದವು. ಇದೀಗ ಪರಿಸ್ಥಿತಿ ಸಹಜಸ್ಥಿತಿಗೆ ಮರಳಿದೆ ಎಂದು ವರದಿಯಾಗಿದೆ.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.