ಚರ್ಮದ ಹೊಳಪಿಗೆ ಹಣ್ಣು, ತರಕಾರಿಗಳ ಫೇಸ್‍ಪ್ಯಾಕ್
ನಾವು ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಚರ್ಮದ ಆರೈಕೆಯೂ ಮಾಡಬೇಕಾಗುತ್ತದೆ. ಇದಕ್ಕೆ ಅಂಗಡಿಗಳಲ್ಲಿ ಸಿಗುವ ಕ್ರೀಮ್‍ಗಳನ್ನಷ್ಟೇ ಅವಲಂಬಿಸಿದರೆ ಸಾಲದು ಮನೆಯಲ್ಲೇ ಹಣ್ಣು, ತರಕಾರಿಗಳಿಂದ ಫೇಸ್‍ಫ್ಯಾಕ್ ತಯಾರಿಸಿಕೊಳ್ಳಬಹುದು. ರಾಸಾಯನಿಕವಿರುವ ಕ್ರೀಮ್‍ಗಳು ಚರ್ಮಕ್ಕೆ ಹಾನಿಯುಂಟುಮಾಡುವ ಸಾಧ್ಯತೆಗಳಿರುತ್ತವೆ, ಆದ್ದರಿಂದ ತಾಜಾ ಹಣ್ಣು, ತರಕಾರಿಗಳನ್ನು ಬಳಸುವುದು ಉತ್ತಮ. ಹಣ್ಣು,...
ಖಾಯಿಲೆಗಳಿಂದ ದೂರವಿರಬೇಕಾ? ಹಾಗಿದ್ರೆ ನಿತ್ಯ ಸೇವಿಸಿ ಚುಕ್ಕಿ ಬಾಳೆಹಣ್ಣು
ಕೆಲವೊಂದು ಖಾಯಿಲೆಗಳಿಗೆ ನಮ್ಮ ಮನೆಗಳಲ್ಲೇ ಮದ್ದಿದೆ. ಹಣ್ಣು, ತರಕಾರಿ ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪ್ರತೀನಿತ್ಯ ಊಟದ ಬಳಿಕ ಬಾಳೆಹಣ್ಣು ಸೇವಿಸುವುದರಿಂದ ಔಷಧಗಳಿಂದ ಸಾಧ್ಯವಾದಷ್ಟು ದೂರವಿರಬಹುದು. ಅದರಲ್ಲೂ ಚುಕ್ಕಿ ಬಾಳೆಹಣ್ಣು ದೇಹದ ಆರೋಗ್ಯ ಕಾಪಾಡಿ ನಮಗೆ ಶಕ್ತಿ ತುಂಬುತ್ತದೆ. ಅದರಲ್ಲೂ...
ಸುಟ್ಟ ಗಾಯಗಳಿಗೆ ತಕ್ಷಣದ ಪರಿಹಾರ ಈ ಮನೆಮದ್ದುಗಳು
ಅಡುಗೆ ಮಾಡುವಾಗ ಬಿಸಿ ಪಾತ್ರೆಗಳನ್ನು ಮುಟ್ಟುವುದರಿಂದ ಅಥವಾ ಬಿಸಿ ಎಣ್ಣೆ ಸಿಡಿಯುವುದರಿಂದ ಕೈಸುಟ್ಟುಕೊಳ್ಳುವುದು ಸಾಮಾನ್ಯ. ಸರಿಯಾದ ಚಿಕಿತ್ಸೆ ಮಾಡದಿದ್ದರೆ ಇವು ಬಹುಕಾಲದ ತನಕ ಕಿರಿಕಿರಿಯನ್ನು ಉಂಟುಮಾಡಬಹುದು. ಸಣ್ಣ ಪುಟ್ಟ ಗಾಯಗಳಾದಾಗ ತಕ್ಷಣವೇ ಕೆಲವೊಂದು ಮನೆಮದ್ದುಗಳನ್ನು ಮಾಡುವುದರಿಂದ ಉರಿಯನ್ನು ಶಮನಗೊಳಿಸಬಹುದು. ಆದರೆ ಗಾಯದ ತೀವ್ರತೆ...
ಗಾಂಧಾರಿ ಮೆಣಸಿನಲ್ಲಿದೆ ಆರೋಗ್ಯದ ಗುಟ್ಟು
ಮೆಣಸು ಅಂದ್ರೆ ಖಾರ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ಈ ಮೆಣಸು ಖಾರವಾದರೂ ಹಲವರಿಗೆ ಪ್ರಿಯ. ಮಾತ್ರವಲ್ಲ ಆರೋಗ್ಯಕ್ಕೂ ಸಹ ಇದು ಉಪಕಾರಿ. ಗಾಂಧಾರಿ ಮೆಣಸು ಎಂದು ಕರೆಯಲ್ಪಡುವ ಈ ಮೆಣಸನ್ನು ಕರಾವಳಿ ಹಾಗೂ ಮಲೆನಾಡು ಪ್ರದೇಶದಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ಗಾಂಧಾರಿ...
ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಆರ್ಯುವೇದ ಪದ್ಧತಿಯಲ್ಲಿದೆ ಸುಲಭ ಮಾರ್ಗ
ಭಾರತ ಸರ್ಕಾರದ ಆಯುಷ್ ಇಲಾಖೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮನೆಯಲ್ಲೇ ತಯಾರಿಸಬಹುದಾದ ಕಷಾಯವೊಂದರ ಬಗ್ಗೆ ಪರಿಚಯಿಸಿದೆ.
ಕೊರೋನಾ ಸೋಂಕು ಹರಡುತ್ತಿರುವ ಈ ದಿನಗಳಲ್ಲಿ ಹಲವು ಮನೆಮದ್ದುಗಳ ಕುರಿತು ಸುದ್ದಿಗಳು ಬರುತ್ತಿವೆ. ಆದರೆ ಅದರಲ್ಲಿ ಕೆಲವು ಮನೆಮದ್ದುಗಳು ಫೇಕ್ ಅನ್ನೋದನ್ನು ಫ್ಯಾಕ್ಟ್ ಚೆಕ್ ಮೂಲಕ...
ನುಗ್ಗೆ ಸೊಪ್ಪು ಸ್ವಲ್ಪ ಕಹಿ ಆದರೂ ಆರೋಗ್ಯಕ್ಕೆ ಬಲು ಉಪಕಾರಿ
ಸಾಮಾನ್ಯವಾಗಿ ನಾವೆಲ್ಲ ನುಗ್ಗೆ ಸೊಪ್ಪನ್ನು ಅಡುಗೆಯಲ್ಲಿ ಬಳಸಿಯೇ ಇರುತ್ತೇವೆ. ನುಗ್ಗೆ ಸೊಪ್ಪಿನಲ್ಲಿ ವಿಟಮಿನ್ ಗಳು, ಖನಿಜಗಳು ಮತ್ತು ಪ್ರೋಟಿನ್ ಗಳಿದ್ದು ಆರೋಗ್ಯಕ್ಕೆ ಅತ್ಯಂತ ಉತ್ತಮವಾಗಿದೆ.
ನಾರಿನಂಶ ಹೆಚ್ಚಾಗಿರುವ ನುಗ್ಗೆ ಸೊಪ್ಪಿನಲ್ಲಿ ಕ್ಲೋರೋಜೆನಿಕ್ ಆಸಿಡ್ ಎಂಬ ಆಂಟಿ ಆಕ್ಸಿಡಂಟ್ ಗಳಿದ್ದು ಇವು ಪಚನಕ್ರಿಯೆಗೆ ಸಹಕಾರಿಯಾಗಿವೆ. ಅಲ್ಲದೇ...
ಮಳೆಗಾಲದಲ್ಲಿ ಕಾಡುವ ಟೈಫಾಯ್ಡ್ ಜ್ವರಕ್ಕೆ ನಿಮಗೆ ತಿಳಿದಿರಲಿ ಈ ಮನೆಮದ್ದು!
ಮಳೆಗಾಲ ಬಂತೆಂದರೆ ಸಾಮಾನ್ಯವಾಗಿ ಜ್ವರ ಶೀತ ಹಾಗೂ ಇತರೆ ಕೆಲವು ವೈರಸ್‌ನಿಂದ ಬರುವಂತಹ ಕಾಯಿಲೆಗಳು ನಮ್ಮನ್ನು ಕಾಡುವುದು ಸಹಜವಾಗಿರುತ್ತದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಮಲೇರಿಯಾ, ಡೆಂಗ್ಯೂ, ಟೈಫಾಯ್ಡ್ ನಂತಹ ಜ್ವರಗಳು ಬರುವುದು ಹೆಚ್ಚಾಗಿದೆ.
ಸೆಲಾಮೊನೆಲ್ಲ ಟೈಫಿ ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುವ ಟೈಫಾಯಿಡ್ ಜ್ವರ ಮನುಷ್ಯನಿಗೆ...
ತುಟಿಗಳ ಅಂದ ಹೆಚ್ಚಿಸಲು ಇಲ್ಲಿದೆ ಸಿಂಪಲ್ ಟಿಪ್ಸ್
ಸಾಮಾನ್ಯವಾಗಿ ಕಪ್ಪು ತುಟಿಗಳು ಹುಡುಗಿಯರಿಗೆ ಮುಜುಗರವನ್ನುಂಟು ಮಾಡುತ್ತವೆ. ತುಟಿಯು ಅಂದವಾಗಿ ಕಾಣಲೆಂದು ಯುವತಿಯರು ಲಿಪ್ ಸ್ಟಿಕ್, ಲಿಪ್ ಜೆಲ್, ಲಿಪ್ ಬಾಮ್ ಹೀಗೆ ಮಾರುಕಟ್ಟೆಯಲ್ಲಿ ಸಿಗುವ ವಸ್ತುಗಳನ್ನು ಹೆಚ್ಚಾಗಿ ಬಳಸುತ್ತಾರೆ. ಇದರಿಂದ ಅಡ್ಡ ಪರಿಣಾಮಗಳು ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದರಿಂದ ಕೆಲವೊಂದು ಸುಲಭವಾದ...
ಡಾರ್ಕ್ ಸರ್ಕಲ್ ಹೋಗಲಾಡಿಸಲು ಸಿಂಪಲ್ ವಿಧಾನಗಳು
ಕಣ್ಣಿನ ಕೆಳಗೆ ಕಪ್ಪು ಕಲೆ ಬಂದರೆ ಅದು ನಿಮ್ಮ ಸೌಂದರ್ಯದ ಮೇಲೆ ಪರಿಣಾಮ ಬೀರುತ್ತದೆ. ಕೆಲವರು ಈ ಕಲೆಗಳನ್ನು ಮುಚ್ಚಿಡಲು ಹೆಚ್ಚು ಮೇಕಪ್ ಮಾಡುತ್ತಾರೆ ಇಲ್ಲವೇ ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕಯುಕ್ತ ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ ಇಂತಹ ಕಪ್ಪು ಕಲೆಗಳ ನಿವಾರಣೆ ಮಾಡಲು ಕೆಲವೊಂದು...
ಮನೆಯಲ್ಲಿಯೇ ಮಾಡಿ ಮೆನಿಕ್ಯೂರ್, ಪೆಡಿಕ್ಯೂರ್
ಕೊರನಾ ಸೋಂಕಿನ ಭಯದಿಂದ ಬ್ಯೂಟಿಪಾರ್ಲರ್ ಗೆ ಹೋಗಲು ಸಾಧ್ಯವಾಗದೇ ಇರುವವರು ಮನೆಯಲ್ಲಿಯೇ ಮೆನಿಕ್ಯೂರ್ ಮತ್ತು ಪೆಡಿಕ್ಯೂರ್ ಮಾಡಿಕೊಳ್ಳಬಹುದು.
ಪೆಡಿಕ್ಯೂರ್ ಮತ್ತು ಮೆನಿಕ್ಯೂರ್ ಮಾಡಲು ಬೇಕಾಗುವ ಸಾಮಾಗ್ರಿಗಳು:
ನೀರನ್ನು ಸುಲಭವಾಗಿ ಹೀರಿಕೊಳ್ಳುವ ಒಂದು ಚಿಕ್ಕ ಟರ್ಕಿ ಟವಲ್ ತೆಗೆದುಕೊಳ್ಳಿ. ಮೆನಿಕ್ಯೂರ್ ಗೆ ಚಿಕ್ಕ ಬೌಲ್, ಹಾಗೂ ಪೆಡಿಕ್ಯೂರ್...