ಇನ್ಮೇಲೆ ವಾಟ್ಸ್ ಆಪ್ , ಇ-ಮೇಲ್ ಮೂಲಕವೂ ಸಮನ್ಸ್, ನೋಟೀಸ್ ಜಾರಿ
ನವದೆಹಲಿ: ಇನ್ಮೇಲೆ ಕಾನೂನು ನೋಟೀಸ್ ಗಳು , ಸಮನ್ಸ್ ಗಳು ವಾಟ್ಸ್ ಆಪ್ ಮುಖಾಂತರ ಕೈಸೇರಲಿದೆ. ಈ ರೀತಿಯ ನೂತನ ವ್ಯವಸ್ಥೆಗೆ ಸುಪ್ರೀಂಕೋರ್ಟ್ ಅಸ್ತು ಎಂದಿದೆ. ಹೌದು, ಕೊರೊನಾ ಮಹಾಮಾರಿಯಿಂದಾಗಿ ದೇಶದಲ್ಲಿನ ಎಲ್ಲಾ ವ್ಯವಸ್ಥೆಗಳ ಮೇಲೂ ಪರಿಣಾಮ ಬೀರಿದ್ದು, ಹಲವಾರು ಬದಲಾವಣೆಗಳು ನಡೆಯುತ್ತಿವೆ....
ಪೊಲೀಸ್ ಹತ್ಯೆ ಪ್ರಕರಣದ ಆರೋಪಿ ವಿಕಾಸ್ ದುಬೆಯ ಎನ್ ಕೌಂಟರ್
ಉತ್ತರಪ್ರದೇಶ: ಕಾನ್ಪುರದಲ್ಲಿ ೮ ಮಂದಿ ಪೊಲೀಸರನ್ನು ಹತ್ಯೆಗೈದಿದ್ದ ನಟೋರಿಯಸ್ ರೌಡಿಶೀಟರ್ ವಿಕಾಸ್ ದುಬೆಯನ್ನು ಇಂದು ಬೆಳಿಗ್ಗೆ ಪೊಲೀಸರು ಎನ್ ಕೌಂಟರ್ ಮಾಡಿದ್ದಾರೆ.
ಗುರುವಾರ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಬಂಧಿಸಲ್ಪಟ್ಟ ವಿಕಾಸ್ ದುಬೆಯನ್ನ ಇಂದು ಬೆಳಿಗ್ಗೆ ಕಾನ್ಪುರಕ್ಕೆ ಕರೆತರಲಾಗುತ್ತಿತ್ತು. ಆದರೇ ಉತ್ತರ ಪ್ರದೇಶದ ಎಸ್ ಟಿಎಫ್ ಪಡೆ...
ಪೂರ್ವ ಲಡಾಖ್ ನಲ್ಲಿ ಮಿಗ್, ಅಪಾಚೆ ಘರ್ಜನೆ-ಚೀನಾಗೆ ಸಾಮರ್ಥ್ಯ ಸಂದೇಶ ರವಾನೆ
ಪೂರ್ವ ಲಡಾಖ್ ನಲ್ಲಿ ಭಾರತ-ಚೀನಾ ಶಾಂತಿ ಮಾತುಕತೆ ಬಳಿಕ ಸೇನಾ ಜಮಾವಣೆಯನ್ನು ಹಿಂಪಡೆಯಲು ಆರಂಭಿಸಿದ್ದರೂ ಸೋಮವಾರ ರಾತ್ರಿ ಗಡಿಯಲ್ಲಿ ಭಾರತೀಯ ವಾಯುಪಡೆಯ ಯುದ್ಧ ವಿಮಾನಗಳು ಹಾಗೂ ಹೆಲಿಕಾಪ್ಟರ್ ಗಳು ಘರ್ಜನೆ ಮೊಳಗಿಸಿವೆ. ಚೀನಾ ಸೇನೆಯ ಮೇಲೆ ಕಣ್ಣಿಡಲು ಹಾಗೂ ತರಬೇತಿ ದೃಷ್ಟಿಯಿಂದ ಭಾರತೀಯ...
ಟೂರಿಸ್ಟ್ ವಾಹನಗಳ ಸಂಚಾರಕ್ಕೆ ರಾಷ್ಟೀಯ ಪರ್ಮಿಟ್
ಹೊಸದಿಲ್ಲಿ: ಟೂರಿಸ್ಟ್ ಪ್ಯಾಸೆಂಜರ್ ವಾಹನಗಳಿಗೆ ದೇಶಾದ್ಯಂತ ಸುಗಮ ಸಂಚಾರಕ್ಕೆ ಅನುವು ಕಲ್ಪಿಸಲು ಹೊಸ ಪರ್ಮಿಟ್ ಯೋಜನೆ ಜಾರಿಗೆ ಸರಕಾರ ನಿರ್ಧರಿಸಿದೆ. ಈ ಯೋಜನೆಯ ಅಡಿಯಲ್ಲಿ ಯಾವುದೇ ಟೂರಿಸ್ಟ್ ವಾಹನ ಮಾಲೀಕರು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ ರಾಷ್ಟ್ರೀಯ ಪರ್ಮಿಟ್ ಗಳಿಸಲು ಸಾಧ್ಯವಾಗಲಿದೆ....
ಲಡಾಖ್ ನಲ್ಲಿ ಸೈನಿಕರ ಶೌರ್ಯ ಕೊಂಡಾಡಿದ ಪ್ರಧಾನಿ ಮೋದಿ
ಲಡಾಖ್: ಸೈನಿಕರ ಶೌರ್ಯ, ಭಾರತಮಾತೆಯ ರಕ್ಷಣೆಗಾಗಿ ನಿಮ್ಮ ತ್ಯಾಗ , ಸಾಟಿಯಿಲ್ಲದ್ದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಲಡಾಕ್ ನ ಲೇಹ್ ಗೆ ಭೇಟಿ ನೀಡಿದ ವೇಳೆ ಭಾರತೀಯ ವೀರ ಸೈನಿಕರನ್ನುದ್ದೇಶಿಸಿ ಮಾತನಾಡಿದರು. ದುರ್ಬಲರಿಂದ ಶಾಂತಿ ಸ್ಥಾಪನೆ ನಡೆಸಲು ಸಾಧ್ಯವಿಲ್ಲ. ಶಾಂತಿ...
ಇಂದಿನಿಂದ ಗೋವಾ ಪ್ರವಾಸಕ್ಕೆ ದೇಶೀಯ ಪ್ರವಾಸಿಗರಿಗೆ ಅನುಮತಿ
ಪಣಜಿ: ಮಹಾಮಾರಿ ಕೊರೊನಾ ವೈರಸ್ ಹರಡುವಿಕೆ ನಿಯಂತ್ರಿಸುವ ಉದ್ದೇಶದಿಂದ ದೇಶದಾದ್ಯಂತ ಸ್ಥಗಿತಗೊಂಡಿದ್ದ ಒಂದೊಂದೇ ಚಟುವಟಿಕೆಗಳು ಆರಂಭವಾಗತೊಡಗಿವೆ. ಈಗ ಪ್ರವಾಸೋದ್ಯಮ ಕ್ಷೇತ್ರದಲ್ಲೂ ಲಾಕ್ ಡೌನ್ ಸಡಿಲಿಕೆಯಾಗುತ್ತಿದೆ. ಇದಕ್ಕೆ ಪೂರಕವಾಗಿ ದೇಶದ ಅತ್ಯಂತ ಜನಪ್ರಿಯ ಪ್ರವಾಸೋದ್ಯಮ ತಾಣವಾದ ಗೋವಾದಲ್ಲಿ ಜುಲೈ ೨ರಿಂದ ( ಇಂದಿನಿಂದ) ಪ್ರವಾಸಿಗರಿಗಾಗಿ...
ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ನವೆಂಬರ್ ವರೆಗೆ ವಿಸ್ತರಣೆ: ಪ್ರಧಾನಿ
ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು ನವೆಂಬರ್ ಅಂತ್ಯದವರೆಗೆ ವಿಸ್ತರಣೆ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ.ಇಂದು ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಅವರು, ಜುಲೈ ತಿಂಗಳಿನಿಂದ ಹಬ್ಬಗಳು ಶುರುವಾಗಲಿದೆ. ಈ ಸಮಯದಲ್ಲಿ ಅಗತ್ಯತೆಗಳು, ಖರ್ಚುಗಳು ಜಾಸ್ತಿಯಾಗುತ್ತವೆ. ಇದನ್ನು ಗಮನದಲ್ಲಿಟ್ಟುಕೊಂಡು ನವೆಂಬರ್ ಅಂತ್ಯದವರೆಗೆ ಪ್ರಧಾನಮಂತ್ರಿ...
ಟಿಕ್ ಟಾಕ್ ಸೇರಿದಂತೆ ಚೀನಾ ಮೂಲದ 59 ಮೊಬೈಲ್ ಆ್ಯಪ್ ನಿಷೇಧಿಸಿದ ಕೇಂದ್ರಸರಕಾರ
ಭಾರತದಲ್ಲಿ ಕ್ರೇಝ್ ಹುಟ್ಟಿಸಿದ್ದ ಚೀನಾ ಮೂಲದ ಟಿಕ್ ಟಾಕ್ ಮೊಬೈಲ್ ಆ್ಯಪ್ ಸೇರಿದಂತೆ ಒಟ್ಟು 59 ಚೀನಾ ನಿರ್ಮಿತ ಆ್ಯಪ್ ಗಳಿಗೆ ಕೇಂದ್ರಸರಕಾರ ನಿಷೇಧ ಹೇರಿದೆ.ಲಡಾಕ್ ಗಡಿ ವಿವಾದ ಆರಂಭವಾದಾಗಿನಿಂದಲೂ ದೇಶದಾದ್ಯಂತ ಚೀನಾ ವಿರುದ್ಧ ಧ್ವನಿ ಮೊಳಗಿತ್ತು. ಚೀನಾಕ್ಕೆ ಪಾಠ ಕಲಿಸಲು, ಭಾರತದಲ್ಲಿ...
ಸಂಕಟಗಳ ನಡುವೆ ಮುನ್ನಡೆಯಬೇಕು,೨೦೨೦ ಹೊಸದಿಕ್ಕು ನೀಡುವ ವರ್ಷವಾಗಲಿದೆ-ಪ್ರಧಾನಿ ಮೋದಿ
ನವದೆಹಲಿ: ಸಂಕಟಗಳು ಎಷ್ಟೇ ಬರಲಿ, ಈ ಸಂಕಟಗಳ ನಡುವೆ ಮುನ್ನಡೆಯಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ‘ಮನ್ ಕೀ ಬಾತ್’ ಕಾರ್ಯಕ್ರಮದಲ್ಲಿ ದೇಶದ ಜನತೆಗೆ ಹುರಿದುಂಬಿಸಿದ್ದಾರೆ. ೨೦೨೦ನೇ ವರ್ಷ ಕರಾಳ ಎಂಬಂತೆ ಹೆಚ್ಚಿನವರು ಮಾತನಾಡುತ್ತಿದ್ದಾರೆ. ಅದಕ್ಕೆ ಪೂರಕವಾಗಿ ಒಂದಕ್ಕಿಂತ ಒಂದು ಕಷ್ಟಗಳು...
ಜರ್ಮನಿಯಲ್ಲಿ ಹೊಸದಾಗಿ 687 ಕೋವಿಡ್ ಪಾಸಿಟಿವ್ ಪ್ರಕರಣ ದಾಖಲು
ಜರ್ಮನಿ: ಕಳೆದ 24 ಗಂಟೆಯ ಅವಧಿಯಲ್ಲಿ ಜರ್ಮನಿಯಲ್ಲಿ ಹೊಸದಾಗಿ 687 ಕೋವಿಡ್ ಪಾಸಿಟಿವ್ ಪ್ರಕರಣ ಪತ್ತೆಯಾಗುವುದರೊಂದಿಗೆ ಒಟ್ಟಾಗಿ ಇದುವರೆಗೆ ಕೋವಿಡ್ ಸೋಂಕಿತರ ಸಂಖ್ಯೆ 1,93,243ಕ್ಕೆ ತಲುಪಿದೆ ಎಂಬುದಾಗಿ ತಿಳಿದುಬಂದಿದೆ. ಕೋವಿಡ್ ನಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 8 ಸಾವಿರದ ಗಡಿ ದಾಟಿದೆ. ಆದರೆ ಸಮಾಧಾನಕರ...