ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಲ್ಲಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸ್ವರ್ಧಿಸುವ ಸಾಧ್ಯತೆ
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಬುಧವಾರ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿದ್ದು. ಸೋನಿಯಾ ಗಾಂಧಿ ಅವರೊಂದಿಗಿನ ಸಭೆಯಲ್ಲಿ, ಅಧ್ಯಕ್ಷರ ಆಯ್ಕೆಗೆ (ಕಾಂಗ್ರೆಸ್ ಅಧ್ಯಕ್ಷರ ಚುನಾವಣೆ) ಸಂಬಂಧಿಸಿದ ವಿಷಯಗಳ ಬಗ್ಗೆ ಮಾತ್ರ ಚರ್ಚಿಸಿದ್ದಾರೆ ಎನ್ನಲಾಗುತ್ತಿದೆ. ರಾಹುಲ್ ಗಾಂಧಿ ನಿರಾಕರಣೆ ಬಳಿಕ ಸಿಎಂ ಗೆಹ್ಲೋಟ್...
ಮೋದಿ ಕ್ಯಾಬಿನೇಟ್ : ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ಯೋಜನೆಗಳಿಗೆ ಅನುಮೋದನೆ
ನವದೆಹಲಿ : ಇಂದು ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಕೇಂದ್ರ ಸಚಿವ ಸಂಪುಟದ ಮಹತ್ವದ ಸಭೆ ನಡೆಯಿತು. ಪ್ರಧಾನಿ ನೇತೃತ್ವದ ಸಚಿವ ಸಂಪುಟದಲ್ಲಿ ಸ್ವಾವಲಂಬಿ ಭಾರತ ಪರಿಕಲ್ಪನೆಯನ್ನು ಉತ್ತೇಜಿಸಲು 3 ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಕೇಂದ್ರ ಸಚಿವ ಅನುರಾಗ್ ಠಾಕೂರ್ ಪತ್ರಿಕಾಗೋಷ್ಠಿಯಲ್ಲಿ ಈ...
ಜನಪ್ರಿಯ ಸ್ಟ್ಯಾಂಡ್-ಅಪ್ ಕಾಮಿಡಿಯನ್ ರಾಜು ಶ್ರೀವಾಸ್ತವ್ ಇನ್ನಿಲ್ಲ
ನವದೆಹಲಿ: ಜನಪ್ರಿಯ ಹಾಸ್ಯನಟ , ಸ್ಟ್ಯಾಂಡ್ ಅಪ್ ಕಾಮಿಡಿಯನ್ ರಾಜು ಶ್ರೀವಾಸ್ತವ(58) ಅವರು ನಿಧನರಾಗಿದ್ದಾರೆ.
ಆ.10ರಂದುಹೃದಯಾಘಾತದ ಕಾರಣ ರಾಜು ಶ್ರೀವಾಸ್ತವ್ ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದೇ ದಿನ ಆಂಜಿಯೋಪ್ಲಾಸ್ಟಿಗೆ ಒಳಗಾಗಿದ್ದರು . ತೀವ್ರ ನಿಗಾ ಘಟಕದಲ್ಲಿ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ...
ಇಂಗ್ಲೆಂಡಿನ ಹಿಂದೂ ದೇವಾಲಯದ ಮುಂದೆ ಪ್ರತಿಭಟನೆ : ಅಲ್ಲಾಹು ಅಕ್ಬರ್ ಎಂಬ ಘೋಷಣೆ ಕೂಗಿದ ಪ್ರತಿಭಟನಾಕಾರರು
ಲಂಡನ್‌ನ ಲೀಸೆಸ್ಟರ್‌ನಲ್ಲಿ ಹಿಂದೂ ದೇವಾಲಯವನ್ನು ಧ್ವಂಸಗೊಳಿಸುವುದು ಸೇರಿದಂತೆ ಹಿಂಸಾಚಾರದ ಘಟನೆಯ ನಂತರ ಆಪಾದಿತ ಮುಸ್ಲಿಂ ಗುಂಪು ಇಂಗ್ಲೆಂಡ್‌ನ ಸ್ಮೆಥ್‌ವಿಕ್‌ನಲ್ಲಿರುವ ಹಿಂದೂ ದೇವಾಲಯದ ಮುಂದೆ ಪ್ರತಿಭಟಿಸಲು ಪ್ರಯತ್ನಿಸಿತು. ದೇವಸ್ಥಾನದ ಕಡೆಗೆ ಹೋಗುತ್ತಿದ್ದಾಗ ಅಲ್ಲಾಹು ಅಕ್ಬರ್ ಎಂದು ಕೂಗುತ್ತಿರುವ ವಿಡಿಯೋವೊಂದು ಹರಿದಾಡುತ್ತಿದೆ . ಪ್ರತಿಭಟನಾಕಾರರು ಸ್ಮೆಥ್‌ವಿಕ್...
ಜಮ್ಮು ಕಾಶ್ಮೀರದಲ್ಲಿ ಮೊದಲ ಮಲ್ಟಿಪ್ಲೆಕ್ಸ್ ಸಿನಿಮಾ ಹಾಲ್ ಆರಂಭ
ಶ್ರೀನಗರ : ಕಾಶ್ಮೀರ ಕಣಿವೆಯ ನಾಗರಿಕರು ಈಗ ದೊಡ್ಡ ಪರದೆಯ ಮೇಲೆ ಚಲನಚಿತ್ರಗಳನ್ನು ವೀಕ್ಷಿಸಲು ಸಾಧ್ಯವಾಗುತ್ತಿದ್ದು, ಸುಮಾರು ಮೂವತ್ತು ವರ್ಷಗಳ ನಂತರ ಮಲ್ಟಿಪ್ಲೆಕ್ಸ್ ಸಿನಿಮಾ ಹಾಲ್ ಪ್ರಾರಂಭವಾಗಿವೆ. ಹೀಗಾಗಿ ಕಳೆದ ಹಲವು ವರ್ಷಗಳಿಂದ ದೊಡ್ಡ ಪರದೆಯ ಮೇಲೆ ಸಿನಿಮಾ ನೋಡಬೇಕೆಂಬ ಇಲ್ಲಿನ ನಾಗರಿಕರ...
ತೈವಾನ್ ರಕ್ಷಣೆಗೆ ಅಮೇರಿಕಾ ಪಡೆಗಳು ಸಿದ್ಧವಾಗಿವೆ : ಚೀನಾಗೆ ಬೈಡನ್ ಎಚ್ಚರಿಕೆ
ಚೀನಾ ಮತ್ತು ತೈವಾನ್ ನಡುವೆ ಉದ್ವಿಗ್ನತೆ ಇರುವಾಗ ಅಮೇರಿಕಾ ಅಧ್ಯಕ್ಷ ಜೋ ಬೈಡನ್ ಮಹತ್ವದ ಹೇಳಿಕೆ ನೀಡಿದ್ದಾರೆ. ತೈವಾನ್ ಮೇಲೆ ದಾಳಿಯಾದರೆ ಅಮೇರಿಕಾ ಸೇನೆ ರಕ್ಷಿಸುತ್ತದೆ ಎಂಬ ಸ್ಪಷ್ಟ ನಿಲುವು ವ್ಯಕ್ತಪಡಿಸಿರುವ ಬೈಡನ್, ಚೀನಾಗೆ ಎಚ್ಚರಿಕೆ ನೀಡಿದ್ದಾರೆ. ಸಂದರ್ಶನವೊಂದರಲ್ಲಿ, ತೈವಾನ್ ರಕ್ಷಣೆಗೆ ಅಮೇರಿಕಾ...
ಪಂಜಾಬ್ ಲೋಕ ಕಾಂಗ್ರೆಸ್ ಮುಖ್ಯಸ್ಥ ಅಮರಿಂದರ್ ಸಿಂಗ್ ಬಿಜೆಪಿಗೆ ಸೇರ್ಪಡೆ
ನವ ದೆಹಲಿ : ಪಂಜಾಬ್ ನ ಮಾಜಿ ಸಿಎಂ ಮತ್ತು ಪಂಜಾಬ್ ಲೋಕ ಕಾಂಗ್ರೆಸ್ ಮುಖ್ಯ ನಾಯಕ ಅಮರಿಂದರ್ ಸಿಂಗ್ ಇಂದು ಬಿಜೆಪಿಗೆ ಸೇರ್ಪಡೆಗೊಂಡು ತಮ್ಮ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಿದರು. ಬಿಜೆಪಿ ಪಕ್ಷಕ್ಕೆ ಸೇರುವ ಮೊದಲು, ಸಿಂಗ್ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ...
ತೈವಾನ್‌ನಲ್ಲಿ ಪ್ರಬಲ ಭೂಕಂಪ : ರಿಕ್ಟರ್ ಮಾಪಕದಲ್ಲಿ 7.2 ತೀವ್ರತೆ ದಾಖಲು
ತೈವಾನ್‌ನಲ್ಲಿ ಭಾನುವಾರ ಮತ್ತೊಮ್ಮೆ ಭೂಕಂಪನದ ಅನುಭವವಾಗಿದೆ. ಕಳೆದ 24 ಗಂಟೆಗಳಲ್ಲಿ ಇದು ಎರಡನೇ ಭೂಕಂಪವಾಗಿದೆ. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 7.2 ರಷ್ಟಿದ್ದು, ಉಜಿಂಗ್ ಪ್ರಾಂತ್ಯಕ್ಕೆ ಅಪ್ಪಳಿಸಿದೆ. ಮೊನ್ನೆ ಶನಿವಾರವೂ ಇಲ್ಲಿ ಪ್ರಬಲ ಭೂಕಂಪನದ ಅನುಭವವಾಗಿತ್ತು. ಆಗ್ನೇಯ ತೈವಾನ್‌ನಲ್ಲಿ 6.9 ತೀವ್ರತೆಯ ಭೂಕಂಪ...
ನೇಪಾಳದಲ್ಲಿ ಭೂಕುಸಿತ : 13 ಜನರ ಸಾವು,10 ಮಂದಿ ನಾಪತ್ತೆ
ಭಾರತದ ನೆರೆಯ ರಾಷ್ಟ್ರ ನೇಪಾಳದಲ್ಲಿ ಭಾರೀ ಭೂಕುಸಿತದ ವರದಿಯಾಗಿದ್ದು. ಪಶ್ಚಿಮ ನೇಪಾಳದ ಅಚಮ್ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಭೂಕುಸಿತದಿಂದ ಕನಿಷ್ಠ 13 ಜನರು ಸಾವನ್ನಪ್ಪಿದ್ದಾರೆ. ಇನ್ನೂ 10 ನಾಗರಿಕರು ನಾಪತ್ತೆಯಾಗಿದ್ದು, 10 ಜನರನ್ನು ರಕ್ಷಿಸಲಾಗಿದೆ ಎಂದು ಉಪ ಮುಖ್ಯ ಜಿಲ್ಲಾಧಿಕಾರಿ ದೀಪೇಶ್ ರಿಜಾಲ್...
ಭಾರತಕ್ಕೆ ಮರಳಿದ ಚಿರತೆಗಳು : ಕುನೋ ಅಭಯಾರಣ್ಯದಲ್ಲಿ ಎಂಟು ಚಿರತೆಗಳನ್ನು ಬಿಡುಗಡೆ ಮಾಡಿದ ಪ್ರಧಾನಿ ಮೋದಿ
ಎಪ್ಪತ್ತು ವರ್ಷಗಳ ನಂತರ ಚಿರತೆಗಳು ಭಾರತದ ನೆಲಕ್ಕೆ ಮರಳಿವೆ. ನಮೀಬಿಯಾದಿಂದ ತರಲಾದ ಎಂಟು ಚಿರತೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಕುನೋ ಅಭಯಾರಣ್ಯದಲ್ಲಿ ಬಿಡುಗಡೆ ಮಾಡಿದರು. ಎಂಟು ಚಿರತೆಗಳಲ್ಲಿ 4 ಹೆಣ್ಣು ಮತ್ತು 3 ಗಂಡು ಚಿರತೆಗಳಿವೆ. ಎಂಟು ಚಿರತೆಗಳನ್ನು ಹೊತ್ತ ವಿಶೇಷ...