ಬಟ್ಟೆಗೆ ಹೊಂದುವ ಕಲರ್ ಫುಲ್ ಮಾಸ್ಕ್
ಇತ್ತೀಚಿನ ದಿನಗಳಲ್ಲಿ ಮಾಸ್ಕ್ ಧರಿಸೋದು ನಮ್ಮ ದೈನಂದಿನ ಬದುಕಿನ ಒಂದು ಭಾಗ ಎಂಬಂತಾಗಿದೆ. ಅದಕ್ಕೆ ಕಾರಣ ಕೊರೊನಾ ಮಹಾಮಾರಿ ವಕ್ಕರಿಸುವ ಭಯ. ಹಾಗಂತ ಕೊರೊನಾ ಬರುವ ಮುನ್ನ ಮಾಸ್ಕ್ ಬಳಕ್ಕೆ ಇದ್ದಿಲ್ಲವೆಂದಲ್ಲ. ವೈದ್ಯಕೀಯ ಕ್ಷೇತ್ರದಲ್ಲಿರುವವರು ಮಾಸ್ಕ್ ಬಳಸುತ್ತಿದ್ದರು. ಆದರೆ ಈಗ ಹುಟ್ಟಿದ ಮಗುವಿನಿಂದ...