ಕೆಲಸದ ಒತ್ತಡದಿಂದಾಗಿ ವ್ಯಕ್ತಿಗೆ ಖಾಲಿ ಸಿರಿಂಜ್ ಚುಚ್ಚಿದ ನರ್ಸ್ ; ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್..!
ಬಿಹಾರ: ಕೊರೋನಾ ಸೋಂಕಿನ ಮೊದಲನೇ ಅಲೆ ಆರಂಭವಾದಾಗಿನಿಂದಲೂ ಆರೋಗ್ಯ ಕಾರ್ಯಕರ್ತರು ನಿರಂತರವಾಗಿ ಜನಸೇವೆ ಮಾಡುತ್ತಿದ್ದಾರೆ. ಹಗಲು ರಾತ್ರಿಯೆನ್ನದೆ ಜನರ ಜೀವವನ್ನು ಉಳಿಸಲು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅದೆಷ್ಟೋ ಮಂದಿ ಬಿಡುವಿಲ್ಲದ ಕೆಲಸ, ರಜೆಯಿಲ್ಲದ ಡ್ಯೂಟಿಯಿಂದ ಒತ್ತಡಕ್ಕೂ ಒಳಗಾಗಿದ್ದಾರೆ. ಆದರೆ, ಬಿಹಾರದಲ್ಲೊಬ್ಬ ನರ್ಸ್ ತಮ್ಮ ಕೆಲಸದ...
ಕೇರಳದಲ್ಲಿ ಭಾರೀ ಮಳೆಗೆ ಕೊಚ್ಚಿ ಹೋದ ಮನೆ, ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್..!
ತಿರುವನಂತಪುರಂ: ಕೇರಳದಲ್ಲಿ ಭಾರೀ ಮಳೆ, ಪ್ರವಾಹದಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಕೊಟ್ಟಾಯಂನ ಮುಂಡಕಾಯಂನಲ್ಲಿ ಮನೆಯೊಂದು ಕುಸಿದು ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿರುವ ವೀಡಿಯೋ ವೈರಲ್ ಆಗಿದೆ.
ವೀಡಿಯೋದಲ್ಲಿ ಭಾರೀ ಮಳೆಯಿಂದ ಉಂಟಾದ ಪ್ರವಾಹದಲ್ಲಿ ಮನೆ ಕೊಚ್ಚಿಕೊಂಡು ಹೋಗಿರೋದನ್ನು ಕಾಣಬಹುದಾಗಿದೆ. ಮನೆ ಕುಸಿದು ಬೀಳುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ...
75 ವರ್ಷದ ಅಜ್ಜಿಯ ಸಮರ ಕಲೆ ವೀಡಿಯೋ ವೈರಲ್
ಪುಣೆಯಲ್ಲಿ 75 ವರ್ಷದ ಅಜ್ಜಿಯೊಬ್ಬರು ಸಮರ ಕಲೆ ಪ್ರದರ್ಶಿಸುತ್ತಿರುವ ವೀಡಿಯೋ ಈಗ ವೈರಲ್ ಆಗಿದೆ. ಕೊರೊನಾ ಲಾಕ್‍ಡೌನ್ ಮಧ್ಯೆ ಹೊಟ್ಟೆ ಪಾಡಿಗಾಗಿ ದಾರಿ ಪಕ್ಕದಲ್ಲಿ ನಿಂತು ಸಮರ ಕಲೆ ಪ್ರದರ್ಶಿಸಿ ತನ್ನ ಕುಟುಂಬ ನಿರ್ವಹಣೆ ಹಣ ಸಂಗ್ರಹಿಸುತ್ತಿದ್ದ ವೀಡಿಯೋ ಟ್ವೀಟರ್‍ನಲ್ಲಿ ಹರಿದಾಡುತ್ತಿದೆ. ಈ...
ಬಲೂನ್ ಮಾರಾಟದ ಹುಡುಗಿ ಇದೀಗ ಮಾಡೆಲ್! ಬದಲಾಯ್ತು ‘ಕಿಸ್ಬು’ ಕಿಸ್ಮತ್!
ಮಾಡೆಲ್ ಎಂದರೆ ಸ್ಟೈಲಿಶ್ ಆಗಿರಬೇಕು, ಒಳ್ಳೆಯ ವ್ಯಕ್ತಿತ್ವ, ಅಂದವಾದ ಚಹರೆಯ ಜೊತೆಗೆ ಬುದ್ಧಿವಂತಿಕೆಯೂ ಬೇಕು. ಈ ಹಾದಿಯಲ್ಲಿ ದಿನಂಪ್ರತಿ ಅದೆಷ್ಟೋ ಯುವಕ-ಯುವತಿಯರು ಕನಸು ನನಸಾಗಿಸಲು ಪ್ರಯತ್ನಿಸುತ್ತಿರುತ್ತಾರೆ. ಆದರೆ ಇಲ್ಲೋರ್ವ ಬಲೂನ್ ಮಾರುವ ಹುಡುಗಿ ರಾತ್ರಿ ಬೆಳಗಾಗುವುದರೊಳಗಾಗಿ ಮಾಡೆಲ್ ಆಗಿ ಮಿಂಚಿರುವುದಷ್ಟೇ ಅಲ್ಲ, ಸಾಮಾಜಿಕ...
ಲಾಕ್ ಡೌನ್ ನಿಯಮ ಉಲ್ಲಂಘಿಸಿದವರಿಗೆ ಕಪ್ಪೆಯಂತೆ ಜಿಗಿಯುವ ಶಿಕ್ಷೆ; ವೀಡಿಯೋ ವೈರಲ್
ಮಧ್ಯಪ್ರದೇಶ: ಕೊರೋನಾ ಸೋಂಕಿನ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕಾರಣ ದೇಶದ ಹಲವು ರಾಜ್ಯಗಳು ಲಾಕ್ ಡೌನ್ ಮೊರೆ ಹೋಗಿವೆ. ಮದುವೆ ಸಮಾರಂಭ, ಸಭೆ, ಮಾರುಕಟ್ಟೆಗಳಲ್ಲಿ ಹೆಚ್ಚು ಜನರು ಸೇರದಂತೆ ನಿರ್ಬಂಧ ವಿಧಿಸಲಾಗಿದೆ. ಹೀಗಿದ್ದೂ ಹಲವೆಡೆ ಜನರು ಅಧಿಕಾರಿಗಳ ಕಣ್ಣು ತಪ್ಪಿಸಿ ಗುಂಪಾಗಿ...
ಭಾರೀ ಮಳೆಗೆ ಧರಾಶಾಹಿಯಾದ ಎರಡು ಅಂತಸ್ತಿನ ಮನೆ; ವೀಡಿಯೋ ವೈರಲ್
ಕಾಸರಗೋಡು: ತೌಕ್ತೇ ಚಂಡಮಾರುತದಿಂದಾಗಿ ಕರ್ನಾಟಕ, ಕೇರಳ, ತಮಿಳುನಾಡು ಸೇರಿ ಹಲವು ರಾಜ್ಯಗಳಲ್ಲಿ ಭಾರೀ ಮಳೆಯಾಗುತ್ತಿದೆ. ಕೇರಳದ ಕಾಸರಗೋಡಿನಲ್ಲಿ ವರುಣನ ಅಬ್ಬರ ಮಿತಿಮೀರಿದ್ದು ಮನೆ, ಅಂಗಡಿ-ಮುಂಗಟ್ಟುಗಳು ಧರೆಗುರುಳುತ್ತಿವೆ. ಕಾಸರಗೋಡು ಜಿಲ್ಲೆಯ ಮುಸೋಡಿಯಲ್ಲಿ ಕಡಲತೀರದ ಬಳಿಯಿರುವ ಎರಡು ಅಂತಸ್ತಿನ ಮನೆ ಭಾರೀ ಗಾಳಿ-ಮಳೆಗೆ ಧರಾಶಾಹಿಯಾಗಿದೆ. ಮನೆ...
ತಮಿಳುನಾಡಿನ ಹಳ್ಳಿಯ ರೈತರು ಆರಂಭಿಸಿದ ‘ವಿಲೇಜ್ ಕುಕ್ಕಿಂಗ್’ ಯೂಟ್ಯೂಬ್ ಚಾನೆಲ್’ಗೆ ಕೋಟಿ ದಾಖಲೆ..!
ಚೆನ್ನೈ: ತಮಿಳುನಾಡಿನ ಹಳ್ಳಿಯೊಂದರ 6 ಮಂದಿ ಯುವ ರೈತರು ಸೇರಿ ಆರಂಭಿಸಿರುವ ‘ವಿಲೇಜ್ ಕುಕ್ಕಿಂಗ್’ ಯೂಟ್ಯೂಬ್ ಚಾನೆಲ್ ಹೊಸ ದಾಖಲೆ ಬರೆದಿದೆ. ರೈತರು ನಡೆಸುತ್ತಿರುವ ಈ ಯೂಟ್ಯೂಬ್ ಚಾನೆಲ್ 10 ಮಿಲಿಯನ್ ಚಂದಾದಾರರನ್ನು ಸಂಪಾದಿಸಿದ್ದು, ಯೂಟ್ಯೂಬ್ ಇವರಿಗೆ ಡೈಮಂಡ್ ಬಟನ್ ಪ್ರಶಸ್ತಿ ನೀಡಿ...
ಆಕಾಶದಿಂದ ಮನೆ ಮೇಲೆ ಬಿದ್ದ ಲೋಹ: ಕೋಟ್ಯಾಧಿಪತಿಯಾದ ಕಾರ್ಮಿಕ
ಇಂಡೋನೇಷ್ಯಾ: ಅದೃಷ್ಟ ಕುಲಾಯಿಸಿದರೆ ಯಾರು ಬೇಕಾದರೂ ಕೋಟ್ಯಾಧಿಪತಿಗಳಾಗಬಹುದು, ಇಲ್ಲೊಬ್ಬರು ಶವಪೆಟ್ಟಿಗೆ ತಯಾರಿಸಿ ಜೀವನ ನಡೆಸುತ್ತಿದ್ದ ವ್ಯಕ್ತಿ ಏಕಾಏಕಿ ಕೋಟ್ಯಾಧಿಪತಿಯಾಗಿದ್ದಾರೆ.
ಇಂಡೋನೇಷ್ಯಾದ 33 ವರ್ಷದ ಜೋಶುವಾ ಹುತಾಗಲಂಗ್ ಒಂದೇ ದಿನದಲ್ಲಿ 9.8 ಕೋಟಿ ರೂ. ಒಡೆಯರಾಗಿದ್ದಾರೆ. ಜೀವನಪೂರ್ತಿ ದುಡಿದರೂ ಇಷ್ಟು ಮೊತ್ತ ಸಂಪಾದಿಸುವುದು ಸುಲಭದ ಮಾತಲ್ಲ....
ಬುಟ್ಟಿತುಂಬಾ ಚಿಲ್ಲರೆ ಕೊಟ್ಟು ಸ್ಕೂಟರ್ ಖರೀದಿಸಿದ ವ್ಯಕ್ತಿ, ಅಸ್ಸಾಂನಲ್ಲೊಂದು ಅಪರೂಪದ ಘಟನೆ
ಅಸ್ಸಾಂ: ಪ್ರತಿಯೊಬ್ಬರೂ ತಮ್ಮ ಇಚ್ಚೆಯ ಮನೆಯಾಗಲಿ ಅಥವಾ ಯಾವುದೇ ವಾಹನವಾಗಲಿ ಖರೀದಿಸಲು ಸಾಕಷ್ಟು ಕಷ್ಟಪಟ್ಟು ಹಣ ಹೊಂದಿಸುತ್ತಾರೆ. ತಮ್ಮ ಕನಸು ನನಸಾಗಿಸಲು ಸತತ ಪರಿಶ್ರಮ ಪಡುತ್ತಾರೆ. ಅಂತೆಯೇ ಇಲ್ಲೊಬ್ಬರು ನಾಣ್ಯಗಳನ್ನು ಸಂಗ್ರಹಿಸಿಟ್ಟು ಸ್ಕೂಟರ್ ಅನ್ನು ಖರೀದಿಸಿದ್ದಾರೆ.
ಅಸ್ಸಾಂನ ಪುಟ್ಟ ಅಂಗಡಿಯ ಮಾಲೀಕರೊಬ್ಬರು ದ್ವಿಚಕ್ರ ವಾಹನವನ್ನು...
ಮದುವೆ ದಿಬ್ಬಣದಲ್ಲಿ ಪಿಪಿಇ ಕಿಟ್ ಧರಿಸಿ ಡ್ಯಾನ್ಸ್: ಆಂಬ್ಯುಲೆನ್ಸ್ ಚಾಲಕನ ವೀಡಿಯೋ ವೈರಲ್
ಉತ್ತರಾಖಂಡ್: ಇಲ್ಲಿನ ಡೆಹ್ರಾಡೂನ್ ನಲ್ಲಿ ಆಂಬ್ಯುಲೆನ್ಸ್ ಚಾಲಕರೊಬ್ಬರು ಪಿಪಿಇ ಕಿಟ್ ಧರಿಸಿ ಮದುವೆ ಮೆರವಣಿಗೆಯಲ್ಲಿ ಡ್ಯಾನ್ಸ್ ಮಾಡಿರುವ ವೀಡಿಯೋ ವೈರಲ್ ಆಗಿದೆ. ಉತ್ತರಾಖಂಡ್ ರಾಜ್ಯದ ಡೆಹ್ರಾಡೂನ್ ನಲ್ಲಿ ನಡೆದ ಮದುವೆಯ ಮೆರವಣಿಗೆ ಹಲ್ದಾನಿಯ ಸುಶೀಲಾ ತಿವಾರಿ ಮೆಡಿಕಲ್ ಕಾಲೇಜಿನ ಮುಂಭಾಗದಲ್ಲಿ ಸಾಗುತ್ತಿತ್ತು. ಈ...