ತುಳುಭಾಷೆಯಲ್ಲಿ ಶಿಕ್ಷಣದ ಅವಕಾಶಕ್ಕೆ ಆಗ್ರಹಿಸಿ ಶಿಕ್ಷಣ ಸಚಿವರಿಗೆ ಶಾಸಕ ಕಾಮತ್ ಮನವಿ
ಬೆಂಗಳೂರು: ಕರಾವಳಿಯ ಜನಪ್ರತಿನಿಧಿಗಳು ತುಳು ಭಾಷೆಗೆ ಅಧಿಕೃತ ಸ್ಥಾನಮಾನ ಕಲ್ಪಿಸುವ ನಿಟ್ಟಿನಲ್ಲಿ ಮತ್ತೊಮ್ಮೆ ತಮ್ಮ ಪ್ರಯತ್ನಕ್ಕೆ ಇಳಿದಿದ್ದಾರೆ. ತುಳು ಭಾಷೆಗೆ ರಾಜ್ಯದ ಅಧಿಕೃತ ಭಾಷೆಯ ಮನ್ನಣೆ ನೀಡುವಂತೆ ಆಗ್ರಹಿಸಿ ಕರಾವಳಿ ಶಾಸಕರು ಮುಖ್ಯಮಂತ್ರಿಯವರಿಗೆ ಮನವಿ ನೀಡಿರುವ ಬೆನ್ನಲ್ಲೇ, ಇಂದು ಮಂಗಳೂರು ದಕ್ಷಿಣ ವಿಧಾನಸಭಾ...
ತುಳು ಭಾಷೆಯ ಕೃತಿ ,ಬ್ಯಾರಿ ಭಾಷೆಗೆ ಅನುವಾದ ಮಾಡಲು ಅವಕಾಶ-ದಯಾನಂದ ಕತ್ತಲ್ಸಾರ್
ಮಂಗಳೂರು : ತುಳು ಭಾಷೆಯ ಕೃತಿಗಳನ್ನು ಬ್ಯಾರಿ ಭಾಷೆಗೆ ಅನುವಾದ ಮಾಡಲು ಅವಕಾಶ ನೀಡಲಾಗುವುದು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಲ್ಸಾರ್ ಹೇಳಿದರು. ಸೋಮವಾರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ನಡೆದ ಪುಸ್ತಕ...
ವಾರ್ಷಿಕ ಪದಗ್ರಹಣ ಸಭೆ
ತುಡರ್ ಚಾರೀಟೆಬಲ್ ಟ್ರಸ್ಟ್(ರೀ.) ತೋಡಾರ್ ಇದರ ವಾರ್ಷಿಕ ಸಾಲಿನ ಟ್ರಸ್ಟ್ ನ ಪದಗ್ರಹಣ ಸಭೆ ಇತ್ತೀಚೆಗೆ ಶ್ರೀ ಕ್ಷೇತ್ರ ತೋಡಾರು ಗರಡಿಯಲ್ಲಿ ನಡೆಯಿತು . ಟ್ರಸ್ಟ್ ನ ಪದಗ್ರಹಣ ಸಭೆಯು ಟ್ರಸ್ಟ್ ನ ಸ್ಥಾಪಕ ಅಧ್ಯಕ್ಷರಾದಂತಹ ಮಿಥುನ್ ಬಿ. ಶೆಟ್ಟಿ ಪಡ್ಡೋಡಿಗುತ್ತು ಹಾಗೂ...
ಜೋಡುಕರೆ ಕಂಬಳ ಋತು ಆರಂಭ; ಹೊಕ್ಕಾಡಿಗೋಳಿ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳ ವೀಕ್ಷಣೆಗೆ ಜನಸಾಗರ
ಮಂಗಳೂರು: ಪ್ರಸಕ್ತ ಸಾಲಿನ ಜೋಡುಕರೆ ಕಂಬಳ ಕೂಟಕ್ಕೆ ನಿನ್ನೆ ಚಾಲನೆ ಸಿಕ್ಕಿದೆ. ಇತಿಹಾಸ ಪ್ರಸಿದ್ಧ ಹೊಕ್ಕಾಡಿಗೋಳಿ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳ ಭಾನುವಾರ ಬೆಳಗ್ಗೆ 10ಕ್ಕೆ ಆರಂಭಗೊಂಡಿತು.
ಕಂಬಳ ಋತುವಿನ ಪ್ರಥಮ ಕಂಬಳ ಬಂಟ್ವಾಳ ತಾಲೂಕಿನ ಎಲಿಯನಡುಗೋಡು ಮತ್ತು ಬೆಳ್ತಂಗಡಿ ತಾಲೂಕಿನ ಆರಂಬೋಡಿ ಗ್ರಾಮದ...
ಅನಾರೋಗ್ಯದಿಂದ ಬಳಲುತ್ತಿರುವ ಯುವಕನಿಗೆ ನೆರವಾದ ಬಿರ್ವ ಬ್ರದರ್ಸ್ ತಂಡ
ಪುತ್ತೂರು:ತಾಲೂಕಿನ ನರಿಮೊಗರು ಗ್ರಾಮದ ಪುರುಷರಕಟ್ಟೆ ನಿವಾಸಿ ಪುನೀತ್ ಪೂಜಾರಿ ಎಂಬವರು ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಬಳಲುತ್ತಿದ್ದು, ಇವರ ಚಿಕಿತ್ಸೆಗೆ 3 ಲಕ್ಷ ರೂಪಾಯಿ ಖರ್ಚಿನ ಅಗತ್ಯವಿದೆ. ಆದರೆ ಚಿಕಿತ್ಸೆಯ ವೆಚ್ಚವನ್ನು ಭರಿಸಲು ಪುನೀತ್ ಕುಟುಂಬಕ್ಕೆ ಅಸಾಧ್ಯವಾಗಿದೆ. ಇದನ್ನು ಮನಗಂಡ ’ಬಿರ್ವ ಬ್ರದರ್ಸ್ ಗ್ರೂಪ್...
ಕಟೀಲು ರಾಮ್ ಫ್ರೆಂಡ್ಸ್ ಸಮಿತಿಯಿಂದ ಕ್ಯಾನ್ಸರ್ ಪೀಡಿತರೋರ್ವರ ಚಿಕಿತ್ಸೆಗೆ ಆರ್ಥಿಕ ನೆರವು
ಮಂಗಳೂರು: ಬಜ್ಪೆ ನಿವಾಸಿ ಪದ್ಮಲತಾ ಪೂಜಾರಿ ಇವರು ಎರಡನೇ ಬಾರಿ ಬಾಯಿ ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದು, ಈಗಾಗಲೇ ಕ್ಯಾನ್ಸರ್ ನಿಂದ ಒಂದು ಕಣ್ಣನ್ನು ಕಳೆದುಕೊಂಡಿದ್ದಾರೆ. ಇವರ ಬಾಯಿ ಕ್ಯಾನ್ಸರ್ ಚಿಕಿತ್ಸೆಗಾಗಿ ತುಂಬಾ ಹಣ ವೆಚ್ಚವಾಗಬಹುದೆಂದು ವೈದ್ಯರು ತಿಳಿಸಿದ್ದಾರೆ. ಆದರೆ ಪದ್ಮಲತಾರವರು ಗಂಡ ಮಗುವಿನೊಂದಿಗೆ...
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ 2021ನೇ ಸಾಲಿನ ಪ್ರಶಸ್ತಿ ಪ್ರಕಟ
ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ 2021 ನೇ ಸಾಲಿನ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಪ್ರಕಟಿಸಲಾಗಿದೆ.
ತುಳು ಸಾಹಿತ್ಯ ಅಕಾಡೆಮಿಯ 2021ನೇ ಸಾಲಿನ ಗೌರವ ಪ್ರಶಸ್ತಿ , ವಿಶೇಷ ಬಾಲ ಪ್ರತಿಭಾ ಪುರಸ್ಕಾರ, ಯುವ ಸಾಧಕ ಪ್ರಶಸ್ತಿ , ಮಾಧ್ಯಮ ಪುರಸ್ಕಾರ ಹಾಗೂ ಪುಸ್ತಕ...
ವೈದ್ಯರ ದಿನಾಚರಣೆ
ಉಡುಪಿ : ವೈದ್ಯರು ರೋಗಿಗಳ ಜೀವರಕ್ಷಣೆಗೆ ತಮ್ಮ ವೈಯಕ್ತಿಕ ಬದುಕನ್ನು ತ್ಯಾಗ ಮಾಡಿ ಸಮಾಜದ ರಕ್ಷಕರಾಗಿ ಕಾಯ೯ ನಿವ೯ಹಿಸುತ್ತಿದ್ದಾರೆ.ಕೊವಿಡ್ ಸಮಯದಲ್ಲಿ ವೈದ್ಯರನ್ನು ನೋಡುವ ದೃಷ್ಠಿಕೋನ ಬದಲಾಗಿದೆ ಎಂದು ಭಾರತೀಯ ವೈದ್ಯ ಸಂಘ ಕರಾವಳಿ ಶಾಖೆ ಅಧ್ಯಕ್ಷ ಡಾ. ಉಮೇಶ್ ಪ್ರಭು ಹೇಳಿದರು.
ಅವರು ಇತ್ತೀಚೆಗೆ...
28ನೇ ವರ್ಷದ ವೇಣೂರು ಪೆರ್ಮುಡ “ಸೂರ್ಯ – ಚಂದ್ರ” ಜೋಡುಕರೆ ಬಯಲು ಕಂಬಳ ಕೂಟದ ಫಲಿತಾಂಶ
ವೇಣೂರು: ಬೆಳ್ತಂಗಡಿ ತಾಲೂಕಿನ ವೇಣೂರು ಪೆರ್ಮುಡದಲ್ಲಿ ನಡೇದ 28ನೇ ವರ್ಷದ ವೇಣೂರು ಪೆರ್ಮುಡ "ಸೂರ್ಯ - ಚಂದ್ರ" ಜೋಡುಕರೆ ಬಯಲು ಕಂಬಳ ಕೂಟ ಸಂಪನ್ನಗೊಂಡಿದ್ದು, ಈ ಕೂಟದ ಫಲಿತಾಂಶದ ವಿವರ ಇಲ್ಲಿದೆ.
ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ :
ಕನೆಹಲಗೆ: 4 ಜೊತೆ
ಅಡ್ಡಹಲಗೆ: 6 ಜೊತೆ
ಹಗ್ಗ...
ತುಳು ಭಾಷಾ ಸ್ಥಾನಮಾನಕ್ಕಾಗಿ ಆಗ್ರಹಿಸಿ ಟ್ವಿಟರ್ ಅಭಿಯಾನ; 4 ಲಕ್ಷ ಮೀರಿದ ತುಳು ಭಾಷಿಕರ ಟ್ವೀಟ್
ಮಂಗಳೂರು: ತುಳು ಭಾಷೆಯನ್ನು ಕರ್ನಾಟಕ ಮತ್ತು ಕೇರಳ ರಾಜ್ಯದಲ್ಲಿ ಅಧಿಕೃತ ಭಾಷೆಯನ್ನಾಗಿ ಘೋಷಿಸಬೇಕು ಮತ್ತು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸಬೇಕು ಎಂದು ಆಗ್ರಹಿಸಿ ಜೈ ತುಳುನಾಡು, ಯುವ ತುಳುನಾಡು ಮತ್ತು ಇತರ ತುಳು ಸಂಘಟನೆಗಳು ನಿನ್ನೆ ನಡೆಸಿದ ಟ್ವಿಟರ್ ಅಭಿಯಾನಕ್ಕೆ ಜನತೆಯಿಂದ ಅಭೂತಪೂರ್ವ...