Tuesday, May 30, 2023
Home ತುಳುವ ಐಸಿರಿ ತುಳುವ ವಾರ್ತೆ

ತುಳುವ ವಾರ್ತೆ

ಮಾಜಿ ಸಚಿವ ರಮಾನಾಥ ರೈ ನೇತೃತ್ವದಲ್ಲಿ ನಡೆಯುವ ಮೂಡೂರು-ಪಡೂರು ಕಂಬಳಕ್ಕೆ ಸಿದ್ಧತೆ

ಮಂಗಳೂರು: ಈ ವರ್ಷದ ಕಂಬಳಕೂಟ ಮುಗಿಯುವ ಹಂತಕ್ಕೆ ಬರುತ್ತಿದ್ದು, ಇದೀಗ ಬಂಟ್ವಾಳದ ನಾವೂರು ಗ್ರಾಮದಲ್ಲಿ ಮತ್ತೊಂದು ಐತಿಹಾಸಿಕ ಕಂಬಳ ಆರಂಭಕ್ಕೆ ಸಿದ್ಧತೆ ನಡೆಯುತ್ತಿದೆ. ಮಾಜಿ ಸಚಿವ ರಮಾನಾಥ ರೈ ನೇತೃತ್ವದಲ್ಲಿ ನಡೆಯುವ ಕಂಬಳಕ್ಕೆ ನಾವೂರು ಗ್ರಾಮದಲ್ಲಿ ಎಲ್ಲಾ ರೀತಿಯ ಪೂರ್ಣ ಸಿದ್ದತೆಗಳು ಭರದಿಂದ ಸಾಗಿದೆ....

ಯಕ್ಷಗಾನ ಪ್ರದರ್ಶನ ವೇಳೆ ಬಿದ್ದು ಕಾಲುಮುರಿತ; ಕಲಾವಿದನಿಗೆ ಬೇಕಿದೆ ದಾನಿಗಳ ನೆರವಿನ ಹಸ್ತ

ಮಂಗಳೂರು: ಯಕ್ಷಗಾನದಲ್ಲಿ ಧಿಗಿಣ ತೆಗೆಯುವಾಗ ರಂಗಸ್ಥಳದಲ್ಲೇ ಕುಸಿದ ಖ್ಯಾತ ಯಕ್ಷಗಾನ ಕಲಾವಿದ ಜಯಾನಂದ ಸಂಪಾಜೆಯವರ ಕಾಲಿಗೆ ಗಂಭೀರ ಗಾಯಗೊಂಡು ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದಾರೆ. ಆರ್ಥಿಕವಾಗಿ ತೀರಾ ಸಂಕಷ್ಟದಲ್ಲಿರುವ ಇವರು ದಾನಿಗಳ ನೆರವಿನ ನಿರೀಕ್ಷೆಯಲ್ಲಿದ್ದಾರೆ. ಜಯಾನಂದ ಸಂಪಾಜೆಯವರು ಬಪ್ಪನಾಡು ಮೇಳದಲ್ಲಿ ಕಲಾವಿದರಾಗಿದ್ದು, ಫೆ.17ರಂದು ನಾರಾವಿಯಲ್ಲಿ ಬಪ್ಪನಾಡು ಮೇಳದವರಿಂದ...

ಮಂಗಳಾದೇವಿ ದೇವಸ್ಥಾನಕ್ಕೆ ಹೋಗುವ ಪ್ರಮುಖ ರಸ್ತೆಯಲ್ಲಿ ತುಳು ಲಿಪಿಯ ನಾಮಫಲಕ ಅಳವಡಿಕೆ

ಮಂಗಳೂರು: ನಗರದ ಸುಪ್ರಸಿದ್ಧ ಮಂಗಳಾದೇವಿ ದೇವಸ್ಥಾನಕ್ಕೆ ಹೋಗುವ ಪ್ರಮುಖ ರಸ್ತೆಯಲ್ಲಿ ಅಳವಡಿಸಲಾದ ತುಳು ಲಿಪಿಯ ನಾಮಫಲಕವನ್ನು ಶಾಸಕ ವೇದವ್ಯಾಸ್ ಕಾಮತ್ ಅವರು ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಶಾಸಕ ಕಾಮತ್, ಕೆಲವು ಸಮಯದ ಹಿಂದೆ ತುಳು ಸಂಘಟನೆಯೊಂದರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಶಿಶ್ಮಿತ ಎನ್ಮುವ...

ತುಳು ಭಾಷಾ ಶಿಕ್ಷಕರಿಗೆ ಬಾಕಿಯಿರುವ ಗೌರವಧನ ನೀಡುವಂತೆ ಸಚಿವ ಸುನೀಲ್ ಕುಮಾರ್’ಗೆ ಶಾಸಕ ಉಮಾನಾಥ ಕೋಟ್ಯಾನ್ ಮನವಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ 37 ಮತ್ತು ಉಡುಪಿ ಜಿಲ್ಲೆಯ 5 ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ತೃತೀಯ ಭಾಷೆಯಾಗಿ ತುಳು ಭಾಷಾ ಶಿಕ್ಷಣ ನೀಡಲಾಗುತ್ತಿದ್ದು, ಶಿಕ್ಷಣ ನೀಡುವ ಶಿಕ್ಷಕರಿಗೆ 3000 ರೂಪಾಯಿ ಗೌರವಧನವು ಹಲವು ವರ್ಷಗಳಿಂದ ಬಾಕಿಯಿದೆ. ಆ ಗೌರವಧನವನ್ನು ಬಾಕಿ ಸಮೇತ ಶಿಕ್ಷಕರಿಗೆ...

ಕ್ಯಾನ್ಸರ್ ಪೀಡಿತರಿಗೆ ವೀರಾಂಜನೇಯ ಸೇವಾ ಸಮಿತಿ ನೆರವು: 48ನೇ ಸೇವಾ ಯೋಜನೆಯ ಸಹಾಯಧನ ಹಸ್ತಾಂತರ

ಬಂಟ್ವಾಳ: ವೀರಾಂಜನೇಯ ಸೇವಾ ಸಮಿತಿಯು ತನ್ನ 48ನೇ ಸೇವಾ ಯೋಜನೆಯ ನೆರವನ್ನು ಕ್ಯಾನ್ಸರ್ ಪೀಡಿತರೋರ್ವರಿಗೆ ನೀಡಿದ್ದಾರೆ. ಬೆಳ್ತಂಗಡಿ ತಾಲೂಕಿನ ಓಡಿಳ್ನಾಳ ಗ್ರಾಮದ ಸುಪ್ರೀತ್ ಎಂಬವರು ಎಲುಬಿನ ಕ್ಯಾನ್ಸರ್ ಸಮಸ್ಯೆಯಿಂದ ಬಳತ್ತಿದ್ದರು. ಇವರ ಚಿಕಿತ್ಸೆಗೆ ಸುಮಾರು 13 ಲಕ್ಷದಷ್ಟು ಹಣ ಬೇಕಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ....

ಮಂಗಳೂರು: ಅಮೃತಸಂಜೀವಿನಿ 75ನೇ ಮಾಸಿಕ ಯೋಜನೆಯ ಅಂಗವಾಗಿ ಅಮೃತ ಮಹೋತ್ಸವ ಕಾರ್ಯಕ್ರಮ

ಮಂಗಳೂರು: ಅಮೃತಸಂಜೀವಿನಿ ರಿ. ಮಂಗಳೂರು ಇದರ 75ನೇ ಮಾಸಿಕ ಯೋಜನೆಯ ಅಂಗವಾಗಿ ಸಂಸ್ಥೆಯ ಅಂಗಸಂಸ್ಥೆ ವೀರಕೇಸರಿ ಕಣ್ಣೂರು ಮತ್ತು ಸಂಜೀವಿನಿ ಏರಮಲೆ ಇದರ ನೇತೃತ್ವದಲ್ಲಿ ಅಮೃತ ಮಹೋತ್ಸವ ಕಾರ್ಯಕ್ರಮವು ಕಣ್ಣೂರಿನ ಲಕ್ಷ್ಮೀ ನಾರಾಯಣ ಸಭಾಭವನದಲ್ಲಿ ನಡೆಯಿತು‌. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ಕಲ್ಲಡ್ಕ ಪ್ರಭಾಕರ...

ತುಳುನಾಡಿನಲ್ಲಿ ಕಂಬಳ ಪುನರಾರಂಭ, ಇಲ್ಲಿದೆ ಕಂಬಳದ ವೇಳಾಪಟ್ಟಿ ವಿವರ

ಮಂಗಳೂರು: ಕೋವಿಡ್ ನಿಯಂತ್ರಣ ಸಂಬಂಧ ಜಾರಿಯಾಗಿದ್ದನಿಯಮಾವಳಿಗಳ ಕಾರಣದಿಂದಾಗಿ  ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ತುಳುನಾಡಿನ ಕಂಬಳ ಪುನರಾರಂಭಗೊಳ್ಳಲಿದೆ. ಈ ಸಂಬಂಧ ಇಂದು ಜಿಲ್ಲಾ  ಕಂಬಳ ಸಮಿತಿ ಸಭೆ ನಡೆದಿದ್ದು, ಬಾಕಿ ಉಳಿದ ಕಂಬಳಗಳ ಆಯೋಜನೆಗೆ ದಿನಾಂಕವನ್ನು ನಿಗದಿಪಡಿಸಲಾಗಿದೆ. ಅದರಂತೆ ಫೆಬ್ರವರಿ 5ರಿಂದ ಮೊದಲ್ಗೊಂಡು ಏಪ್ರಿಲ್ 16ರವರೆಗೆ ಬಾಕಿ...

ಅನಾರೋಗ್ಯಕ್ಕೀಡಾಗಿದ್ದ ವ್ಯಕ್ತಿಗೆ ವೀರಾಂಜನೇಯ ಸೇವಾ ಸಮಿತಿ ನೆರವು, 47ನೇ ಸೇವಾ ಯೋಜನೆಯ ಸಹಾಯಧನ ಹಸ್ತಾಂತರ

ಬಂಟ್ವಾಳ: ವಿದ್ಯಾದಾನ ಹಾಗೂ ಬಡವರ ಸೇವೆಯನ್ನೇ ಧ್ಯೇಯವಾಗಿರಿಸಿದ, ವೀರಾಂಜನೇಯ ಸೇವಾ ಸಮಿತಿ ಮಂಗಳೂರು ಇದೀಗ ತಮ್ಮ 47ನೇ ಸೇವಾ ಯೋಜನೆಯ ಸಹಾಯಹಸ್ತ ನೀಡಿ ಅಶಕ್ತರ ಪಾಲಿಗೆ ಬೆಳಕಾಗಿದೆ. ಬಂಟ್ವಾಳ ತಾಲೂಕಿನ ಕರ್ಪೆ ಗ್ರಾಮದ ಪುರುಷೋತ್ತಮ ಎಂಬವರು ಕಳೆದ 25 ವರ್ಷದಿಂದ ಹೃದಯದ ಸಮಸ್ಯೆಯಿಂದ ಬಳತ್ತಿದ್ದರು....

ಡಿ.22ರಿಂದ ಡಿ.26ರವರೆಗೆ ತೋಡಾರು ಕೊಡಮಣಿತ್ತಾಯ ಬ್ರಹ್ಮಶ್ರೀ ಬೈದರ್ಕಳ ಗರಡಿಯಲ್ಲಿ ಕಾಲಾವಧಿ ಜಾತ್ರೋತ್ಸವ

ಮೂಡುಬಿದಿರೆ: ತಾಲೂಕಿನ ತೋಡಾರು ಗ್ರಾಮದಲ್ಲಿರುವ ಶ್ರೀ ಕೊಡಮಣಿತ್ತಾಯ , ಬ್ರಹ್ಮಶ್ರೀ ಬೈದರ್ಕಳ ಗರಡಿಯಲ್ಲಿ ಡಿ.22ರಿಂದ ಮೊದಲ್ಗೊಂಡು ಡಿ.26ರವರೆಗೆ ಕಾಲಾವಧಿ ಜಾತ್ರೋತ್ಸವ ಜರುಗಲಿದೆ. ಡಿ22ರಂದು ಬುಧವಾರ ರಾತ್ರಿ 8 ಗಂಟೆಗೆ ಧ್ವಜಾರೋಹಣದೊಂದಿಗೆ ಜಾತ್ರೋತ್ಸವ ಆರಂಭಗೊಳ್ಳಲಿದೆ. ಡಿ.23ರಂದು ಗುರುವಾರ ಸಂಜೆ 6.30ಕ್ಕೆ ದುರ್ಗಾ ನಮಸ್ಕಾರ ಪೂಜೆ,...

ತುಳುವರಿಗೆ ನಿರಾಶೆ! ಸದ್ಯಕ್ಕೆ ತುಳುಭಾಷೆಗೆ ಸಾಂವಿಧಾನಿಕ ಮಾನ್ಯತೆ ಪ್ರಸ್ತಾವ ಸರಕಾರದ ಮುಂದಿಲ್ಲ ಎಂದ ಗೃಹ ಖಾತೆ ರಾಜ್ಯ ಸಚಿವರು!

ನವದೆಹಲಿ: ಇನ್ನೇನು ತುಳು ಭಾಷೆಗೆ ಸೂಕ್ತ ಸ್ಥಾನಮಾನ ಸಿಗುತ್ತದೆ ಎಂದು ನಿರೀಕ್ಷೆಯಲ್ಲಿದ್ದ ತುಳುಭಾಷಿಕರಿಗೆ ತೀರಾ ನೋವುಂಟು ಮಾಡಿರುವ ಹೇಳಿಕೆ ಇದು. ಮಂಗಳವಾರ ಲೋಕಸಭೆಯಲ್ಲಿ ಕಾಸರಗೋಡು ಕ್ಷೇತ್ರದ‌ ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಅವರು, ‘ತುಳುವನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸುವ ಯೋಜನೆ ಸರಕಾರಕ್ಕಿದೆಯೇ,...

ಪ್ರಮುಖ ಸುದ್ದಿಗಳು

ಸುಳ್ಯ: ಮನೆ ಮೇಲೆ ಬಿದ್ದ ಮರ, ಮಲಗಿದ್ದವರಿಗೆ ಗಾಯ

0
ಸುಳ್ಯ: ಮನೆಯ ಮೇಲೆ ಬೃಹತ್ ಮರ ಬಿದ್ದ ಪರಿಣಾಮ ಮನೆಯಲ್ಲಿದ್ದವರು ಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕೇರ್ಪಡ ಪಲ್ಲತಡ್ಕದಲ್ಲಿ ತಡ ರಾತ್ರಿ ನಡೆದಿದೆ. ಕೇರ್ಪಡ ಪಲ್ಲತಡ್ಕದ ಮೊಗೇರ್ಕಳ ಸೇವಾ ಸಮಿತಿ...
error: Content is protected !!