ನವದೆಹಲಿ: ದೇಶದಲ್ಲಿ ಕೊರೋನಾ ಅಬ್ಬರಕ್ಕೆ ಕಡಿವಾಣ ಹಾಕಲು ಲಸಿಕೆ ಅಭಿಯಾನ ಮತ್ತಷ್ಟು ವೇಗ ಪಡೆದುಕೊಳ್ಳುತ್ತಿದೆ. ಕೋವಿಶೀಲ್ಡ್ ಲಸಿಕೆ ಉತ್ಪಾದಿಸುತ್ತಿರುವ ಪುಣೆಯ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ(ಎಸ್ಐಐ)ಗೆ ಕೇಂದ್ರ ಸರ್ಕಾರ ಹೊಸ ಖರೀದಿ ಆದೇಶ ನೀಡಿದೆ. ಆಕ್ಸ್ ಫರ್ಡ್
-ಅಸ್ಟ್ರಾಜೆನೆಕಾ ಸಂಸ್ಥೆಯ 10 ಕೋಟಿ ಕೋವಿಶೀಲ್ಡ್ ಡೋಸ್ ಖರೀದಿಗೆ ಆದೇಶಿಸಿದೆ.
ಜಿಎಸ್ಟಿ ಸೇರಿ ಪ್ರತಿ ಡೋಸ್ ಗೆ 157.50 ರೂ. ದರ ನಿಗದಿಪಡಿಸಲಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಪರವಾಗಿ ಸಾರ್ವಜನಿಕ ವಲಯದ ಸಂಸ್ಥೆ ಎಚ್ಎಲ್ಎಲ್ ಲೈಫ್ಕೇರ್ ಲಿಮಿಟೆಡ್ ಮಾರ್ಚ್ 12 ರಂದು ಲಸಿಕೆ ಪೂರೈಕೆಗೆ ಆರ್ಡರ್ ನೀಡಿದೆ.
ಈ 10 ಕೋಟಿ ಡೋಸ್ ಗಳ ವೆಚ್ಚವನ್ನು ಆರೋಗ್ಯ ಸಚಿವಾಲಯ ಬಜೆಟ್ ಹಂಚಿಕೆಯಡಿ ಭರಿಸಲಿದೆ. ಈ ಹಿಂದೆ ಲಸಿಕೆ ಖರೀದಿ ವೆಚ್ಚವನ್ನು ಪಿಎಂ ಕ್ಯಾರ್ಸ್ ಫಂಡ್ ಮೂಲಕ ನೀಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ಒಂದೇ ದಿನ 188 ಸಾವು
ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 28,903 ಹೊಸ ಕೇಸ್ ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1,14,38,734ಕ್ಕೆ ಏರಿಕೆಯಾಗಿದೆ. ಒಂದೇ ದಿನ 188 ಮಂದಿಯನ್ನು ಬಲಿಪಡೆದುಕೊಂಡಿದ್ದು, ಸಾವಿನ ಸಂಖ್ಯೆ 1,59,044ಕ್ಕೆ ಏರಿಕೆಯಾಗಿದೆ. ದೇಶದಲ್ಲಿ 2,34,406 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
10 ಕೋಟಿ ಕೋವಿಶೀಲ್ಡ್ ಡೋಸ್ ಖರೀದಿಗೆ ಕೇಂದ್ರದ ಆದೇಶ
ವಾಣಿಜ್ಯ ಜಾಹಿರಾತು
ವಾಣಿಜ್ಯ ಜಾಹಿರಾತು