ವಾಣಿಜ್ಯ ಜಾಹಿರಾತು

ಉಡುಪಿ: ಉಡುಪಿ ಜನತೆ ಸುರತ್ಕಲ್ ಟೋಲ್ ಸುಂಕದ ಭಾರದಿಂದ ಮುಕ್ತರಾಗಿದ್ದಾರೆ. ಆದರೆ ಖಾಸಗಿ ಸರ್ವಿಸ್ ಬಸ್ಸುಗಳು ಹಾಗೂ ಉಡುಪಿ, ಕಾರ್ಕಳ, ಕುಂದಾಪುರ, ಬೈಂದೂರು, ಹೆಬ್ರಿ ಕಡೆಗೆ ಸಂಚರಿಸುತ್ತಿದ್ದ ಖಾಸಗಿ  ಎಕ್ಸ್ ಪ್ರೆಸ್  ಬಸ್ ಗಳು ಟಿಕೆಟ್ ಜೊತೆಗೆ ಟೋಲ್ ದರವನ್ನು ಸೇರಿಸಿ ಪ್ರಯಾಣಿಕರಿಂದ ಹೆಚ್ಚುವರಿ ಶುಲ್ಕವನ್ನು ಸಂಗ್ರಹಿಸುತ್ತಿದ್ದಾರೆ. ಇದರಿಂದ ಜನಸಾಮಾನ್ಯರಿಗೆ ಹೊರೆಯಾಗಿದ್ದು, ಈ ಕ್ರಮವನ್ನು ತಕ್ಷಣದಿಂದಲೇ ಕೈ ಬಿಡಬೇಕು ಎಂದು ಸಿಐಟಿಯು ಉಡುಪಿ ಜಿಲ್ಲಾ ಕಾರ್ಯದರ್ಶಿ ಕವಿರಾಜ್ ಎಸ್ ಒತ್ತಾಯಿಸಿದ್ದಾರೆ.

ಟಿಕೆಟ್ ಮೆಲೆ ವಿಧಿಸುತ್ತಿರುವ 5ರೂ. ಟೋಲ್ ಶುಲ್ಕವನ್ನು ಬಸ್ ಮಾಲಕರು ತಕ್ಷಣದಿಂದಲೇ ಕೈ ಬೀಡಬೇಕು ಕವಿರಾಜ್ ಎಸ್ ಆಗ್ರಹಿಸಿದ್ದಾರೆ. ಇದೀಗ ಜನಸಾಮಾನ್ಯರ ನಿರಂತರ ಹೋರಾಟದಿಂದ ಸುರತ್ಕಲ್ ಟೋಲ್ ಗೇಟ್ ಶಾಶ್ವತವಾಗಿ ತೆರವುಗೊಂಡಿದೆಯಾದರು ಬಸ್ ಮಾಲಕರು ಟೋಲ್ ನೆಪದಲ್ಲಿ ಏರಿಸಿದ ದರವನ್ನು 14ದಿನವಾದರು ಇಳಿಸಲು ಯಾವುದೇ ತೀರ್ಮಾನವನ್ನು ಕೈಗೊಂಡಿಲ್ಲ ಎಂದರು.

ಸುರತ್ಕಲ್ ಟೋಲ್ ಸಂಗ್ರಹದ ನೆಪದಲ್ಲಿ ಏರಿಕೆಗೆ ಅವಕಾಶ ನೀಡಿದ ಉಡುಪಿ ಜಿಲ್ಲಾಡಳಿತ, ಸಾರಿಗೆ ಪ್ರಾಧಿಕಾರ ಏರಿಕೆ ಮಾಡಿದ ಪ್ರಯಾಣ ದರವನ್ನು ಇಳಿಸುವ ಕ್ರಮಕ್ಕು ಮುಂದಾಗಬೇಕು. ಈಗಾಗಲೇ ಸುರತ್ಕಲ್ ಟೋಲ್ ರದ್ದಾಗಿ ಇಂದಿಗೆ 14 ದಿನ ಕಳೆದಿದೆ ದಿನಕ್ಕೆ 16ಲಕ್ಷದಂತೆ ಜನತೆಗೆ ಉಳಿತಾಯವಾಗಿದ್ದೂ ಬರೋಬ್ಬರಿ2.24ಕೋಟಿ. ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಧಿಕಾರಿ ಗಳು ಈ ಕೂಡಲೇ ಬಸ್ ಪ್ರಯಾಣದ ದರ ಇಳಿಕೆ ಕುರಿತು ಬಸ್ಸು ಮಾಲಿಕರಿಗೆ ಸೂಚನೆಯನ್ನು ನೀಡಬೇಕು. ಅಗತ್ಯ ಬಿದ್ದಲ್ಲಿ ಸಾರಿಗೆ ಪ್ರಾಧಿಕಾರದ ಸಭೆಯನ್ನು ಕರೆದು ಚರ್ಚಿಸಬೇಕು ಎಂದು ಅವರು ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.