ವಾಣಿಜ್ಯ ಜಾಹಿರಾತು
ಮಂಗಳೂರು: ಸ್ವಚ್ಛ ಅಮೃತ ಮಹೋತ್ಸವದ ಅಂಗವಾಗಿ ‘ಸ್ವಚ್ಛ ಸಾಗರ ಸುರಕ್ಷಿತ ಸಾಗರ’ ಧ್ಯೇಯವಾಕ್ಯದೊಂದಿಗೆ ಪಣಂಬೂರು ಕಡಲ ತೀರದಲ್ಲಿ ಸ್ವಚ್ಛತಾ ಅಭಿಯಾನ ಶನಿವಾರ ನಡೆಯಿತು. ನೂರಾರು ಸ್ವಯಂಸೇವಕರು ಕಡಲ ಕಿನಾರೆಯನ್ನು ಸ್ವಚ್ಚಗೊಳಿಸಿದರು.
ಬೆಳಿಗ್ಗೆ 7 ಗಂಟೆಗೆ ಆರಂಭವಾದ ಈ ಸ್ವಚ್ಛತಾಕಾರ್ಯದಲ್ಲಿ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳ ಸ್ವಯಂ ಸೇವಕರು ಕರಾವಳಿ ರಕ್ಷಣಾ ದಳ, ಎನ್‌ಎಂಪಿಎ ಅಧಿಕಾರಿಗಳು ಭಾಗವಹಿಸಿದರು. ಸಂಸದ ನಳಿನ್ ಕುಮಾರ್ ಕಟೀಲ್ ಅವರು ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದರು.
ದಕ್ಷಿಣ ಕನ್ನಡ ಜಿಲ್ಲಾಡಳಿತ, ಕೇಂದ್ರ ಸರ್ಕಾರದ ಭೂವಿಜ್ಞಾನ ಸಚಿವಾಲಯ ಹಾಗೂ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ, ಕರಾವಳಿ ರಕ್ಷಣಾ ಪ್ರಾಧಿಕಾರದ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಂಗಳೂರಿನ ಮೇಯರ್ ಜಯಾನಂದ ಅಂಚನ್, ಶಾಸಕ ವೈ.ಭರತ್ ಶೆಟ್ಟಿ, ಉಪಮೇಯರ್ ಪೂರ್ಣಿಮಾ, ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ., ಮಂಗಳೂರು ಮಹಾಬಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಭಾಗವಹಿಸಿದ್ದರು
ವಾಣಿಜ್ಯ ಜಾಹಿರಾತು