ವಾಣಿಜ್ಯ ಜಾಹಿರಾತು
ಬೆಂಗಳೂರು: ಆಶ್ರಯ ವಸತಿ ಯೋಜನೆಯ ಫಲಾನುಭವಿ ಆಯ್ಕೆಗಿರುವ ವಾರ್ಷಿಕ ವರಮಾನ ಮಿತಿಯನ್ನು 1.20 ಲಕ್ಷಕ್ಕೆ ಹೆಚ್ಚಿಸಲು ಮುಖ್ಯಮಂತ್ರಿಗಳು ನಿರ್ದೇಶಿಸಿರುವುದಾಗಿ ಗೃಹಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಆಶ್ರಯ ವಸತಿ ಯೋಜನೆಯ ಫಲಾನುಭವಿ ಆಯ್ಕೆಗಿರುವ ವಾರ್ಷಿಕ ವರಮಾನ ಮಿತಿ ಹೆಚ್ಚಳಕ್ಕೆ ವಸತಿರಹಿತರು ಮನವಿ ಮಾಡಿದ್ದು, ಇದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿತ್ತು. ಅದರಂತೆ ವಾರ್ಷಿಕ ವರಮಾನ ಮಿತಿಯನ್ನು 1.20 ಲಕ್ಷಕ್ಕೆ ಹೆಚ್ಚಿಸಲು ಮುಖ್ಯಮಂತ್ರಿಗಳು ನಿರ್ದೇಶಿಸಿದ್ದಾರೆ ಎಂದು ಹೇಳಿದ್ದಾರೆ.
ವರಮಾನ ಮಿತಿ ಈವರೆಗೆ 32,000 ರೂ. ಇದ್ದು, ಹೆಚ್ಚಿನ ಅರ್ಹರು ಯೋಜನೆಯಿಂದ ವಂಚಿತರಾಗಿದ್ದಾರೆ. ಈ ನಿರ್ಧಾರದಿಂದ ಲಕ್ಷಾಂತರ ವಸತಿ ವಂಚಿತ ಬಡವರು ಪ್ರಯೋಜನ ಪಡೆಯಲಿದ್ದಾರೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ವಾಣಿಜ್ಯ ಜಾಹಿರಾತು