ಕೋಸ್ಟಲ್ ವುಡ್ ನ ಹಿಟ್ ಚಿತ್ರ ‘ಜಬರ್ ದಸ್ತ್ ಶಂಕರ’ ದಲ್ಲಿ ಖಳನಾಯಕನಾಗಿ ಮಿಂಚಿದ್ದ ಪ್ರತೀಕ್ ಶೆಟ್ಟಿ ಈಗ ಸ್ಯಾಂಡಲ್ ವುಡ್ ನಲ್ಲಿ ನಾಯಕನಾಗಿ ಎಂಟ್ರಿ ಪಡೆದಿದ್ದಾರೆ. ಇದು ಪ್ರತೀಕ್ ಶೆಟ್ಟಿ ಅವರಿಗೆ ಕನ್ನಡದಲ್ಲಿ ಚೊಚ್ಚಲ ಚಿತ್ರ.
‘ಜಬರ್ ದಸ್ತ್ ಶಂಕರ’ ಚಿತ್ರಕ್ಕೂ ಮೊದಲು ‘ಪತ್ತನಾಜೆ’ಯಲ್ಲಿ ಖಳನಾಯಕನಾಗಿ ಎಂಟ್ರಿ ಪಡೆದಿದ್ದರು. ಆ ಬಳಿಕ ‘ಪೆಟ್ ಕಮ್ಮಿ’, ‘ಏರಾ ಉಲ್ಲೆರ್’ ಗೆ ಸೇರಿದಂತೆ ಒಟ್ಟು 5 ತುಳು ಚಿತ್ರಗಳಲ್ಲಿ ನಟಿಸಿರುವ ಪ್ರತೀಕ್ ಅವರು ವಿಲನ್ ಶೇಡ್ ನಲ್ಲೇ ಕಾಣಿಸಿಕೊಂಡದ್ದೇ ಹೆಚ್ಚು. ಕೋಸ್ಟಲ್ ವುಡ್ ನಲ್ಲಿ ವಿಲನ್ ಪಾತ್ರದಲ್ಲಿ ತನ್ನದೇ ಛಾಪು ಮೂಡಿಸಿದ ಈ ನಟ ಈಗ ಸ್ಯಾಂಡಲ್ ವುಡ್ ಅಂಗಳಕ್ಕೆ ಕಾಲಿಟ್ಟಿದ್ದು ‘ನಿಮ್ಮೆಲ್ಲರ ಆಶೀರ್ವಾದ’ದಿಂದ ಅಂತಿದ್ದಾರೆ.
ಅಂದಹಾಗೆ ‘ನಿಮ್ಮೆಲ್ಲರ ಆಶೀರ್ವಾದ’ ಪ್ರತೀಕ್ ಶೆಟ್ಟಿ ಅಭಿನಯದ ಚೊಚ್ಚಲ ಕನ್ನಡ ಚಿತ್ರ. ಈ ಚಿತ್ರದಲ್ಲಿರುವ ಹೆಚ್ಚಿನ ನಟರು, ತಂತ್ರಜ್ಞರು ಹೊಸಬರೇ ಆಗಿದ್ದು ನಿರ್ದೇಶಕ ರವಿಕಿರಣ್ , ನಿರ್ಮಾಪಕ ವರುಣ್ ಹೆಗ್ಡೆ ಅವರಿಗೂ ಮೊದಲ ಕನ್ನಡ ಚಿತ್ರ. ಚಿತ್ರತಂಡ ಬಿಡುಗಡೆಗೊಳಿಸಿದ ಪೋಸ್ಟರ್ ನಲ್ಲಿ ಪ್ರತೀಕ್ ಶೆಟ್ಟಿ ಖಡಕ್ ಪೊಲೀಸ್ ಅಧಿಕಾರಿಯ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಮುಂಬೈ ಯಲ್ಲಿ ವಾಸವಾಗಿರುವ ಪ್ರತೀಕ್ ಶೆಟ್ಟಿ ಅವರ ಊರು ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದ ಇರಾ. ಎಂಬಿಎ ಓದಿರುವ ಪ್ರತೀಕ್ ಅವರಿಗೆ ಮೊದಲಿನಿಂದಲೂ ಆಕ್ಟಿಂಗ್ ನತ್ತ ಒಲವು ಜಾಸ್ತಿ. ಡಾನ್ಸರ್, ಡಬ್ಬಿಂಗ್, ವಾಯ್ಸ್ ಓವರ್ ಆರ್ಟಿಸ್ಟ್, ಆ್ಯಂಕರ್ ಆಗಿಯೂ ಗುರುತಿಸಿಕೊಂಡಿದ್ದ ಪ್ರತೀಕ್ ಅವರು ಹಲವಾರು ಕಿರುಚಿತ್ರಗಳಲ್ಲೂ ಅಭಿನಯಿಸಿದ್ದಾರೆ. ಹಿಂದಿ ಸೀರಿಯಲ್ ನಲ್ಲೂ ಸಣ್ಣಪುಟ್ಟ ಪಾತ್ರಗಳಲ್ಲಿ ಮಿಂಚಿದ ಪ್ರತಿಭೆ. ಇದೀಗ ನಾಯಕನಟನಾಗಿ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡುತ್ತಿರುವ ಪ್ರತೀಕ್ ಅವರಿಗೆ ‘ನಿಮ್ಮೆಲ್ಲರ ಆಶೀರ್ವಾದ’ವಿರಲಿ….
All the best bro