ಇತ್ತೀಚಿನ ದಿನಗಳಲ್ಲಿ ಮಾಸ್ಕ್ ಧರಿಸೋದು ನಮ್ಮ ದೈನಂದಿನ ಬದುಕಿನ ಒಂದು ಭಾಗ ಎಂಬಂತಾಗಿದೆ. ಅದಕ್ಕೆ ಕಾರಣ ಕೊರೊನಾ ಮಹಾಮಾರಿ ವಕ್ಕರಿಸುವ ಭಯ. ಹಾಗಂತ ಕೊರೊನಾ ಬರುವ ಮುನ್ನ ಮಾಸ್ಕ್ ಬಳಕ್ಕೆ ಇದ್ದಿಲ್ಲವೆಂದಲ್ಲ. ವೈದ್ಯಕೀಯ ಕ್ಷೇತ್ರದಲ್ಲಿರುವವರು ಮಾಸ್ಕ್ ಬಳಸುತ್ತಿದ್ದರು. ಆದರೆ ಈಗ ಹುಟ್ಟಿದ ಮಗುವಿನಿಂದ ಹಿಡಿದು ಮದುಕರವರೆಗೂ ಮಾಸ್ಕ್ ಬಳಕೆ ಕಡ್ಡಾಯವಾಗಿದೆ. ಮಾಸ್ಕ್ ಧರಿಸೋದು ನಮ್ಮನ್ನು ನಾವು ರಕ್ಷಿಸಿಕೊಳ್ಳೋದಕ್ಕೆ. ಆದರೆ ಈಗ ಅದು ಫ್ಯಾಶನ್ ಆಗಿ ಬದಲಾಗುತ್ತಿದೆ. ಅದರಲ್ಲೂ ಈಗ ನಾವು ಧರಿಸೋ ಬಟ್ಟೆಯ ಬಣ್ಣಕ್ಕೆ ಹೊಂದಿಕೆಯಾಗುವ ಮಾಸ್ಕ್ ಗಳು, ಒಂದಕ್ಕಿಂತ ಒಂದು ಕಲರ್ ಕಲರ್ ಡಿಸೈನ್ ಮಾಸ್ಕ್ ಗಳು ಮಾರುಕಟ್ಟೆಯಲ್ಲಿ ಕಾಣಸಿಗುತ್ತಿವೆ. ಸಮಾರಂಭಗಳಾದಾಗ ಹೆಚ್ಚಿನವರು ಇಂತಹ ಮಾಸ್ಕ್ ಗಳ ಮೊರೆಹೋಗುತ್ತಿರುವುದು ಉಂಟು. ಮದುಮಗಳು ತಾನು ಎಷ್ಟೇ ದುಬಾರಿ ಡ್ರೆಸ್ ಹಾಕಿದರೂ ಅದಕ್ಕೆ ಮ್ಯಾಚ್ ಆಗೋತರದ ಮಾಸ್ಕ್ ಧರಿಸುವುದು, .ಮಾಸ್ಕ್ ಧರಿಸಿಯೇ ವಿವಿಧ ಭಂಗಿಯಲ್ಲಿ ಫೋಟೋಶೂಟ್ ಕೂಡ ನಡೆಸುವುದು ಈಗ ಟ್ರೆಂಡ್ ಎಂಬಂತಾಗಿದೆ. ಈಗಾಗಲೇ ಫ್ಯಾಬ್ರಿಕ್ ಮಾಸ್ಕ್, ಸರ್ಜಿಕಲ್ ಮಾಸ್ಕ್, ಟ್ರಿಪಲ್ ಲೇಯರ್ ಮಾಸ್ಕ್, ಡಿಸೆಬಲ್ ಮಾಸ್ಕ್, ರೆಸ್ಪಿರೇಟರ್ಸ್ ಮುಂತಾದ ಮಾಸ್ಕ್ ಗಳು ಮಾರುಕಟ್ಟೆಯಲ್ಲಿವೆ.
ಬಟ್ಟೆಗೆ ಹೊಂದುವ ಕಲರ್ ಫುಲ್ ಮಾಸ್ಕ್
ವಾಣಿಜ್ಯ ಜಾಹಿರಾತು
ವಾಣಿಜ್ಯ ಜಾಹಿರಾತು