ವಾಣಿಜ್ಯ ಜಾಹಿರಾತು

ಬರ್ಮಿಂಗ್ ಹ್ಯಾಮ್: ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದ್ದು, ಬ್ಯಾಡ್ಮಿಂಟನ್ ಮಹಿಳೆಯರ ಸಿಂಗಲ್ಸ್ ಫೈನಲ್ ನಲ್ಲಿ ಪಿ.ವಿ.ಸಿಂಧು, ಪುರುಷರ ಸಿಂಗಲ್ಸ್ ನಲ್ಲಿ ಭಾರತದ ಲಕ್ಷ್ಯ ಸೇನ್ ಹಾಗೂ ಪುರುಷರ ಡಬಲ್ಸ್ ನಲ್ಲಿ ಫೈನಲ್ ನಲ್ಲಿ ಸಾತ್ವಿಕ್ ಸಾಯಿ ರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಚಿನ್ನದ ಪದಕ ಗಳಿಸುವ ಮೂಲಕ ಸಾಧನೆ ಮಾಡಿದ್ದಾರೆ.

ಇವರೊಂದಿಗೆ ಟೇಬಲ್ ಟೆನಿಸ್‌ನ ಪುರುಷರ ಸಿಂಗಲ್ ಫೈನಲ್‌ನಲ್ಲಿ ಅಚಂತಾ ಶರತ್ ಕಮಲ್ ಗೆ ಚಿನ್ನ, ಸತ್ಯನ್ ಜ್ಞಾನಶೇಖರನ್ ಅವರು ಕಂಚಿನ ಪದಕ ಗೆದ್ದಿದ್ದಾರೆ.

ಕೆನಡಾದ ಆಟಗಾರ್ತಿ ಮಿಚೆಲ್ ಲಿ ವಿರುದ್ಧ ಮೇಲುಗೈ ಸಾಧಿಸಿದ ಪಿ.ವಿ.ಸಿಂಧು ಅವರು 21-15, 21-13 ನೇರ ಗೇಮ್‌ ಗಳಲ್ಲಿ ಪಂದ್ಯ ಗೆದ್ದರು. ಈ ಮೂಲಕ ತನ್ನ ಮೊದಲ ಕಾಮನ್ವೆಲ್ತ್ ಗೇಮ್ಸ್ ಚಿನ್ನದ ಪದಕ ಪಡೆದರು.

ಲಕ್ಷ್ಯ ಸೇನ್ ಅವರು ಮಲೇಷ್ಯಾದ ಎನ್‌ಜಿ ಟ್ಜೆ ಯೋಂಗ್ ಅವರನ್ನು 19-21, 21-9, 21-16 ಸೆಟ್‌ಗಳಿಂದ ಸೋಲಿಸಿ ಪುರುಷರ ಸಿಂಗಲ್ಸ್‌ ನಲ್ಲಿ ಚಿನ್ನ ಗೆದ್ದರು.

ಭಾರತದ ಸಾತ್ವಿಕ್ ಸಾಯಿ ರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಬ್ಯಾಡ್ಮಿಂಟನ್ ನಲ್ಲಿ ಪುರುಷರ ಡಬಲ್ಸ್ ನಲ್ಲಿ ಫೈನಲ್ ನಲ್ಲಿ ಚಿನ್ನ ಗೆದ್ದಿದ್ದಾರೆ. ಈ ಗೆಲುವಿನೊಂದಿಗೆ ಭಾರತ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಇದುವರೆಗೆ 22ನೇ ಚಿನ್ನದ ಪದಕ ಪಡೆಯಿತು.

ಟೇಬಲ್ ಟೆನಿಸ್ ನಲ್ಲಿ ಪುರುಷರ ಸಿಂಗಲ್ಸ್ ಫೈನಲ್ಸ್ ನಲ್ಲಿ ಅಚಂತಾ ಶರತ್ ಕಮಲ್ ಗೆ ಚಿನ್ನವನ್ನು ಗೆದ್ದಿದ್ದಾರೆ.

ಕಾಮನ್ ವೆಲ್ತ್ ಗೇಮ್ಸ್ 2022ರ ಇಂದಿನ ಪಂದ್ಯಾವಳಿಯಲ್ಲಿ ಟೇಬಲ್ ಟೆನಿಸ್ ನ ಪುರುಷರ ಸಿಂಗಲ್ಸ್ ನಲ್ಲಿ ಭಾರತದ ಸತ್ಯನ್ ಜ್ಞಾನಶೇಖರನ್ ಅವರು ಕಂಚಿನ ಪದಕ ಗೆದ್ದಿದ್ದಾರೆ.

ಕಾಮನ್ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಇಲ್ಲಿಯವರೆಗೂ ಭಾರತಕ್ಕೆ ಒಟ್ಟು 60 ಪದಕಗಳು ಬಂದಿದ್ದು 22 ಚಿನ್ನ, 15 ಬೆಳ್ಳಿ ಹಾಗೂ 24 ಕಂಚು ಸೇರಿದೆ.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.