ವಾಣಿಜ್ಯ ಜಾಹಿರಾತು

ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಕ್ರೀಡಾಕೂಟದ 10ನೇ ದಿನ ಭಾರತ ಭರ್ಜರಿ ಪದಕ ಗಳಿಸಿದೆ. ಐದು ಚಿನ್ನ ಸೇರಿದಂತೆ 15 ಪದಕಗಳನ್ನು ಗೆದ್ದುಕೊಂಡಿದೆ.

ಬಾಕ್ಸಿಂಗ್‌ನಲ್ಲಿ ನಿಖತ್ ಜರೀನ್, ಅಮಿತ್ ಪಂಗಲ್ ಮತ್ತು ನಿತು ಗಂಗಾಸ್ ಆಯಾ ವಿಭಾಗಗಳಲ್ಲಿ ಚಿನ್ನ ಗೆದ್ದರೆ, ಪುರುಷರ ಟ್ರಿಪಲ್ ಜಂಪ್‌ನಲ್ಲಿ ಎಲ್ದೋಸ್ ಪಾಲ್ ಮತ್ತು ಅಬ್ದುಲ್ಲಾ ಅಬೂಬಕರ್ ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಗೆದ್ದುಕೊಂಡಿದೆ.
ಟೇಬಲ್ ಟೆನಿಸ್ ಮಿಶ್ರ ಡಬಲ್ಸ್‌ನಲ್ಲೂ ಭಾರತ ಚಿನ್ನ ಗೆದ್ದಿದೆ. ಈ ನಡುವೆ ಮಹಿಳಾ ಕ್ರಿಕೆಟ್ ತಂಡವು ಕ್ರೀಡಾಕೂಟದಲ್ಲಿ ತಮ್ಮ ಉದ್ಘಾಟನಾ ಪ್ರದರ್ಶನದಲ್ಲಿ ಬೆಳ್ಳಿ ಗೆದ್ದುಕೊಂಡಿದೆ.

ಮಹಿಳೆಯರ 48 ಕೆಜಿ (ಕನಿಷ್ಠ ತೂಕ) ವಿಭಾಗದಲ್ಲಿ ನಿತು ಘಂಘಾಸ್ ಆತಿಥೇಯ ದೇಶದ ಡೆಮಿ-ಜೇಡ್ ರೆಜ್‌ಸ್ಟಾನ್ ಅವರನ್ನು 5-0 ಅಂತರದಿಂದ ಸೋಲಿಸುವುದರೊಂದಿಗೆ 10 ನೇ ದಿನದಂದು ಭಾರತಕ್ಕೆ ಬಾಕ್ಸಿಂಗ್ ನಲ್ಲಿ ಚಿನ್ನದ ಓಟ ಆರಂಭಿಸಿದರು. ಪುರುಷರ 48 ಕೆಜಿ-51 ಕೆಜಿ (ಫ್ಲೈವೇಟ್) ವಿಭಾಗದಲ್ಲಿ ಅಮಿತ್ ಪಂಘಲ್ ೫-೦ ಅಂತರದಲ್ಲಿ ಬಾಕ್ಸರ್ ಕಿಯಾರನ್ ಮ್ಯಾಕ್ಡೊನಾಲ್ಡ್ ವಿರುದ್ಧ ಗೆದ್ದು ಭಾರತಕ್ಕೆ ಮತ್ತೊಂದು ಚಿನ್ನದ ಪದಕ ಗೆದ್ದರು. ವಿಶ್ವ ಚಾಂಪಿಯನ್ ನಿಖತ್ ಝರೀನ್ ನಂತರ ಭಾರತಕ್ಕೆ 5-0 ಅಂತರದಲ್ಲಿ ಉತ್ತರ ಐರ್ಲೆಂಡ್‌ನ ಕ್ಯಾರಿ ಎಂಸಿ ನೌಲ್ ಅವರನ್ನು ಸೋಲಿಸಿ ಚಿನ್ನದ ಪದಕ ಗೆದ್ದರು.

ಕೇರಳದ 25 ವರ್ಷ ವಯಸ್ಸಿನ ಜಿಗಿತಗಾರ ಎಲ್ದೋಸ್ ಪಾಲ್ ಅವರು ಕ್ರೀಡಾಕೂಟದಲ್ಲಿ ಪುರುಷರ ಟ್ರಿಪಲ್ ಜಂಪ್‌ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಎಂಬ ಇತಿಹಾಸವನ್ನು ನಿರ್ಮಿಸಿದ್ದಾರೆ. ಇದೇ ಈವೆಂಟ್‌ನಲ್ಲಿ ಅಬ್ದುಲ್ಲಾ ಅಬೂಬಕರ್ ಬೆಳ್ಳಿ ಗೆದ್ದರು, ಇಬ್ಬರು ಭಾರತೀಯರು ತಮ್ಮ ಭುಜದ ಮೇಲೆ ಭಾರತೀಯ ಧ್ವಜವನ್ನು ಸುತ್ತಿಕೊಂಡು ಅಲೆಕ್ಸಾಂಡರ್ ಕ್ರೀಡಾಂಗಣದ ಸುತ್ತಲೂ ಸುತ್ತುವ ಮೂಲಕ ಸ್ಮರಣೀಯ ವಿಜಯವನ್ನು ಆಚರಿಸಿದರು.

ಭಾರತದ ಟೇಬಲ್ ಟೆನಿಸ್ ದಂತಕಥೆ ಅಚಂತಾ ಶರತ್ ಕಮಲ್ ಮತ್ತು ಅಕುಲಾ ಜೋಡಿಯು ಮಲೇಷ್ಯಾದ ಜಾವೆನ್ ಚೂಂಗ್ ಮತ್ತು ಕರೆನ್ ಲೈನ್ ಅವರನ್ನು 11-4, 9-11, 11-5, 11-6 ಅಂತರದಿಂದ ಸೋಲಿಸಿ ಚಿನ್ನದ ಪದಕವನ್ನು ಗೆದ್ದುಕೊಂಡಿತು.

ನಂತರ ಮಹಿಳೆಯರ ಜಾವೆಲಿನ್ ಫೈನಲ್ ನಲ್ಲಿ ಅಣ್ಣು ರಾಣಿ ಅವರು 60.00 ಮೀ ಎಸೆಯುವ ಮೂಲಕ ಕಂಚಿನ ಪದಕವನ್ನು ಗೆದ್ದರು. ಹಾಕಿ ಕ್ರೀಡೆಯಲ್ಲಿ ಮಹಿಳೆಯರ ವಿಭಾಗದಲ್ಲಿ 16 ವರ್ಷಗಳ ನಂತರ ಕಂಚಿನ ಪದಕ ಗೆದ್ದು ಬೀಗಿದೆ.
ಭಾರತ ಮಹಿಳಾ ಕ್ರಿಕೆಟ್ ತಂಡ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತು ಬೆಳ್ಳಿಗೆ ತೃಪ್ತಿಪಟ್ಟಿತು.ಕಿಡಂಬಿ ಶ್ರೀಕಾಂತ್ ತಮ್ಮ ಕಾಮನ್‌ವೆಲ್ತ್ ಗೇಮ್ಸ್ 2022 ಅಭಿಯಾನವನ್ನು ಪುರುಷರ ಸಿಂಗಲ್ಸ್‌ನಲ್ಲಿ ಕಂಚಿನ ಪದಕದೊಂದಿಗೆ ಮುಕ್ತಾಯಗೊಳಿಸಿದರೆ, ಮಹಿಳೆಯರ ಡಬಲ್ಸ್ ಸೆಮಿಫೈನಲ್‌ನಲ್ಲಿ ಟ್ರೀಸಾ ಜಾಲಿ-ಗಾಯತ್ರಿ ಗೋಪಿಚಂದ್ ಕಂಚಿನ ಪದಕವನ್ನು ಪಡೆದರು.

ಸ್ಕ್ವಾಷ್‌ನಲ್ಲಿ ಸೌರವ್ ಘೋಸಲ್ ಮತ್ತು ದೀಪಿಕಾ ಪಳ್ಳಿಕಲ್ ಮಿಶ್ರ ಡಬಲ್ಸ್‌ನಲ್ಲಿ ಕಂಚಿನ ಪದಕ ಪಡೆದರು.
ಇದರೊಂದಿಗೆ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಇದುವರೆಗೆ 18 ಚಿನ್ನ, 15 ಬೆಳ್ಳಿ ಮತ್ತು 22 ಕಂಚಿನ ಪದಕ ಸೇರಿದಂತೆ 55 ಪದಕಗಳನ್ನು ಗೆದ್ದಿದೆ.

ಭಾರತದ ಅಗ್ರಮಾನ್ಯ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧೂ ವನಿತೆಯರ ಬ್ಯಾಡ್ಮಿಂಟನ್ ವಿಭಾಗದಲ್ಲಿ ಫೈನಲ್ ಗೆ ಲಗ್ಗೆ ಹಾಕಿದ್ದಾರೆ. ಪಿ.ವಿ. ಸಿಂಧು ಸಿಂಗಾಪುರದ ಜಿಯಾ ಮಿನ್ ಯೆಯೊ ಅವರನ್ನು 21-19, 21-17 ಸೆಟ್‌ಗಳಿಂದ ಸೋಲಿಸಿ ಮಹಿಳೆಯರ ಸಿಂಗಲ್ಸ್ ಫೈನಲ್‌ಗೆ ಪ್ರವೇಶಿಸಿ ಮೂರನೇ ಸಿಡಬ್ಲ್ಯೂಜಿ ಪದಕವನ್ನು ಖಚಿತಪಡಿಸಿಕೊಂಡಿದ್ದಾರೆ.

ಭಾರತದ ನಂಬರ್ ಒನ್ ಆಟಗಾರ ಲಕ್ಷಯ್ ಸೇನ್ ಕೂಡ ಸಿಂಗಾಪುರದ ಜಿಯಾ ಹೆಂಗ್ ತೆಹ್ ವಿರುದ್ಧ 2-1 ಅಂತರದಲ್ಲಿ ಜಯಗಳಿಸಿ ಪುರುಷರ ಸಿಂಗಲ್ಸ್ ಫೈನಲ್ ತಲುಪಿದ್ದಾರೆ.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.