ವಾಣಿಜ್ಯ ಜಾಹಿರಾತು
ಬರ್ಮಿಂಗ್ಹ್ಯಾಮ್: ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಲಾನ್ ಬೌಲ್ಸ್ ವಿಭಾಗದಲ್ಲಿ ಭಾರತದ ಮಹಿಳೆಯರ ತಂಡ ಮೊದಲ ಬಾರಿ ಚಿನ್ನ ಗೆಲ್ಲುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ.
ಇಂದು ನಡೆದ ಲಾನ್ ಬೌಲ್ಸ್ ಪಂದ್ಯದ ಫೈನಲ್‌ನಲ್ಲಿ ಭಾರತದ ವನಿತಾ ತಂಡ ದಕ್ಷಿಣ ಆಫ್ರಿಕಾವನ್ನು 17-10 ಅಂತರದಿಂದ ಮಣಿಸಿ ಐತಿಹಾಸಿಕ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದೆ. ಇದರೊಂದಿಗೆ ಭಾರತ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಇಂದು ನಾಲ್ಕನೇ ಚಿನ್ನದ ಪದಕವನ್ನು ಜಯಿಸಿದೆ. ಈಗಾಗಲೇ 4 ಚಿನ್ನ, 3 ಬೆಳ್ಳಿ ಹಾಗೂ ಕಂಚು ಸಹಿತ 10 ಪದಕಗಳನ್ನು ಜಯಿಸಿ ಪದಕ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ.
ಸೋಮವಾರ ನಡೆದ ಸೆಮಿ ಫೈನಲ್‌ನಲ್ಲಿ ನ್ಯೂಝಿಲ್ಯಾಂಡ್ ತಂಡವನ್ನು 16-13 ಅಂತರದಿಂದ ಮಣಿಸಿದ್ದ ಭಾರತದ ಮಹಿಳೆಯರ ತಂಡ ಫೋರ್ಸ್ ಮಾದರಿಯಲ್ಲಿ ಮೊದಲ ಬಾರಿ ಫೈನಲ್‌ಗೆ ತಲುಪಿತ್ತು.
ಮಹಿಳೆಯರ ಫೋರ್ಸ್ ತಂಡದಲ್ಲಿ ಲವ್ಲೀ ಚೌಬೆ, ಪಿಂಕಿ, ನಯನಮೋನಿ ಹಾಗೂ ರೂಪಾ ರಾಣಿ ಟರ್ಕಿ ಅವರನ್ನೊಳಗೊಂಡ ಭಾರತ ತಂಡ ಚಿನ್ನದ ಪದಕ ಗೆದ್ದ ಸಾಧನೆ ಮಾಡಿತು.
ವಾಣಿಜ್ಯ ಜಾಹಿರಾತು