ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ಬರೆಯಲು ಕೊರೊನಾ ಸೋಂಕಿತ ವಿದ್ಯಾರ್ಥಿಗಳಿಗೂ ಅವಕಾಶ ಕಲ್ಪಿಸಲಾಗಿದೆ. ಸಿಇಟಿ ಪರೀಕ್ಷೆಗೆ ಪ್ರತ್ಯೇಕೆ ಪ್ರಮಾಣಿತ ಕಾರ್ಯಾಚರಣಾ ವಿಧಾನ ಪ್ರಕಟಿಸಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಮಾಹಿತಿಯನ್ನು ನೀಡಿದೆ.
ಪ್ರಮುಖ ಮಾರ್ಗ ಸೂಚಿ:
ಕೊರೊನಾ ಸೋಂಕಿತ ವಿದ್ಯಾರ್ಥಿ ಅಥವಾ ಕ್ವಾರಂಟೈನ್‍ನಲ್ಲಿ ಇರುವ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅವಕಾಶವಿದೆ. ಕಂಟೈನ್‍ಮೆಂಟ್ ಝೋನ್‍ನಿಂದ ಬರುವ ಸೋಂಕಿತರ ನೇರ, ಪ್ರಾಥಮಿಕ ಅಥವಾ ಹೆಚ್ಚಿನ ಅಪಾಯ ಸಂಪರ್ಕ ಹೊಂದಿರುವ ಅಭ್ಯರ್ಥಿಗಳಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆಗೆ ಅವಕಾಶ ನೀಡಬೇಕು. ಹಾಗೂ ಸೋಂಕು ದೃಢವಾದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ ಇರಬೇಕು ಎಂದು ಸೂಚನೆಯಲ್ಲಿ ತಿಳಿಸಲಾಗಿದೆ.
ಸಿಇಟಿಗೆ ಮೀಸಲು ಇರುವ ಯಾವುದೇ ಪರೀಕ್ಷಾ ಕೇಂದ್ರಗಳನ್ನು ಕ್ವಾರಂಟೈನ್ ಕೇಂದ್ರವನ್ನಾಗಿ ಬಳಸಬಾರದು. ಹೊರರಾಜ್ಯ ಹಾಗು ಹೊರದೇಶಗಳಿಂದ ಬಂದು ಪರೀಕ್ಷೆ ಬರೆಯುವವರ ಕುರಿತು ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಂಡು ಅಂತಹ ವಿದ್ಯಾರ್ಥಿಗಳನ್ನು ಕ್ವಾರಂಟೈನ್‍ಗೆ ಒಳಪಡಿಸುದರಿಂದ ವಿನಾಯಿತಿ ನೀಡಬೇಕು. ಇದರ ಜತೆ ಈಗಾಗಲೇ ಹೇಳಿರುವ ಪ್ರತಿ ಪರೀಕ್ಷಾ ಕೇಂದ್ರವನ್ನು ಪರೀಕ್ಷೆಗೆ ಮೂರು ದಿನಗಳ ಮೊದಲು ಸೋಂಕು ನಿವಾರಕ ದ್ರಾವಣದ ಮೂಲಕ ಸ್ವಚ್ಚಗೊಳಿಸುವುದು, ಪ್ರತಿದಿನವೂ ಆಯಾ ಪರೀಕ್ಷೆಯ ನಂತರ ಪರೀಕ್ಷಾ ಕೇಂದ್ರದ ಎಲ್ಲಾ ಕೊಠಡಿಗಳು, ಪೀಠೋಪಕರಣಗಳನ್ನು ಸ್ಯಾನಿಟೈಸ್ ಮಾಡಿಸುವುದು, ಎರಡು ಗಂಟೆ ಮುಂಚಿತವಾಗಿ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಹಾಜರಿರುವುದು, ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಪ್ರತಿ ಕೊಠಡಿಯಲ್ಲಿ ಗರಿಷ್ಠ 24 ವಿದ್ಯಾರ್ಥಿಗಳನ್ನು ಕೂರಿಸುವುದು ಇತ್ಯಾದಿ ಮಾರ್ಗಸೂಚಿಯನ್ನು ಇಲಾಖೆ ನೀಡಿದೆ.
ಕೊರೊನಾ ಸೋಂಕಿತ ಅಭ್ಯರ್ಥಿಗೂ ಸಿಇಟಿ ಬರೆಯಲು ಅವಕಾಶ
ವಾಣಿಜ್ಯ ಜಾಹಿರಾತು
ವಾಣಿಜ್ಯ ಜಾಹಿರಾತು