ಮಂಗಳೂರು: ಕೇರಳ ರಾಜ್ಯದಲ್ಲಿ ಕೊರೊನಾ ಸೋಂಕು ಪ್ರಕರಣ ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ವಿವಿಧ ಕೆಲಸ-ಕಾರ್ಯಗಳಿಗೆ ಕಾಸರಗೋಡು ಗಡಿ ಭಾಗದಿಂದ ದ.ಕ.ಜಿಲ್ಲೆ ಪ್ರವೇಶಿಸುವವರು ಫೆ.22 ರಿಂದ ಕೊರೊನಾ ನೆಗೆಟಿವ್ ಪ್ರಮಾಣ ಪತ್ರ ಕಡ್ಡಾಯವಾಗಿ ಹೊಂದಿರಬೇಕು ಎಂದು ದ.ಕ.ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹೇಳಿದ್ದಾರೆ.
ಕೇರಳದಿಂದ ಜಿಲ್ಲೆಗೆ ಬರುವವರು 72 ಗಂಟೆಗಳ ಒಳಗಿನ ಆರ್ ಟಿಪಿಸಿಆರ್ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಹೊಂದಿರಬೇಕು. ಇಲ್ಲದಿದ್ದಲ್ಲಿ ಗಡಿಯಿಂದಲೇ ಹಿಂದಿರುಗಬೇಕಾಗುತ್ತದೆ. ಆದರೆ ತುರ್ತುಚಿಕಿತ್ಸೆ ನಿಮಿತ್ತ ಆ್ಯಂಬುಲೆನ್ಸ್ ಮೂಲಕ ದ.ಕ.ಜಿಲ್ಲೆಯ ಆಸ್ಪತ್ರೆಗೆ ಬರುವ ರೋಗಿಗಳು ಹಾಗೂ ಅವರ ಸಂಬಂಧಿಕರಿಗೆ ಕೊರೊನಾ ನೆಗೆಟಿವ್ ಪ್ರಮಾಣ ಪತ್ರವಿಲ್ಲದೆ ಅವಕಾಶ ನೀಡಿದರೂ, ಅವರು ಆಯಾ ಆಸ್ಪತ್ರೆಗಳಲ್ಲಿ ಕಡ್ಡಾಯವಾಗಿ ಕೋವಿಡ್ ತಪಾಸಣೆಗೆ ಒಳಗಾಗಬೇಕು ಎಂದಿದ್ದಾರೆ.
ಕೇರಳ ರಾಜ್ಯದಿಂದ ಉದ್ಯೋಗ, ಶಾಲಾ-ಕಾಲೇಜುಗಳಿಗೆಂದು ಬರುವವರು ಪ್ರತಿ 15 ದಿನಗಳಿಗೊಮ್ಮೆ ಆರ್ ಟಿಪಿಸಿಆರ್ ಪರೀಕ್ಷೆ ಮಾಡಿಸಬೇಕು. ಅಲ್ಲದೆ ಜಿಲ್ಲೆಯ ಶಾಲಾ-ಕಾಲೇಜು, ಇಂಜಿನಿಯರಿಂಗ್, ವೈದ್ಯಕೀಯ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿ ಪ್ರತಿನಿತ್ಯ ಗಡಿ ಭಾಗಗಳಲ್ಲಿ ಸಂಚರಿಸುವ ಕೇರಳ ಮೂಲದ ವಿದ್ಯಾರ್ಥಿಗಳ ಪಟ್ಟಿಯನ್ನು ಆಯಾ ವಿದ್ಯಾಸಂಸ್ಥೆಗಳ ಮುಖ್ಯಸ್ಥರು ಆರೋಗ್ಯ ಇಲಾಖೆಗೆ ನೀಡಬೇಕು. ದ.ಕ.ಜಿಲ್ಲೆಯ ಲಾಡ್ಜ್ ಗಳಲ್ಲಿ ಕೇರಳದಿಂದ ಬಂದವರು ತಂಗುವವರಿದ್ದರೆ 72ಗಂಟೆಗಳ ಆರ್ ಟಿಪಿಸಿಆರ್ ವರದಿ ಪರಿಶೀಲಿಸಿ ಕೊಠಡಿ ನೀಡಬೇಕು ಎಂದು ಜಿಲ್ಲಾಧಿಕಾರಿ ರಾಜೇಂದ್ರ ಹೇಳಿದ್ದಾರೆ.
Home ಸುದ್ದಿ ಭಂಡಾರ ಕರಾವಳಿ ಕೇರಳದಿಂದ ದ.ಕ.ಜಿಲ್ಲೆಗೆ ಬರುವವರಿಗೆ ಫೆ.22 ರಿಂದ ಕೊರೊನಾ ನೆಗೆಟಿವ್ ಪ್ರಮಾಣ ಪತ್ರ ಕಡ್ಡಾಯ
ಕೇರಳದಿಂದ ದ.ಕ.ಜಿಲ್ಲೆಗೆ ಬರುವವರಿಗೆ ಫೆ.22 ರಿಂದ ಕೊರೊನಾ ನೆಗೆಟಿವ್ ಪ್ರಮಾಣ ಪತ್ರ ಕಡ್ಡಾಯ
ವಾಣಿಜ್ಯ ಜಾಹಿರಾತು
ವಾಣಿಜ್ಯ ಜಾಹಿರಾತು