ವಾಣಿಜ್ಯ ಜಾಹಿರಾತು
ಮಂಗಳೂರು: ಸರ್ಕಾರಿ ಜಾಗದಲ್ಲಿರುವ ಆಟದ ಮೈದಾನ ಕಬಳಿಸುವ ಯತ್ನ ನಡೆದಿದೆ ಎಂದ ಪಚ್ಚನಾಡಿಯ ಸ್ಥಳೀಯರು ಮೇಲೆ ಕಾರ್ಪೋರೇಟರ್ ಪತಿ ದಬಾಯಿಸಿರುವ ಘಟನೆ ಮಂಗಳೂರು ಹೊರವಲಯದ ಪಚ್ಚನಾಡಿಯ ಕಾರ್ಮಿಕ ನಗರದಲ್ಲಿ ನಡೆದಿದೆ.
ಪಚ್ಚನಾಡಿ ಕಾರ್ಪೊರೇಟರ್ ಸಂಗೀತ ನಾಯಕ್ ಪತಿ ಮತ್ತು ಸ್ಥಳೀಯರ ಮಧ್ಯೆ ಪರಸ್ಪರ ವಾಗ್ವಾದ ನಡೆದಿದ್ದು ಇದೀಗ ಇದರ ವಿಡಿಯೋ ವೈರಲ್ ಆಗಿದೆ.
ಎರಡೆಕರೆ ಸರ್ಕಾರಿ ಜಾಗದಲ್ಲಿ ಆಟದ ಮೈದಾನ ಮಾಡಲಾಗಿದೆ. ಆದರೆ ಇದೀಗ ಆ ಜಾಗದಲ್ಲಿ ಏಕಾಏಕಿ ಅಕ್ರಮ ಮನೆ ನಿರ್ಮಾಣಕ್ಕೆ ಯತ್ನಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಸರ್ಕಾರಿ ಜಾಗ ಕಬಳಿಸುವ ಯತ್ನಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದು, ಕಾಮಗಾರಿಗೆ ತಡೆಯೊಡ್ಡಿದ್ದಾರೆ ಎನ್ನಲಾಗುತ್ತಿದೆ.
ಈ ವೇಎ ಸ್ಥಳಕ್ಕಾಗಮಿಸಿದ ಕಾರ್ಪೊರೇಟರ್ ಪತಿ ಸ್ಥಳೀಯರೊಂದಿಗೆ ಗಲಾಟೆ ಮಾಡಿದ್ದಾರೆ. ಬಳಿಕ ಪರಿಸ್ಥಿತಿ ನಿಯಂತ್ರಿಸಿ ಮೈದಾನವನ್ನು ಉಳಿಸುವ ಭರವಸೆಯನ್ನು ಕಾರ್ಪೋರೇಟರ್ ಸಂಗೀತ ನೀಡಿದರು. ಮನೆ ನಿರ್ಮಾಣವಾಗುವ ವಿಷಯ ನನ್ನ ಗಮನಕ್ಕೆ ಬಂದಿಲ್ಲ ಎಂದು ಹೇಳಿದ್ದಾರೆ.
ವಾಣಿಜ್ಯ ಜಾಹಿರಾತು