ಮಳೆಗಾಲದಲ್ಲಿ ಶೀತ-ಕೆಮ್ಮು ಮತ್ತು ನೆಗಡಿ ಸಾಮಾನ್ಯವಾಗಿದೆ. ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವವರು ಮಳೆಗಾಲದಲ್ಲಿ ವೈರಲ್ ಸೋಂಕಿನ ಅಪಾಯವನ್ನು ಎದುರಿಸಬೇಕಾಗುತ್ತದೆ.
ಆದ್ದರಿಂದ, ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಆರೋಗ್ಯಕರ ಆಹಾರ ಮತ್ತು ಪಾನೀಯಗಳನ್ನು ಆಹಾರದಲ್ಲಿ ಸೇವಿಸುವುದು ತುಂಬಾ ಮುಖ್ಯ. ಇಂತಹ ಪರಿಸ್ಥಿತಿಯಲ್ಲಿ, ತುಳಸಿಯ ಈ ಕಷಾಯ ನಿಮಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇಂದು ತುಳಸಿ-ಅರಿಶಿಣದ ಕಷಾಯವನ್ನು ನಾವು ನಿಮಗಾಗಿ ತಂದಿದ್ದೇವೆ, ಅದರ ಸಹಾಯದಿಂದ ನೀವು ರೋಗನಿರೋಧಕ ಶಕ್ತಿಯನ್ನು ಬಲಪಡಿಸಿಕೊಳ್ಳಬಹುದು.
ತುಳಸಿ ಕಷಾಯ ಮಾಡಲು ಬೇಕಾದ ಪದಾರ್ಥಗಳು
* 3 ರಿಂದ 4 ಲವಂಗ
* 2 ರಿಂದ 3 ಟೇಬಲ್ ಸ್ಪೊನ್ ಜೇನುತುಪ್ಪ
* 1ರಿಂದ 2 ದಾಲ್ಚಿನ್ನಿ ತುಂಡುಗಳು
* 8 ರಿಂದ 10 ತುಳಸಿ ಎಲೆಗಳು
* ಅರ್ಧ ಚಮಚ ಅರಿಶಿನ ಪುಡಿ
ತುಳಸಿ ಕಷಾಯ ತಯಾರಿಸುವುದು ಹೇಗೆ?
ಒಂದು ಬಾಣಲೆಗೆ 1 ಕಪ್ ನೀರನ್ನು ಹಾಕಿ, ನಂತರ ತುಳಸಿ ಎಲೆಗಳು, ಅರಿಶಿನ ಪುಡಿ, ಲವಂಗ ಮತ್ತು ದಾಲ್ಚಿನ್ನಿ ಹಾಕಿ. ಕನಿಷ್ಠ 30 ನಿಮಿಷಗಳ ಕಾಲ ಅದನ್ನು ಕುದಿಯಲು ಬಿಡಿ.
ನಂತರ ಈ ನೀರನ್ನು ಫಿಲ್ಟರ್ ಮಾಡಿ ರುಚಿಗೆ ತಕ್ಕಷ್ಟು ಜೇನುತುಪ್ಪ ಸೇರಿಸಿ ತಣ್ಣಗಾದ ನಂತರ ಕುಡಿಯಿರಿ. ನೀವು ಈ ಕಷಾಯವನ್ನು ದಿನಕ್ಕೆ 2 ರಿಂದ 3 ಬಾರಿ ಮಾಡಿ ಕುಡಿಯಬಹುದು.
ತುಳಸಿ ಕಷಾಯವನ್ನು ಕುಡಿಯುವುದರಿಂದ ಅದ್ಭುತ ಪ್ರಯೋಜನಗಳು
1. ಶೀತ ಮತ್ತು ಗಂಟಲು ನೋವನ್ನು ನಿವಾರಿಸುತ್ತದೆ.
2. ಇದರ ಸೇವನೆಯಿಂದಾಗಿ, ಸಕ್ಕರೆ ಮಟ್ಟವು ನಿಯಂತ್ರಣದಲ್ಲಿರುತ್ತದೆ.
3. ದೇಹದ ವಿಷಕಾರಿ ವಸ್ತುಗಳು ಹೊರಬರುತ್ತವೆ.
4. ತುಳಸಿ ಕಷಾಯವು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.